





ಕಾವು: ಮಾಡ್ನೂರು ಗ್ರಾಮದ ಕಾವು ಕೊಚ್ಚಿ ನಿವಾಸಿ ದಿ. ಶಂಕರ ಭಟ್‌ರವರ ಪತ್ನಿ ಸರಸ್ವತಿ ಅಮ್ಮ(81ವ)ನವರು ಜ.30ರಂದು ಸಂಜೆ ಸ್ವಗೃಹದಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.








ಮೃತರು ಪುತ್ರರಾದ ಕಾವು ಸಹಕಾರ ಸಂಘದ ಮಾಜಿ ಸಿಇಓ ಕೇಶವ ಭಟ್ ಕೊಚ್ಚಿ, ಕಾವು ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಶಿವಪ್ರಸಾದ್ ಕೊಚ್ಚಿ, ನಾಲ್ವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಸಿಇಓ ಕೇಶವಮೂರ್ತಿ ಪಿ.ಜಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಆಡಳಿತ ಸಮಿತಿ ಸದಸ್ಯ ಮಳಿ ರಾಮಚಂದ್ರ ಭಟ್, ಮಾಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಲೋಕೇಶ್ ಚಾಕೋಟೆ, ಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭಾದ ಅಧ್ಯಕ್ಷ ವೆಂಕಟಕೃಷ್ಣ ಮಳಿ, ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ, ನಿವೃತ್ತ ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯ, ಗಣಪತಿ ಭಟ್ ಕುಳಮರ್ವ, ಲಕ್ಷ್ಮೀನಾರಾಯಣ ಭಟ್ ಪೆರ್ನಾಜೆ, ನಹುಷಾ ಭಟ್ ಪಳನೀರು ಸೇರಿದಂತೆ ಅನೇಕ ಗಣ್ಯರು, ಬಂಧು ಮಿತ್ರರು, ಕುಟುಂಬಸ್ಥರು ಭೇಟಿ ನೀಡಿ ಸಂತಾಪ ಸಲ್ಲಿಸಿದರು.









