- ಸ್ವಂತ ಉದ್ಯಮದ ಹಂಬಲ ಯುವ ಜನತೆಗಿರಬೇಕೂ- ಮಠಂದೂರು
ಪುತ್ತೂರು : ಕಳೆದ ಮೂರು ವರುಷಗಳಿಂದ ಬೊಳುವಾರು ಮುಖ್ಯರಸ್ತೆ ,ಹಿರಣ್ಯ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿದ್ದ ,ಎಲೆಕ್ಟ್ರಿಕ್ ಸ್ಕೂಟರ್ ಮಾಳಿಗೆ ಗ್ರೀವ್ಸ್ ಅಂಪಿಯರ್ , ಸ್ಥಳಾಂತರಗೊಂಡು ಏ.7 ರಂದು ಇಲ್ಲಿನ ಪಡೀಲ್ ಮುಖ್ಯರಸ್ತೆ ,ಎನ್.ಎಸ್. ಆರ್ಕೇಡ್ ಇದರ ನೆಲ ಮಹಡಿಯಲ್ಲಿ ಶುಭಾರಂಭಗೊಂಡಿತು.
ಅರ್ಚಕ ಶ್ರೀ ಕೃಷ್ಣ ಉಪಾಧ್ಯಾಯ ಪೂಜಾ ಕೈಂಕರ್ಯ ನೆರವೇರಿಸೋ ಮೂಲಕ ಸಂಸ್ಥೆಯ ಅಭಿವೃಧ್ಧಿಗೆ ಹರಸಿ ,ಹಾರೈಸಿದರು. ಶಾಸಕ ಸಂಜೀವ ಮಠಂದೂರು ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿ ,ದೀಪ ಪ್ರಜ್ವಲನೆ ಮಾಡಿ ,ಬಳಿಕ ಮಾತನಾಡಿ ,ಜನರೂ ಕಡಿಮೆ ವೆಚ್ಚದಲ್ಲಿ ,ಹೆಚ್ಚು -ಹೆಚ್ಚೂ ಸುಖಿಯಾಗಿರಲೂ ಹಂಬಲಿಸೋ ಈ ದಿನಗಳಲ್ಲಿ ,ಬ್ಯಾಟರಿ ಚಾಲಿತ ವಾಹನಗಳ ಸಾಲೂ ಕೂಡ ಖಂಡಿತವಾಗಿಯೂ ಇದೆ ಹಾಗೂ ಪರಿಸರವನ್ನೂ ರಕ್ಷಣೆ ಮಾಡೋ ಕೆಲಸವೂ ಆಗುತ್ತದೆ.ಬಿಸಿಲು,ಬ್ಯಾಟರಿಗಳಿಂದ ,ಇಂಧನಗಳ ಉಪಯೋಗಕ್ಕೆ ತಡೆ ಸಿಗಲಿದ್ದೂ ,ಯುವ ಜನತೆ ಸ್ವಂತ ಉದ್ಯಮವನ್ನೇ ಆರಂಭಿಸೋ ಹಂಬಲ ಹೊಂದಿರ ಬೇಕು ಎಂದ್ಹೇಳಿ ,ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ,ಉದ್ಯಮಿ ಧನ್ ರಾಜ್ ಮೂಡಬಿದ್ರಿ ,ವಿವೇಕಾನಂದ ಪಾಲಿಟೆಕ್ನಿಕ್ ಇದರ ಪ್ರಾಂಶುಪಾಲರಾದ ಗೋಪಿನಾಥ್ ಶೆಟ್ಟಿ ,ಮಾಲಕ ಪ್ರಕಾಶ್ ರ ತಂದೆ ಸಂಜೀವ ಗೌಡ ,ಸಹೋದರ ನಾಗೇಶ್ ,ಲತಾ ನಾಗೇಶ್ ,ಮಾವ ಜನಾರ್ಧನ ಗೌಡ ಬೊಳ್ವಾರ್ ,ಕೃಷ್ಣಪ್ಪ ಗೌಡ ಮತಾವು ,ಮಹಾಲಿಂಗ ನಾಯ್ಕ ಮಚ್ಚಿಮಲೆ ,ಎನ್.ಎಸ್.ಸಂಕೀರ್ಣದ ಸಂತೋಷ್ ,ಪಡೀಲ್ ಪ್ರಶಾಂತ್ ಎಂಟರ್ ಪ್ರೈಸಸ್ ಮಾಲಕ ಪ್ರಶಾಂತ್ ಶೆಣೈ ಸಹಿತ ಹಲವರು ಆಗಮಿಸಿ ಹಾರೈಸಿದರು. ಮಾಲಕ ಪ್ರಕಾಶ್ ಎಲ್ಲಾ ಅತಿಥಿಗಳನ್ನೂ ಸ್ವಾಗತಿಸಿ , ಸಸಿಗಳನ್ನು ನೀಡೋ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸೋದರ ಜೊತೆಗೆ ,ಪ್ರಕೃತಿ ಮೇಲಿನ ಪ್ರೀತಿಯನ್ನು ಬಿಂಬಿಸಿ ,ಎಲ್ಲರಿಗೂ ವಂದಿಸಿ ,ಸಹಕಾರ ಯಾಚಿಸಿದರು.
ಶುಭಾರಂಭದ ಸಲುವಾಗಿ 2 ಸಾವಿರ ಕ್ಯಾಶ್ ಬ್ಯಾಕ್….!
ಇ- ಸ್ಕೂಟರ್ ಬೆಲೆಯೂ ಸುಮಾರು 87,199/-ವಿದ್ದು ,100 + ಮೈಲೇಜ್ ಜೊತೆಗೆ ಮೊದಲ ಮೂರು ದಿನದಲ್ಲೀ ,ಬುಕ್ಕಿಂಗ್ ಮಾಡೋ ಗ್ರಾಹಕರಿಗೆ ಮಾತ್ರವೇ ಸಿಗಲಿದೆ ಎರಡು ಸಾವಿರ ರೂಪೈ ಕ್ಯಾಶ್ ಬ್ಯಾಕ್ ಹಾಗೂ ಉಚಿತ ಹೆಲ್ಮೆಟ್ ಕೂಡ
ಪ್ರಕಾಶ್ ,ಮಾಲಕರು,ಮೊ.6364261231