ಕಾಣಿಯೂರು: ಶಾಲಾ ಆಟದ ಮೈದಾನ ಬಳಿಯ ಸರಕಾರಿ ಜಾಗ ಒತ್ತುವರಿ ತೆರವು

0

ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನಕ್ಕೆ ಬಳಸಲಾಗುತ್ತಿದ್ದುದೆನ್ನಲಾದ ಸರಕಾರಿ ಒತ್ತುವರಿ ಜಾಗವನ್ನು ಕಡಬ ತಹಶೀಲ್ದಾರರ ಆದೇಶ ಮೇರೆಗೆ ಕಂದಾಯ ನಿರೀಕ್ಷಕರು ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ತೆರವುಗೊಳಿಸಿದ ಘಟನೆ ಜ.30ರಂದು ನಡೆದಿದೆ.

ಶಾಲಾ ಆಟದ ಮೈದಾನಕ್ಕೆ ಬಳಸುತ್ತಿದ್ದ, ಶಾಲಾ ಸ್ವಾಧೀನದಲ್ಲಿರುವ ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಸರ್ವೆ ನಂ.124/1(ಪಿ1) ಮತ್ತು 99(ಪಿ1) ರಲ್ಲಿರುವ ಸರಕಾರಿ ಭೂಮಿಯನ್ನು ಶಾಲಾ ಆಟದ ಮೈದಾನಕ್ಕೆ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಿ ಸುಮಾರು ವರ್ಷಗಳಿಂದ ಬಳಸಿಕೊಳುತ್ತಿದ್ದೇವೆ. ಈಗ ಅದೇ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ತಂತಿ ಬೇಲಿ ಹಾಕಿದ್ದು, ತಂತಿ ಬೇಲಿ ತೆರವುಗೊಳಿಸಿ ವಿದ್ಯಾರ್ಥಿಗಳ ಆಟದ ಮೈದಾನಕ್ಕೆ ಅನುಕೂಲವಾಗುವಂತೆ ಮಾಡಬೇಕೆಂದು ಶಾಲಾ ಎಸ್‌ಡಿಎಂಸಿಯವರು ಕಡಬ ತಹಶೀಲ್ದಾರರಿಗೆ ಮನವಿ ನೀಡಿದ್ದರು. ಈ ಹಿನ್ನಲೆಯಲ್ಲಿ ಸರಕಾರಿ ಜಾಗ ಒತ್ತುವರಿ ತೆರವು ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ತಾರಾನಾಥ ಇಡ್ಯಡ್ಕ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಅನಿಲ, ಉಪಾಧ್ಯಕ್ಷೆ ಯಶೋದ ನೇರೊಳ್ತಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾರ್ಯದರ್ಶಿ ರವೀಂದ್ರ ಅನಿಲ, ಕೋಶಾಧಿಕಾರಿ ರಾಜೇಶ್ ಮೀಜೆ, ಕಾಣಿಯೂರು ಗ್ರಾಮಕರಣಿಕ ಹರೀಶ್, ಬೆಳಂದೂರು ಗ್ರಾಮಕರಣಿಕ ಪುಷ್ಪರಾಜ್ ಮೋದಲಾದವರಿದ್ದರು.

LEAVE A REPLY

Please enter your comment!
Please enter your name here