ಪುತ್ತೂರು ಹಾಸ್ಪಿಟಲ್ ಅಸೋಸಿಯೇಶನ್‌ನಿಂದ ’ಹೆಚ್‌ಪಿಎಲ್’ ಹೆಲ್ತ್ ಟ್ರೋಪಿ ಕ್ರಿಕೆಟ್ ಪಂದ್ಯಾಟ: 5 ಆಸ್ಪತ್ರೆಗಳ ನಡುವೆ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ

0

ಪುತ್ತೂರು: ಪುತ್ತೂರು ಹಾಸ್ಪಿಟಲ್ ಅಸೋಸಿಯೇಶನ್ ವತಿಯಿಂದ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯುವ ಹಾಸ್ಪಿಟಲ್ ಪ್ರೀಮಿಯರ್ ಲೀಗ್ (ಹೆಚ್‌ಪಿಎಲ್) ಹೆಲ್ತ್ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಪುತ್ತೂರು ಹಾಸ್ಪಿಟಲ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಡಾ. ಭಾಸ್ಕರ್ ಎಸ್ ಅವರು ಉದ್ಘಾಟಿಸಿದರು.


ಆಸ್ಪತ್ರೆಗಳ ಸಿಬ್ಬಂದಿಗಳಲ್ಲೂ ಕೂಡಾ ಸೌಹಾರ್ದತೆ ಬೆಳೆಸಲು ಕ್ರೀಡೆ:
ಪಂದ್ಯಾಟವನ್ನು ಉದ್ಘಾಟಿಸಿದ ಹಾಸ್ಪಿಟಲ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿರುವ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್ ಅವರು ಮಾತನಾಡಿ ಈಗಿನ ಜಗತ್ತಿನ ಒಂದು ಸನ್ನಿವೇಶದಲ್ಲಿ ಎಲ್ಲಾ ಉದ್ದಿಮೆಗಳಲ್ಲಿ ಕೂಡಾ ಒಕ್ಕೂಟಗಳಿದ್ದು ಅದರ ಮೂಲಕ ಸಮಸ್ಯ ಬಗೆಹರಿಬಹುದೆಂದು ಕಂಡು ಕೊಂಡ ಸತ್ಯ. ಈ ನಿಟ್ಟಿನಲ್ಲಿ ಪುತ್ತೂರ ಹಾಸ್ಪಿಟಲ್ ಅಸೋಸಿಯೇಶನ್ ಕೂಡಾ ಆರಂಭಗೊಂಡಿದೆ. ಈ ಭಾರಿ ಈ ಅಸೋಸಿಯೇಶನ್ ಮೂಲಕ ಆಸ್ಪತ್ರೆಯ ಸಿಬ್ಬಂದಿಗಳಿಗೂ ಸೌಹಾರ್ದಯುತವಾಗಿ ಭಾಗವಹಿಸುವ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಿಕೆಟ್ ಪಂದ್ಯಾಟ ಏರ್ಪಡಿಲಾಗಿದೆ. ಕ್ರೀಡೆ ನಮಗೆ ಸೋಲುವುದನ್ನು ಕಲಿಸಿಕೊಡುತ್ತದೆ. ಗೆಲುವು ಇದ್ದರೂ ಸೋತರೆ ಮತ್ತೆ ಹೇಗೆ ಗೆಲುವು ಸಾಧಿಸ ಬಹುದೆಂಬ ಛಲವನ್ನು ಕ್ರೀಡೆ ಕಲಿಸಿಕೊಡುತ್ತದೆ. ಅದೇ ರೀತಿ ಜೀವನದಲ್ಲಿ ಕೂಡಾ ನಾವು ಸೋತ ಕೂಡಲೆ ನಿರಾಶರಾಗಬೇಕಾಗಿಲ್ಲ. ಸೋಲನ್ನೇ ಗೆಲುವಿನ ಮೆಟ್ಟಲನ್ನಾಗಿ ಮಾಡಬೇಕೆಂದು ಹೇಳಿದರು.


ಸೋಲೇ ಗೆಲುವಿನ ಸೋಪಾನವಾದರೂ ಪಂದ್ಯಾಟದಲ್ಲಿ ಗೆಲುವಿನ ಗುರಿಯಿರಲಿ:
ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ. ಎಸ್.ಎಸ್.ಜ್ಯೋಶಿ ಅವರು ಮಾತನಾಡಿ ಪುತ್ತೂರು ವೈದ್ಯರು ಮತ್ತು ಮಂಗಳೂರಿನ ವೈದ್ಯರ ನಡುವೆ ಕ್ರಿಕೆಟ್ ಪಂದ್ಯಾಟ ಬಹಳ ವರ್ಷಗಳ ಹಿಂದೆ ನಡೆದಿತ್ತು. ಅದಾದ ಬಳಿಕ ಕೆಲವೊಂದು ಪಂದ್ಯಾಟ ನಡೆದಿದೆ. ಆದರೆ ಆಸ್ಪತ್ರೆ ಅಸೋಸಿಯೇಶನ್ ಮೂಲಕ ಆಸ್ಪತ್ರೆಯ ಸಿಬ್ಬಂದಿಗಳಿಗೂ ಇಂತಹ ಪಂದ್ಯಾಟ ಏರ್ಪಡಿಸಿರುವುದು ಉತ್ತಮ ಕೆಲಸ. ಇಲ್ಲಿ ಸೋಲೇ ಗೆಲುವಿನ ಸೋಪಾನವಾದರೂ ಪಂದ್ಯಾಟದಲ್ಲಿ ಗೆಲುವಿನ ಗುರಿಯಿರಲಿ ಎಂದರು. ವೇದಿಕೆಯಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಅಭೀಷ್, ಮಹಾವೀರ ಆಸ್ಪತ್ರೆ ಡಾ. ಸಾಯಿ ಉಪಸ್ಥಿತರಿದ್ದರು. ರಜಾಕ್ ಬಪ್ಪಳಿಗೆ ಸ್ವಾಗತಿಸಿ, ಅನ್ಸಾರ್ ಕಾರ್ಯಕ್ರಮ ನಿರೂಪಿಸಿದರು. ಸಲೀಂ ಬಪ್ಪಳಿಗೆ ಮತ್ತು ಗಣೇಶ್ ತೀರ್ಪುಗಾರರಾಗಿ ಸಹಕರಿಸಿದರು. ತೀರ್ತೇಶ್ ಸುಳ್ಯ ವೀಕ್ಷಕ ವಿವರಣೆ ಮಾಡಿದರು. ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಸಂತೋಷ್ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


5 ಆಸ್ಪತ್ರೆಗಳ ನಡುವೆ ಕ್ರಿಕೆಟ್
ಪುತ್ತೂರಿನ ಪ್ರತಿಷ್ಠಿತ ೫ ಆಸ್ಪತ್ರೆಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆದಿದ್ದು, ಪುತ್ತೂರು ಸಿಟಿ ಆಸ್ಪತ್ರೆ, ಮಹಾವೀರ ಆಸ್ಪತ್ರೆ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳ ನಡುವೆ ಪಂದ್ಯಾಟ ನಡೆಯುತ್ತಿದೆ.

LEAVE A REPLY

Please enter your comment!
Please enter your name here