ಕ್ಯಾಂಪ್ಕೊ ಚಾಕೋಲೇಟ್‌ ಫ್ಯಾಕ್ಟರಿ ಎಂಪ್ಲಾಯಿಸ್‌ ಯೂನಿಯನ್‌ ವಾರ್ಷಿಕ ಮಹಾಸಭೆ-2023

0

ಪುತ್ತೂರು :ಕ್ಯಾಂಪ್ಕೊ ಚಾಕೋಲೇಟ್‌ ಫ್ಯಾಕ್ಟರಿ ಎಂಪ್ಲಾಯಿಸ್‌ ಯೂನಿಯನ್ನಿನ 2022 ನೇ ಸಾಲಿನ ವಾರ್ಷಿಕ ಮಹಾಸಭೆಯು ಪುತ್ತೂರು ಲಯನ್ಸ್‌ ಕ್ಲಬ್‌ ಸಭಾಭವನದಲ್ಲಿ ಜ.26ರಂದು ನಡೆಯಿತು.

ಯೂನಿಯನ್ನಿನ ಅಧ್ಯಕ್ಷ ತೀರ್ಥರಾಮ ಎಸ್‌ ವಳಂಬಿ, ಮುಖ್ಯ ಅತಿಥಿ ಯೂನಿಯನ್ನಿನ ಗೌರವಾಧ್ಯಕ್ಷ ಸುರೇಶ್ಚಂದ್ರಶೆಟ್ಟಿ ಮತ್ತು ರಘುಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುರೇಶ್ಚಂದ್ರ ಶೆಟ್ಟಿ  ಸಂಘಟನೆಯ ಪ್ರಾಮುಖ್ಯತೆಯನ್ನು ವಿವರಿಸಿದರು.ಕಾರ್ಯದರ್ಶಿ ನವೀನ್‌ ಕುಮಾರ್‌ ವರದಿ ವಾಚಿಸಿದರು. ಕೋಶಾಧಿಕಾರಿ ಸುನೀಲ್‌ ಕುಮಾರ್‌ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಯೂನಿಯನ್‌ ಉಪಾಧ್ಯಕ್ಷ  ಸುಬ್ರಾಸ್‌ ಆರ್‌ ಎನ್‌ , ಉಪಕಾರ್ಯದರ್ಶಿ ಮಹೇಶ್‌ ಪಿ, ಪದಾಧಿಕಾರಿಗಳಾದ ನಿರಂಜನ್‌ ಎಮ್‌ ಎಸ್‌, ಶೇಷಪ್ಪ ನಾಯ್ಕ್‌, ಪದ್ಮನಾಭ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ನಿವೃತ್ತ ನೌಕರರಾದ ರವೀಂದ್ರ ಎ, ಕೆ ಚಂದ್ರ ಶೇಖರ್‌ ರಾವ್‌, ಜಗದೀಶ ಆಚಾರ್ಯ, ರಮೇಶ್‌ ಗೌಡ, ಗಣೇಶ, ಮೋನಪ್ಪ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. 

ಖಾದರ್‌ ಕಾರ್ಯಕ್ರಮ ನಿರೂಪಿಸಿದರು. ಸಬ್ರಾಸ್‌ ವಂದಿಸಿದಿಸಿದರು.

LEAVE A REPLY

Please enter your comment!
Please enter your name here