ಕಂಬಳಬೆಟ್ಟು ನಿವಾಸಿ ಡಾ. ಅಬ್ದುಲ್ ಬಶೀರ್ ಮಾಲಕತ್ವದ ಹಾಸನದ ಜನಪ್ರೀಯ ಆಸ್ಪತ್ರೆಗೆ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ

0

ವಿಟ್ಲ: ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ನಿವಾಸಿ ಅಬ್ದುಲ್ ಬಶೀರ್ ವಿ.ಕೆ.ರವರ ಮಾಲಕತ್ವದ ಹಾಸನದಲ್ಲಿರುವ ಜನಪ್ರಿಯ ಆಸ್ಪತ್ರೆಗೆ ಭಾರತದ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಯೋಜನೆ ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ಜನತೆಗೆ ಅತ್ಯಂತ ಹೆಚ್ಚಿನ ಸೌಲಭ್ಯವನ್ನು ಒದಗಿಸಿ ಕೊಟ್ಟಿರುವುದಕ್ಕಾಗಿ ಹಾಸನ ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ ರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯ, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ, ಹಾಸನ ಜಿಲ್ಲಾಧಿಕಾರಿ ಎಂ.ಯಸ್. ಅರ್ಚನಾ ಸಹಿತ ಹಲವರು ಗಣ್ಯರು ಉಪಸ್ಥಿತರಿದ್ದರು.

ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಯೋಜನೆ ಅಡಿಯಲ್ಲಿ ಜನಪ್ರೀಯ ಆಸ್ಪತ್ರೆಯಲ್ಲಿ ನರರೋಗ ಶಸ್ತ್ರ ಚಿಕಿತ್ಸೆ, ಕೀಲು ಮತ್ತು ಮೂಳೆ ಶಸ್ತ್ರ ಚಿಕಿತ್ಸೆ, ಹೃದಯ ಶಸ್ತ್ರ ಚಿಕಿತ್ಸೆ, ಕಿಡ್ನಿಗೆ ಸಂಬಂಧಪಟ್ಟ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ ಶಸ್ತ್ರಚಿಕಿತ್ಸೆ, ಐಸಿಯು ಚಿಕಿತ್ಸೆ ಸಹಿತ ಇತರ ಸಾಮಾನ್ಯ ಚಿಕಿತ್ಸೆಗಳನ್ನು ನಗದು ರಹಿತ ಮಾಡಿ ಕೊಡಲಾಗಿದೆ.

ಸಾಮಾಜಿಕವಾಗಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಡಾ‌. ಅಬ್ದುಲ್ ಬಶೀರ್ ವಿ.ಕೆ.ರವರು ಬಡರೋಗಿಗಳಿಗೆ ತನ್ನಿಂದಾದ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಮೂಳೆರೋಗ ತಜ್ಞರಾಗಿರುವ ಅವರು ಅತ್ಯಂತ ಕ್ಲಿಸ್ಟಕರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿ ಜನರಿಂದ ಪ್ರಶಂಸೆಗೆ ಪಾತ್ರಾರಾಗಿದ್ದಾರೆ. ಡಾ.ಅಬ್ದುಲ್ ಬಶೀರ್ ರವರ ಸಾಮಾಜಿಕ‌ ಕಳಕಳಿಯ ಸೇವೆಗಾಗಿ ಈ ವರೆಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ.

ಅದೇ ರೀತಿ ಡಾ.ಅಬ್ದುಲ್ ಬಶೀರ್ ರವರು ತನ್ನ ಹುಟ್ಟೂರಿನಲ್ಲಿ ಇತರ ಮಹಾನಗರದಲ್ಲಿ ಸಿಗುವ ಶಿಕ್ಷಣ ಇಲ್ಲಿನ ಮಕ್ಕಳಿಗೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಕಂಬಳಬೆಟ್ಟುವಿನಲ್ಲಿ ಜನಪ್ರೀಯ ಸೆಂಟ್ರಲ್ ಸ್ಕೂಲ್ ಎಂಬ ವಿದ್ಯಾಸಂಸ್ಥೆಯನ್ನು ತೆರೆದು ಅತೀ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಈ ಭಾಗದ ಜನರಲ್ಲಿ ಆಶಾಭಾವನೆ ಯನ್ನು ಮೂಡಿಸಿದೆ‌.

LEAVE A REPLY

Please enter your comment!
Please enter your name here