ಯುಪಿಆರ್‌ಡಿ ಪ್ರೊಡಕ್ಷನ್ ಹೌಸ್‌ನಿಂದ ನಟನಾ ತರಬೇತಿ ಉದ್ಘಾಟನೆ

0

ಪುತ್ತೂರು:ಯುಪಿಆರ್‌ಡಿ  ಪ್ರೊಡಕ್ಷನ್ ಹೌಸ್‌ವರಿಂದ ನೃತ್ಯ ಹಾಗೂ ನಾಟಕ ಮೊದಲಾದ ಕಲೆಗಳಿಗೆ ನಟನಾ ತರಬೇತಿಯು ಎ.೭ರಂದು ಲಯನ್ಸ್ ಸೇವಾ ಮಂದಿರದಲ್ಲಿ ಉದ್ಘಾಟನೆಗೊಂಡಿತು. ನಟನಾ ತರಬೇತಿಯನ್ನು ಉದ್ಘಾಟಿಸಿದ ಲಯನ್ಸ್ ಕ್ಲಬ್ ಪ್ರಾಂತೀಯ ಸಲಹೆಗಾರ ಸುದರ್ಶನ ಪಡಿಯಾರ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಅದಕ್ಕೆ ಪೂರಕವಾದ ತರಬೇತಿಗಳ ಆವಶ್ಯಕತೆಯಿದೆ. ಯುಪಿಆರ್‌ಡಿ ಪ್ರೊಡಕ್ಷನ್ ಮೂಲಕ ಉತ್ತಮ ತರಬೇತಿ ಪಡೆದ ವಿದ್ಯಾರ್ಥಿಗಳು ಮುಂದೆ ಉನ್ನತ ಸ್ಥಾನವನ್ನು ಪಡೆಯಲು ಸಹಕಾರಿಯಾಗಲಿ ಎಂದು ಆಶಿಸಿದರು.


ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಕೇಶವ ನಾಕ್, ಕೋಶಾಧಿಕಾರಿ ಸುಮಂಗಲ ಶೆಣೈ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಸಂದೇಶ್ ಶೆಟ್ಟಿ, ಕಲಾವಿದರಾದ ಮಿಥುನ್ ರಾಜ್, ಯಾಧವ್ ಮಣ್ಣಗುಡ್ಡ, ರೂಪದರ್ಶಿ ವಿಜೇತ ಪೂಜಾರಿ, ಜೀ ಕನ್ನಡದ ಡ್ರಾಮ ಜೂನಿಯರ್‍ಸ್‌ನ ಚಿತ್ರಾಲಿ, ಲಯನ್ಸ್ ಕ್ಲಬ್‌ನ ರೋಹಿಣಿ ರಾಘವ ಆಚಾರ್ಯ ಮಾತನಾಡಿ ಶುಭಹಾರೈಸಿದರು. ಸಂಸ್ಥೆಯ ನಿರ್ದೇಶಕಿ ಉದಯ ಪ್ರಭಾಕರ ಪ್ರಾಸ್ತಾವಿಕವಾಗಿ ಮಾತನಾಡಿ, ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡದಲ್ಲಿ ಕಲೆಗೆ ಸಾಕಷ್ಟು ಪ್ರಾಮುಖ್ಯತೆ ದೊರೆಯುತ್ತಿಲ್ಲ. ಪುತ್ತೂರು ಆಸುಪಾಸಿನ ಮಕ್ಕಳಿಗೆ ಪ್ರತಿಭೆಗಳಿಗೆ ತರಬೇತಿ ನೀಡುವ ಮೂಲಕ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ಇರಾದೆ ನಮ್ಮದು. ಸಂಸ್ಥೆಯಲ್ಲಿ ಇಬ್ಬರಿಗೆ ಉಚಿತ ತರಬೇತಿ ನೀಡಿ, ಸಿನೆಮಾ ಕ್ಷೇತ್ರಕ್ಕೆ ಪರಿಚಯಿಸುವ ಆಶಯವಿದೆ ಎಂದು ತಿಳಿಸಿದರು.


ದಾರಾವಾಹಿ ಪೋಸ್ಟರ್ ಬಿಡುಗಡೆ:
ತುಳು ದಾರಾವಾಹಿ `ಜೋಕುಲೆನ ಕಸರತ್ ಉಂದು ಕುಸಲತ್ತ್’ ಇದರ ಫೋಸ್ಟರ್‌ನ್ನು ಜೀ ಕನ್ನಡದ ಡ್ರಾಮ ಜೂನಿಯರ್‍ಸ್‌ನ ಚಿತ್ರಾಲಿ ಬಿಡುಗಡೆಗೊಳಿಸಿದರು. ನಿರ್ದೇಶಕ ಯಾದವ ಮಣ್ಣಗುಡ್ಡೆ ದಾರಾವಾಹಿಯ ಕುರಿತು ವಿವರಿಸಿದರು. ರೋಷಿಣಿ ಪ್ರಾರ್ಥಿಸಿದರು. ಸಂಸ್ಥೆಯ ನಿರ್ದೇಶಕಿ ಉದಯ ಪ್ರಭಾಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು. ನಮ್ಮ ಸಂಸ್ಥೆಯಲ್ಲಿ ಅನುಭವೀ ವೃತ್ತಿದಾರರಿಂದ ನಟನೆ, ನಾಟಕ, ಚಿತ್ರಕಥೆ, ನಿರ್ದೇಶನ ತರಬೇತಿ ನೀಡಲಾಗುವುದು. ನೃತ್ಯ ಕಲಾವಿದರಿಂದ ಡ್ಯಾನ್ಸ್ ಕ್ಲಾಸ್ ವೆಸ್ಟರ್ನ್ ತರಗತಿ, ಚಲನಚಿತ್ರ ನಟ ಸೆಲೆಬ್ರಿಟಿಗಳಿಂದ ಆಕ್ಟಿಂಗ್ ಕ್ಲಾಸ್ ಬೇಸಿಕ್, ನಾಟಕ ತರಗತಿ, ಮಹಿಳೆಯರಿಗೆ ಏರೋಬಿಕ್ ನೃತ್ಯಗಳು, ಉನ್ನತ ಮಾದರಿಗಳಿಂದ ಮಾಡೆಲಿಂಗ್ ತರಬೇತಿಗಳನ್ನು ನೀಡಲಾಗುವುದು. ೪ ತಿಂಗಳ ಅವಧಿಯಲ್ಲಿ ತರಬೇತಿ ನೀಡಲಾಗುವುದು. ಒಂದು ತಿಂಗಳ ಕಾರ್ಯಾಗಾರ ನಡೆಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here