ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಸಂದರ್ಭದಲ್ಲಿ ಸುದ್ದಿ ಗ್ರೂಪ್ ಆಫ್ ಕಂಪೆನಿ ಮತ್ತು ಒಕ್ಕಲಿಗ ಗೌಡ ಸಮುದಾಯ ಭವನದ ನೇತೃತ್ವದಲ್ಲಿ ಜಿ.ಎಲ್ ಆಚಾರ್ಯ ಜ್ಯುವೆಲ್ಲ ರ‍್ಸ್ ಮುಖ್ಯ ಪ್ರಾಯೋಜಕತ್ವದಲ್ಲಿ ಪರ್ಲ್ ಸಿಟಿ ಸ್ಟಾರ್ ನೈಟ್ ಅವಾರ್ಡ್-2022 ಎ.12ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಮುಂಭಾಗದಲ್ಲಿ ನಡೆಯಲಿದೆ.
ವೈಭವದಿಂದ ನಡೆಯಲಿರುವ ಈ ಸ್ಟಾರ್ ನೈಟ್ ಕಾರ್ಯಕ್ರಮದ ಪ್ರಾಯೋಜಕರಾಗಿ ವನಸ್ಥಾ ಹಾಗೂ ಎಸ್.ಆರ್.ಕೆ ಲ್ಯಾಡರ್ಸ್ ಸಹಕರಿಸುತ್ತಿದ್ದು. ಕುಮ್-ಕುಮ್ ಫ್ಯಾಷನ್ಸ್, ಕೋಕೋ ಗುರು, ಶ್ರೀ ಕುರುಂಜಿ ಇನ್ಫಾಸ್ಟ್ರಕ್ಚರ್ ಪ್ರೈ.ಲಿ, ಮುಳಿಯ ಕೇಶವ ಭಟ್&ಸನ್ಸ್, ವೈದ್ಯಾರ್ಸ್ ಆಯುರ್ವೇದ ಸಹಪ್ರಾಯೋಜಕರಾಗಿ ಕಾರ್ಯಕ್ರಮಕ್ಕೆ ಸಹಕರಿಸಲಿದ್ದಾರೆ.
ನಟ,ಪ್ರಸಿದ್ದ ನಿರೂಪಕ ವಿನೀತ್ ಕುಮಾರ್ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬರಲಿದ್ದು, ಸಿನಿ ತಾರೆಯರಾದ ಅದ್ವಿಕಾ ಶೆಟ್ಟಿ ಹಾಗೂ ಅನ್ವಿತಿ ಶೆಟ್ಟಿ ಪ್ರಮುಖ ತಾರಾ ಆಕರ್ಷಣೆಯಾಗಿರಲಿದ್ದಾರೆ. ಇದರೊಂದಿಗೆ ನಟಿ ಪಾಯಲ್ ರಾಧಾಕೃಷ್ಣ,ವೀಡಿಯೋ ಕ್ರಿಯೇಟರ್ ಶುಭಂ, ಏಕಲವ್ಯ ಪ್ರಶಸ್ತಿ ವಿಜೇತ ಪ್ರೋ ಕಬಡ್ಡಿ ತಾರೆ ಪ್ರಶಾಂತ್.ರೈ, ಹಾಡುಗಾರ ಸಂದೇಶ ನೀರುಮಾರ್ಗ, ನಟಿ ರಚನಾ.ರೈ, ನೃತ್ಯ ಸಂಯೋಜಕ ನವೀನ್ ಶೆಟ್ಟಿ,ಹಾಡುಗಾರ ವಿನೋದ್ ಆಚಾರ್ಯ, ಶ್ರವನ್ ಕುಮಾರ್, ಪ್ರೋ ಕಬಡ್ಡಿ ತಾರೆ ಸುಕೇಶ್ ಹೆಗ್ಡೆ, ನಟ ಅರ್ಜುನ್ ಕಾಪಿಕಾಡ್, ಹಾಡುಗಾರ ಸುಪ್ರೀತ್ ಗಾಂಧಾರ, ಮಾಡೆಲ್ ವಿಜೇತ ಪೂಜಾರಿ, ನಟಿ ದ್ರವ್ಯ ಶೆಟ್ಟಿ,ನಟ ಸುಂದರ್.ರೈ ಮಂದಾರ, ಸವಿತಾ ಅವಿನಾಶ್, ಸಂದೀಪ್ ದೇವಾಡಿಗ, ಮನೋಹರ್ ಬ್ರಹ್ಮವಾರ್, ನಟಿ ನಿರೀಕ್ಷಾ ಶೆಟ್ಟಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.
ಶ್ರೀ ಶಬರಿ ಚೆಂಡೆ ಬಳಗದಿಂದ ವಿಶೇಷ ಚೆಂಡೆವಾದನದ ಪ್ರದರ್ಶನ,ಗೀತ ನೃತ್ಯಾಲಯ ಉಜಿರೆ ತಂಡದಿದ ನೃತ್ಯ ಪ್ರದರ್ಶನ,ಟೀಮ್ ಡಿಫರೆಂಟ್ ತಂಡದಿಂದ ತೆಯ್ಯಂ ಪ್ರದರ್ಶನ ಹಾಗೂ ಉಮೇಶ್ ಮಿಜಾರ್ ಮತ್ತು ತಂಡ ಹಾಸ್ಯ ಪ್ರದರ್ಶನಗಳು ಮೂಡಿಬರಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುದ್ದಿ ಮಾರ್ಕೆಟಿಂಗ್ ಮ್ಯಾನೇಜರ್ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.