ಡ್ರಾಯಿಂಗ್ ಗ್ರೇಡ್ ಪರೀಕ್ಷೆ-ಲಾವಣ್ಯ ಉಪ್ಪಳಿಗೆ ಡಿಸ್ಟಿಂಕ್ಷನ್

0

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಕೆ.ಎಸ್.ಇ.ಇ.ಬಿ) ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿಕೊಡುವ 2022ನೇ ಸಾಲಿನ ಲೋವರ್ ಹಾಗೂ ಹೈಯರ್ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಲಾವಣ್ಯ ಉಪ್ಪಳಿಗೆಯವರು ಶೇ.73.5 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

ದರ್ಬೆ ಸಂತ ಫೀಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಲಾವಣ್ಯ ಚಿತ್ರಕಲಾ ಶಿಕ್ಷಕ ದಿನೇಶ್ ಎಂ.ಪಿಯವರಲ್ಲಿ ತರಬೇತಿ ಪಡೆದಿರುತ್ತಾರೆ. ಈಕೆ ಉಪ್ಪಳಿಗೆ ನಿವಾಸಿಯಾಗಿರುವ ಕಾವೇರಿಕಟ್ಟೆ ಶ್ರೀಲಕ್ಷ್ಮೀ ಟ್ರೇಡರ್‍ಸ್ ಮ್ಹಾಲಕ ಧನಂಜಯ ಹಾಗೂ ಕಾವೇರಿಕಟ್ಟೆ ಲಾವಣ್ಯ ಹರ್ಬಲ್ ಬ್ಯೂಟಿಪಾರ್ಲರ್ ಮ್ಹಾಲಕಿ ತುಳಸಿ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here