ಪುತ್ತೂರು: ಯು.ಆರ್ ಪ್ರಾಪರ್ಟೀಸ್ನ ಉಜ್ವಲ್ ಕುಮಾರ್ರವರು ಕೊಡುಗೆಯಾಗಿ ನಿರ್ಮಿಸಿಕೊಟ್ಟ ನರಿಮೊಗ್ರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಮಹಾದ್ವಾರ ಮತ್ತು ನವೀಕೃತ ಕಟ್ಟೆಯ ಉದ್ಘಾಟನೆ ಹಾಗೂ ರಿಂದ ಸೇವಾರೂಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ’ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಏ.5ರಂದು ಸಂಜೆ ನಡೆಯಿತು.
ಶಸಕ ಸಂಜೀವ ಮಠಂದೂರು ಧ್ವಾರವನು ಉದ್ಘಾಟಿಸಿ ಶುಭ ಹಾರೈಸಿದರು. ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ, ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ವೇದನಾಥ ಸುವರ್ಣ, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಸದಸ್ಯರಾದ ನವೀನ್ ಕುಮಾರ್ ಎಸ್., ಕೇಶವ ಮುಕ್ವೆ, ಪ್ರಮುಖರಾದ ಜಗದೀಶ ಶೆಣೈ ಬಾಮಿ, ರಂಗನಾಥ ಕಾರಾಂತ್ ಮರಿಕೆ, ರಾಜೇಶ್ ಕೋಲ್ಪೆ, ರವೀಂದ್ರ ಶರ್ಮ ಮಿತ್ತೂರು, ದಾಮೋಧರ ಗೌಡ ಗೆನಸಿನ ಕುಮೇರು, ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಭಾಸ್ಕರ ಪೆರುವಾಯಿ, ಹೊನ್ನಪ್ಪ ಪೂಜಾರಿ ಕೈಂದಾಡಿ, ಗಣೇಶ್ ಗೌಡ ತೆಂಕಿಲ, ಗಣೇಶ್ಕೃಷ್ಣ ಎಸ್.ಆರ್., ಸಂತೋಷ್ ಕುಮಾರ್ ನಳೀಲು, ಸಜೇಶ್ ಆನಂದ್, ಶ್ರೀರಂಜನ್ ಕುಮಾರ್, ಸಂಜೀವ ಗೌಡ, ಬಾಲಕೃಷ್ಣ ಗೌಡ ಬಾರ್ತಿಕುಮೇರು, ಚೆನ್ನಪ್ಪ ಗೌಡ ಗೆಣಸಿನ ಕುಮೇರು, ಮೋಹನ್ ಗೌಡ, ಹರೀಶ್ ಕೆ ನೆಹರುನಗರ, ರಕ್ಷಿತ್ ಕಲ್ಲಡ್ಕ, ದಾವೂದ್ ಬನ್ನೂರು ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ರಾತ್ರಿ ಚೌಕಿ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದ ಬಳಿಕ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.