ಎ.8-16: ಶ್ರೀ ವೆಂಕಟರಮಣ ದೇವರ ಹಾಗು ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸ, ನೇಮೋತ್ಸವ

0

ಆಲಂಕಾರು : ರಾಮಕುಂಜ ಗ್ರಾಮದ ಪೆರ್ಜಿ ಪಾಂಗಣ್ಣಾಯ ಮನೆತನದ ಕುಲದೇವರಾದ ಶ್ರೀ ವೆಂಕಟರಮಣ ದೇವರ ಹಾಗು ಪರಿವಾರ ದೈವಗಳಾದ ಶ್ರೀ ರಕ್ತೇಶ್ವರಿ ಮತ್ತು ವರ್ಣರ ಪಂಜುರ್ಲಿ ಹಾಗೂ ಯಜ್ಞ ವಾರಹಿ ದೇವಿಯ ಪ್ರತಿಷ್ಠಾ ಮಹೋತ್ಸವ ಎ.8 ರಂದು ಹಾಗು ಎ.9 ರಂದು ನಡೆದು ಎ.16 ರಂದು ಚಂಡಿಕಾ ಹೋಮ ಹಾಗು ನೇಮೋತ್ಸವ ನಡೆಯಲಿದೆ.


ಎ.8 ರಂದು ಬೆಳಿಗ್ಗೆ ಪೆರ್ಜಿ ನಾಗಬನದಲ್ಲಿ ಹಾಗು ಬಟ್ಟೋಡಿ ನಾಗಬನದಲ್ಲಿ ನಾಗತಂಬಿಲ, ಹೊರೆಕಾಣಿಕೆ ಋತ್ವಿಜರಿಗೆ ಸ್ವಾಗತ ಆಲಯ ಪರಿಗ್ರಹ,ಸ್ವಸ್ತಿ ಪುಣ್ಯಾಹ ವಾಚನ,ರಕ್ಷೋಘ್ನ ಹೋಮ, ವಾಸ್ತುಹೋಮ,ಭೂವಾರಹ ಹೋಮ,ವಾಸ್ತುಹೋಮ, ವಾಸ್ತುಬಲಿ, ಬಿಂಬಶುದ್ದಿ, ಪ್ರಸಾದ ವಿತರಣೆ ನಡೆಯಲಿದೆ. ಎ.9 ಶನಿವಾರ ಬೆಳಿಗ್ಗೆ ಸ್ವಸ್ತಿ ಪುಣ್ಯಹ ವಾಚನ, ಗಣಹೋಮ, ಪಂಚವಿಂಶತಿಕಲಶ ಆರಾಧನೆ, ದುರ್ಗಾಹೋಮ, ವಿಷ್ಣುಗಾಯತ್ರಿ ಹೋಮ, ಪುರುಷ ಸೂಕ್ತಹೋಮ, ಶ್ರೀ ಲಕ್ಷೀ ವೆಂಕಟರಮಣ ದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ರಕ್ತೇಶ್ವರಿ,ವರ್ಣರ ಪಂಜುರ್ಲಿ, ಯಜ್ಞವಾರಹಿ ಪ್ರತಿಷ್ಠೆ, ಬ್ರಹ್ಮಕಲಾಶಾಭಿಷೇಕ, ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ. ಎ.16 ರಂದು ಶನಿವಾರ ಬೆಳಿಗ್ಗೆ 7:30 ರಿಂದ ಚಂಡಿಕಾಹೋಮ ಪ್ರಾರಂಭ 11:30 ಕ್ಕೆ ಚಂಡಿಕಾಹೋಮದ ಪೂರ್ಣಾಹುತಿ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ, ಸಂಜೆ 6:30 ಕ್ಕೆ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಆಗಮನ,  ಶ್ರೀಗಳಿಗೆ ಪೆರ್ಜಿ ಪಾಂಗಣ್ಣಾಯ ಕುಟುಂಬಸ್ಥರ ವತಿಯಿಂದ ಸ್ವಾಗತ ಮತ್ತು ಗೌರವಾರ್ಪಣೆ,ಪೂಜ್ಯ ಶ್ತೀ ಗಳಿಂದ ಆಶ್ರೀ ರ್ವಚನ, ಭಕ್ತವೃಂದದವರಿಗೆ ಫಲ ಮಂತ್ರಾಕ್ಷತೆ,ರಾತ್ರಿ 8:00 ರಿಂದ ದೈವಗಳ ಭಂಡಾರ ತೆಗೆಯುವುದು,ಅನ್ನಸಂತರ್ಪಣೆ 9:30 ರಿಂದ ವರ್ಣರ ಪಂಜುರ್ಲಿ ಗಗ್ಗರ ಸೇವೆ ರಾತ್ರಿ 11:00 ರಿಂದ ಬೆಂಕಿ ರಕ್ತೇಶ್ವರಿ ದೈವದ ನೇಮೋತ್ಸವ ನಡೆಯಲಿದೆ.

 

ನೂತನ ಗುಡಿಯಲ್ಲಿ ಜರಗುವ ಪ್ರತಿಷ್ಠಾ ಕಾರ್ಯವು ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ ಕಲ್ಪಡ ಮತ್ತು ವೇದಮೂರ್ತಿ  ನರಹರಿ ಉಪಾಧ್ಯಾಯ ಇರ್ಕಿ ಮಠ ಇವರ ನೇತೃತ್ವದಲ್ಲಿ ನಡೆಯಲಿದೆ.ಗುರುದೇವತಾನುಗ್ರಹದಿಂದ ನೇರವೇರಲಿರುವ ಈ ಕಾರ್ಯಕ್ರಮಗಳಿಗೆ ತಾವೆಲ್ಲರೂ ಅಗಮಿಸಿ ತನು ಮನ ಧನಗಳಿಂದ ಸಹಕರಿಸಿ ದೈವ ದೇವರುಗಳ  ಶ್ರೀ  ಗಂಧ ಪ್ರಸಾದಾದಿಗಳನ್ನು ದೈವ ದೇವರ ಪ್ರಸಾದ ಸ್ವೀಕರಿಸಿ  ದೇವರ ಹಾಗು ರಕ್ತೇಶ್ವರಿ ದೈವದ ಕೃಪೆಗೆ ಪಾತ್ರರಾಗುವಂತೆ ಮತ್ತು ವೆಂಕಟರಮಣ ಪಾಂಗಣ್ಣಾಯ ಪೆರ್ಜಿ ಮತ್ತು ಸಹೋದರರು ಹಾಗೂ ಕುಟುಂಬಸ್ಥರು, ಹಾಗೂ ಮತ್ತು ಶ್ರ ಮೋನಪ್ಪ ಗೌಡ ಪೆರ್ಜಿ ಮತ್ತು ಸಹೋದರರು ಹಾಗು ಕುಟುಂಬಸ್ಥರು ಹಾಗೂ ಪೆರ್ಜಿ, ಬಟ್ಟೋಡಿ, ಕಜೆ, ವಳಂಜ, ಆನ, ಉರ್ಕ, ಅರ್ವೆ, ಬೊಳ್ಳರೋಡಿ, ನೀರಾಜೆ, ಬರೆಂಬಾಡಿಯ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here