ಪುತ್ತೂರು ಕಂಬಳಕ್ಕೆ ಆಗಮಿಸಿದ್ದ ಬಿಗ್‌ಬಾಸ್ ಖ್ಯಾತಿಯ ಸಾನಿಯ ಅಯ್ಯರ್ ಜೊತೆ ವ್ಯಕ್ತಿಯೊಬ್ಬರಿಂದ ಅನುಚಿತ ವರ್ತನೆ ಆರೋಪ !

0

ಕಂಬಳದ ವೇದಿಕೆಯಲ್ಲಿ ಪ್ರಮುಖರಿಗೆ ದೂರೂ ನೀಡಿದ ಸಾನಿಯ, ಬೆಂಬಲಿಗರ ವಿಡಿಯೋ ವೈರಲ್

ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಆಗಮಿಸಿದ್ದ ಬಿಗ್ ಬಾಸ್ ಖ್ಯಾತಿಯ ಸಾನಿಯ ಅಯ್ಯರ್ ಜೊತೆ ವ್ಯಕ್ತಿಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಸಾನಿಯ ಅಯ್ಯರ್ ಮತ್ತು ಅವರ ಬೆಂಬಲಿಗರು ಕಂಬಳದ ವೇದಿಕೆಯಲ್ಲಿ ಪ್ರಮುಖರಿಗೆ ದೂರು ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಜ.28ರಂದು ರಾತ್ರಿ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಸಾನಿಯ ಅಯ್ಯರ್ ಅವರು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭ ಅಭಿಮಾನಿ ಬಳಗದ ವ್ಯಕ್ತಿಯೊಬ್ಬರು ’ಐ ಲವ್ ಯು ಸಾನಿಯ’ ಎಂದು ಕಿರುಚಾಡುತ್ತಿದ್ದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಗಣ್ಯರು ವೇದಿಕೆಯಿಂದ ತೆರಳಿದ್ದರು. ಸಾನಿಯ ಅಯ್ಯರ್ ಮತ್ತು ಅವರ ಬೆಂಬಲಿಗರು ಕೂಡಾ ಕಂಬಳ ವೀಕ್ಷಣೆಗೆ ಗದ್ದೆ ಸುತ್ತಾಡುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬರು ಆಕೆಯ ಕೈ ಹಿಡಿದು ಎಳೆದಿರುವುದಾಗಿ ತಿಳಿದು ಬಂದಿದೆ. ಇದನ್ನು ಗಮನಿಸಿದ ಕೆಲವರು ವ್ಯಕ್ತಿಗೆ ಹಲ್ಲೆ ನಡೆಸಿದ್ದಾರೆಂದೂ ಕೇಳಿ ಬಂದಿದೆ. ಈ ನಡುವೆ ಸಾನಿಯ ಐಯ್ಯರ್ ಮತ್ತು ಅವರ ಬೆಂಬಲಿಗರು ವೇದಿಕೆಗೆ ಬಂದು ವೇದಿಕೆಯಲ್ಲಿದ್ದ ಕಂಬಳದ ಪ್ರಮುಖರಿಗೆ ದೂರು ನೀಡಿದ್ದಾರೆ. ದೂರು ನೀಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಘಟನೆ ಕುರಿತು ಪುತ್ತೂರು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here