ಈ ಬಾರಿಯೂ ವಿಜ್ರಂಭಣೆಯಿಂದ ನಡೆದಿದೆ – ಎನ್ ಚಂದ್ರಹಾಸ ಶೆಟ್ಟಿ
ಪುತ್ತೂರು: ಜ.28ರಂದು ಬೆಳಿಗ್ಗೆ ಆರಂಭಗೊಂಡಿದ್ದ 30ನೇ ವರ್ಷದ ಪುತ್ತೂರಿನ ಐತಿಹಾಸಿಕ ಕೋಟಿ ಚೆನ್ನಯ ಜೋಡುಕರೆ ಕಂಬಳವು ಜ.29ರಂದು ರಾತ್ರಿ ಸಂಪನ್ನಗೊಂಡಿದೆ. ಎರಡು ಹಗಲು, ಎರಡು ರಾತ್ರಿ ಕಂಬಳ ನಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಒಟ್ಟು 165 ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಆರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಅಂತಿಮ ಸ್ಪರ್ಧೆ ರಾತ್ರಿ ಗಂಟೆ. 9.35ಕ್ಕೆ ಆರಂಭಗೊಂಡು ರಾತ್ರಿ ಗಂಟೆ 10.42ಕ್ಕೆ ಪೂರ್ಣಗೊಂಡಿತ್ತು. ರಾತ್ರಿ ಗಂಟೆ 11.35ಕ್ಕೆ ಬಹುಮಾನ ವಿತರಣೆ ಸಮಾರಂಭವು ಸಂಪನ್ನಗೊಂಡಿತ್ತು.
ಈ ಬಾರಿಯೂ ವಿಜ್ರಂಭಣೆಯಿಂದ ನಡೆದಿದೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುವ ಕೋಟಿ ಚೆನ್ನಯ ಕಂಬಳವನ್ನು ದಿ ಜಯಂತ ರೈ, ದಿ ಮುತ್ತಪ್ಪ ರೈ ಅವರು ಮುನ್ನಡೆಸಿದ್ದರು. ಈ ವರ್ಷವೂ ಕಂಬಳ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಎಲ್ಲಾದರೂ ತಪ್ಪಾಗಿದ್ದರೆ ದೇವರಿಂದ ಕ್ಷಮೆ ಇರಲಿ. ಮಹಾಲಿಂಗೇಶ್ವರ ದಯೆ, ಊರಿನ ಎಲ್ಲಾ ಧರ್ಮದವರ ಸಹಕಾರದಿಂದ ಕಂಬಳ ಯಶಸ್ವಿಯಾಗಿ ನಡೆದಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರು ಹೇಳಿದರು.
ಕಂಬಳದ ಸಮಾರೋಪ ಸಮಾರಂಭದ ಆರಂಭದಲ್ಲಿ ತೀರ್ಪುಗಾರರಿಗೆ ಮತ್ತು ಗಂತ್‌ನಲ್ಲಿ ಸಹಕರಿಸಿದವರು, ಆರೋಗ್ಯ ಇಲಾಖೆ, ಶಾಮಿಯಾನ, ಬ್ಯಾಂಡ್ ಸೆಟ್ ಸಹಿತ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಕರ್ಣಾಟಕ ಬ್ಯಾಂಕ್‌ನ ಪೂರ್ಣಪ್ರಜ್ಞಾ, ನ್ಯಾಯವಾದಿಗಳಾದ ಜಗನ್ನಾಥ ರೈ, ಕುಂಬ್ರ ದುರ್ಗಾಪ್ರಸಾದ್ ರೈ, ಕಂಬಳ ಸಮಿತಿ ಉಪಾಧ್ಯಕ್ಷ ಶಿವರಾಮ ಆಳ್ವ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ರಂಜಿತ್ ಬಂಗೇರ, ಅಭಿಷೇಕ್ ಬೆಳ್ಳಿಪ್ಪಾಡಿ, ಶಾಮಿಯಾನ ಮಾಲಕರ ಆರ್.ಕೆ. ಭಟ್, ಚಾರ್ಟಟೆಡ್ ಅಕೌಂಟೆಂಟ್ ಪೃಥ್ವಿರಾಜ್, ರೋಶನ್ ರೈ ಬನ್ನೂರು, ಬಾಲಕೃಷ್ಣ ಆಳ್ವ, ಕೆದಂಬಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜಯಪ್ರಕಾಶ್ ಬದಿನಾರ್, ಗಂಗಾಧರ್ ಶೆಟ್ಟಿ, ಗಂಗಾಧರ ಪೂಜಾರಿ ಪೊಳಲಿ, ಪೂರ್ಣಜೀತ್ ಬೆಳ್ಳಿಪ್ಪಾಡಿ, ಇಡ್ಕಿದು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಿತ್ತೂರು, ಕೋಡಿಂಬಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಮುರಳೀಧರ್ ರೈ, ಕೇಶವ ಪಡೀಲ್, ಸ್ಪೋರ್ಟ್ಸ್‌ವರ್ಲ್ಡ್‌ನ ರಜಾಕ್, ಭಾಗೇಶ್ ರೈ, ಪ್ರವೀಣ್ ಶೆಟ್ಟಿ, ಪ್ರಹ್ಲಾದ್, ಪೂರ್ಣೇಶ್, ನ್ಯಾಯವಾದಿ ದುರ್ಗಾಪ್ರಸಾದ್, ಕೃಷ್ಣಪ್ರಸಾದ್ ಆಳ್ವ, ಸುದರ್ಶನ್ ನಾಯ್ಕ್, ವಸಂತ ಕುಮಾರ್ ರೈ, ಸುದೇಶ್ ಚಿಕ್ಕಪುತ್ತೂರು, ಕೃಷ್ಣಪ್ರಸಾದ್ ಆಳ್ವ, ನಂದಿಕೂರು ಕಂಬಳದ ಅಧ್ಯಕ್ಷ ಸುಕುಮಾರ್ ಶೆಟ್ಟಿ ಸಹಿತ ಹಲವಾರು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಣಗಳು ಅಂತಿಮ ಸ್ಪರ್ಧೆಗೆ ಕರೆಗೆ ಇಳಿಯುವ ಸಂದರ್ಭ ಹುಲಿ ಕುಣಿತ ಪ್ರದರ್ಶಿಸಿದ ಪ್ರಣಯ್ ಅವರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಕಂಬಳ ಸಮಿತಿಯ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ ವಂದಿಸಿದರು.
ಕಂಬಳದ ಪ್ರಧಾನ ತೀರ್ಪುಗಾರ ಯಂ.ರಾಜೀವ ಶೆಟ್ಟಿ ಎಡ್ತೂರು ಬಹುಮಾನ ವಿತರಣೆಯ ಕಾರ್ಯಕ್ರಮ ನಿರ್ವಹಿಸಿದರು. ಕಂಬಳದಲ್ಲಿ ಪ್ರಧಾನ ತೀರ್ಪುಗಾರರಾಗಿ ಕೆ.ಗುಣಪಾಲ ಕಡಂಬ ಮೂಡಬಿದ್ರೆ ಮತ್ತು ಯಂ.ರಾಜೀವ ಶೆಟ್ಟಿ ಎಡ್ತೂರು, ಯಂ ಸುಧಾಕರ್ ಶೆಟ್ಟಿ ಮುಗೆರೋಡಿ ಅವರು ಭಾಗವಹಿಸಿದ್ದರು. ಸುರೇಶ್ ಕೆ.ಪೂಜಾರಿ ರೆಂಜಾಳ ತೀರ್ಪುಗಾರರ ಸಂಚಾಲಕರಾಗಿದ್ದರು. ತೀರ್ಪುಗಾರರಾಗಿ ನಿರಂಜನ ರೈ ಮಠಂತಬೆಟ್ಟು, ರವೀಂದ್ರ ಕುಮಾರ್ ಕುಕ್ಕಂದೂರು, ಎನ್ ವಿಜಯ ಕುಮರ್ ಕಂಗಿನಮನೆ, ಸತೀಶ ಕುಮಾರ್ ಹೊಸ್ಮಾರು, ವೀಡಿಯೋ ತೀರ್ಪುಗಾರರಾಗಿ ಜಿಲ್ಲಾ ಸಮಿತಿಯ ಉಸ್ತುವಾರಿಗಳು, ಕೋಣಗಳನ್ನು ಬಿಡಿಸುವಲ್ಲಿ ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ಸುಧೀಶ್ ಕುಮಾರ್ ಆರಿಗ ಬಂಗಾಡಿ, ಅಜಿತ್ ಕುಮಾರ್ ಜೈನ್, ಜನಾರ್ದನ ನಾಯ್ಕ ಕರ್ಪೆ, ವಿಶ್ವನಾಥ ಪ್ರಭು ಶಿರ್ವ, ಕೋಣಗಳನ್ನು ಬಿಡಿಸುವಲ್ಲಿ ಪ್ರಕಟಣೆಗಾರರಾದ ಶೀನ ಶೆಟ್ಟಿ ವೀರಕಂಭ, ಉಮೇಶ್ ಕರ್ಕೆರಾ, ಮಹಾವೀರ್ ಜೈನ್ ಕಜೆ, ಪ್ರಕಾಶ್ ಕಜೆಕಾರು, ಸುದೀಪ್ ಶಿರ್ಲಾಲು, ಪದ್ಮನಾಭ ರೈ ಕಂಪದ ಬೈಲು, ಪ್ರಖ್ಯಾತ್ ಭಂಡಾರಿ ಬೆಳುವಾಯಿ, ಬರವಣಿಗೆ ಮತ್ತು ದಾಖಲೆ ನಿರ್ವಹಣೆಯನ್ನು ಸಂಕಪ್ಪ ಶೆಟ್ಟಿ ನಗ್ರಿ, ದಿನೇಶ್ ಕಕ್ಕೆಪದವು, ಗಂತ್‌ನಲ್ಲಿ ಸುದರ್ಶನ್ ನಾಯ್ಕ್ ಕಂಪ, ಸಚಿನ್ ಸರೋಳಿ, ಪ್ರೇಮಾನಂದ ನಾಯ್ಕ್, ನವೀನ್‌ಚಂದ್ರ ನಾಯ್ಕ್, ಯತೀಶ್ ಶೇಟ್ಟಿ ಕೋಡಿಂಬಾಡಿ, ಸೂರಜ್ ಗೌಡ, ಬೇಬಿಜಾನ್, ರಾಜೇಶ್ ನಾಯ್ಕ್ ನೆಲ್ಲಿಕಟ್ಟೆ ಸಹಕರಿಸಿದರು. ಸದಾಶಿವ ಸಾಮಾನಿ ಸಂಪಿಗೆದಡಿ ಮತ್ತು ಪದ್ಮನಾಭ ಪಕ್ಕಳ ವಿಭಾಗ ಪರಿಶೀಲನೆ ಮಾಡಿದರು.
ಕನೆಹಲಗೆ, ಹಗ್ಗ ಹಿರಿಯ, ನೇಗಿಲು ಹಿರಯ ಪ್ರಥಮ ಬಹುಮಾನವಾಗಿ 2 ಪವನ್ ಚಿನ್ನ, ದ್ವಿತೀಯ 1 ಪವನ್ ಚಿನ್ನ, ಅಡ್ಡಹಲಗೆ, ಹಗ್ಗ ಕಿರಿಯ, ನೇಗಿಲು ಕಿರಿಯ ಕ್ಕೆ ಪ್ರಥಮ ಬಹುಮಾನವಾಗಿ 1 ಪವನ್ ಚಿನ್ನ, ದ್ವಿತೀಯ ಬಹುಮಾನವಾಗಿ ಅರ್ಧಪವನ್ ಚಿನ್ನ, ಹಾಗು ವಿಜೇತರಿಗೆ ’ಕೋಟಿ ಚೆನ್ನಯ ಟ್ರೋಪಿ’ ನೀಡಿ ಗೌರವಿಸಲಾಯಿತು. ವಿಜೇತ ಕೋಣಗಳ ಓಟಗಾರರಿಗೂ ಬಹುಮಾನ ನೀಡಲಾಯಿತು.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ
ಕನೆಹಲಗೆ: 06 ಜೊತೆ
ಅಡ್ಡಹಲಗೆ: 07 ಜೊತೆ
ಹಗ್ಗ ಹಿರಿಯ: 18 ಜೊತೆ
ನೇಗಿಲು ಹಿರಿಯ: 32 ಜೊತೆ
ಹಗ್ಗ ಕಿರಿಯ: 20 ಜೊತೆ
ನೇಗಿಲು ಕಿರಿಯ: 82 ಜೊತೆ
ಒಟ್ಟು ಕೋಣಗಳ ಸಂಖ್ಯೆ:165 ಜೊತೆ
ಸ್ಪರ್ಧೆ ವಿಜೇತರ ವಿವರ:
ಕನೆಹಲಗೆ: ( ನೀರು ನೋಡಿ ಬಹುಮಾನ )
ಪ್ರಥಮ: ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ಬಾರ್ಕೂರು ಶಾಂತಾರಾಮ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ರಾಘವೇಂದ್ರ ಪೂಜಾರಿ
ಅಡ್ಡ ಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ ಬಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ದ್ವಿತೀಯ: ನಾರಾವಿ ಯುವರಾಜ್ ಜೈನ್
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ಹಗ್ಗ ಹಿರಿಯ: ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಬಿ
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ದ್ವಿತೀಯ: ಎರ್ಮಾಳ್ ರೋಹಿತ್ ಹೆಗ್ಡೆ ಎ
ಓಡಿಸಿದವರು: ಬೈಂದೂರು ವಿಶ್ವನಾಥ್ ದೇವಾಡಿಗ
ಹಗ್ಗ ಕಿರಿಯ:ಪ್ರಥಮ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್
ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ್ ಗೌಡ
ದ್ವಿತೀಯ: ನೂಜಿಪ್ಪಾಡಿ ಅಂಬ್ರ ನಿಲಯ ಪ್ರಣಮ್ ಕುಮಾರ್
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ
ನೇಗಿಲು ಹಿರಿಯ: ಪ್ರಥಮ: ಮೊಗರುಗುತ್ತು ರಿಷಿ ರಿಯಾನ್ಶ್ ಶೆಟ್ಟಿ ಬಿ
ಓಡಿಸಿದವರು: ನಕ್ರೆ ಪವನ್ ಮಡಿವಾಳ್
ದ್ವಿತೀಯ: ಪುತ್ತೂರು ಸರೋವರ ಹವೀಶ ಹರೀಶ್ ಶಾಂತಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
ನೇಗಿಲು ಕಿರಿಯ: ಪ್ರಥಮ: ಬೆಳ್ಳಾರೆ ಕುಂಟಿಪುನಿಗುತ್ತು ಪ್ರಮೋದ್ ಸುರೇಶ್ ಶೆಟ್ಟಿ ಎ
ಓಡಿಸಿದವರು: ಬಾರಾಡಿ ನತೇಶ್
ದ್ವಿತೀಯ: ಪುತ್ತೂರು ಸರ್ವೆ ಬೊಟ್ಯಾಡಿ ಕಿಶೋರ್ ಭಂಡಾರಿ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್