ಪುತ್ತೂರು: ಜ.27 ರಂದು ಪುತ್ತೂರು ನಗರಸಭೆಗೆ ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಮ್ ಆರ್ ಭೇಟಿ ನೀಡಿ ನೂತನ ಕಡತಗಳ ಕೊಠಡಿ ಪರಿಶೀಲನೆ ಮಾಡಿದ್ದಾರೆ.
ದ.ಕ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ವಿವಿಧ ಇಲಾಖೆಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿಟ್ಟುಕೊಂಡಂತೆ ಪ್ರತಿ ಶುಕ್ರವಾರ ಪುತ್ತೂರಿಗೆ ಆಗಮಿಸುವ ಸಂದರ್ಭ ಪುತ್ತೂರು ನಗರಸಭೆಗೂ ಭೇಟಿ ನೀಡಿದ್ದಾರೆ. ಕಚೇರಿಯೊಳಗೆ ತೆರಳಿ ಬಳಿಕ ಕಟ್ಟಡದ ಮೇಲಂತಸ್ತಿನಲ್ಲಿರುವ ಕಡತಗಳ ಕೊಠಡಿಗೆ ತೆರಳಿ ನಗರಸಭೆ ಪೌರಾಯುಕ್ತರಿಂದ ಮಾಹಿತಿ ಪಡೆದುಕೊಂಡರು.