ಶಿಕ್ಷಕಿ ಶಾಂತಾ ಪುತ್ತೂರುರವರಿಗೆ ರಾಜ್ಯ ಮಟ್ಟದ ಆದಿಗ್ರಾಮೋತ್ಸವ ಯುವಸಿರಿ ಗೌರವ

0

ಪುತ್ತೂರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಹಾಗೂ ಆದಿಗ್ರಾಮೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಅಜೆಕಾರು ಸೆಕ್ರೆಡ್ ಹಾರ್ಟ್ ಚರ್ಚ್ ಹಾಲ್, ಸ್ವಾಮಿ ಬೊಬ್ಬರ್ಯ ವೇದಿಕೆಯಲ್ಲಿ ನಡೆದ 24ನೇ ಆದಿಗ್ರಾಮೋತ್ಸವ ಹಾಗೂ 4ನೇ ಗ್ರಾಮಸಾಹಿತ್ಯ ಸಮ್ಮೇಳನದಲ್ಲಿ ಕಬಕ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಶಾಂತಾ ಪುತ್ತೂರುರವರಿಗೆ ಶಿಕ್ಷಣ ಹಾಗೂ ಸಂಘಟನೆಗಾಗಿ ರಾಜ್ಯ ಮಟ್ಟದ ಆದಿಗ್ರಾಮೋತ್ಸವ ಯುವಸಿರಿ ಗೌರವ-2022 ನೀಡಿ ಗೌರವಿಸಲಾಯಿತು. ಇವರು ಬೊಳುವಾರು ನಿವಾಸಿಯಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪತ್ರಕರ್ತ, ಸಂಘಟಕ ಡಾ.ಶೇಖರ್ ಅಜೆಕಾರು, ಸಮ್ಮೇಳನಾಧ್ಯಕ್ಷೆ ಕವಯಿತ್ರಿ ರೇಷ್ಮಾ ಶೆಟ್ಟಿ ಗೊರೂರು, ಯಕ್ಷಪೋಷಕ ವಿಜಯ್ ಶೆಟ್ಟಿ, ಅರುಣ್ ಶೆಟ್ಟಿಗಾರ್, ಬಾಲಪ್ರತಿಭೆ ಸುನಿಧಿ ಅಜೆಕಾರು, ಸಾಹಿತಿ ಜಯಾನಂದ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here