ದ.ಕ ಜಿಲ್ಲಾ ಕೆಎಂಎಫ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಬಿ.ಜಯರಾಮ ರೈರವರಿಗೆ ಪುತ್ತೂರು ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಗೌರವ

0
  • ಜಿಲ್ಲಾಮಟ್ಟದ ಮೂರು ಸಂಸ್ಥೆಯ ನಿರ್ದೇಶಕರಾದ ಏಕೈಕ ವ್ಯಕ್ತಿ – ಶಶಿಕುಮಾರ್ ರೈ ಬಾಲ್ಯೊಟ್ಟು
  • ಡಾ.ಎಮ್.ಎನ್.ರಾಜೇಂದ್ರ ಕುಮಾರ್‌ವರಿಗೆ ಅಭಿನಂದನೆ ಸಲ್ಲಿಸುತ್ತೇನೆ – ಎಸ್.ಬಿ.ಜಯರಾಮ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈರವರು ಆಯ್ಕೆಗೊಂಡ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹರಕಾರಿ ಬ್ಯಾಂಕ್‌ನ ಪುತ್ತೂರಿನ ಶಾಖಾ ಕಚೇರಿಯಲ್ಲಿ ಗೌರವ ಕಾರ್ಯಕ್ರಮ ನಡೆಯಿತು.

 

ಪುತ್ತೂರು ಪ್ರಾಥಮಿಕ ಸಹಕಾರಿ ಬ್ಯಾಂಕ್‌ನ ಪುತ್ತೂರು ಪ್ರಧಾನ ಶಾಖಾ ಕಚೇರಿಯಲ್ಲಿ ನಡೆದ ೨೦ ಅಂಶಗಳ ಮಾಸಿಕ ಸಭೆಯಲ್ಲಿ ಗೌರವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್.ಬಿ. ಜಯರಾಮ ರೈ ಅವರಿಗೆ ಶಾಲು, ಹಾರ ಹಾಕಿ, ಪೇಟ ತೊಡಿಸಿ, ಸ್ಮರಣಿಕೆ, ಫಲವನ್ನು ನೀಡುವ ಮೂಲಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಗೌರವಿಸಿದರು.

ಜಿಲ್ಲಾಮಟ್ಟದ ಮೂರು ಸಂಸ್ಥೆಯ ನಿರ್ದೇಶಕರಾದ ಏಕೈಕ ವ್ಯಕ್ತಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರೈ ಬಾಲ್ಯೊಟ್ಟು ಅವರು ಮಾತನಾಡಿ ಎಸ್.ಬಿ.ಜಯರಾಮ ರೈ ಅವರು ಎರಡೂವರೆ ವರ್ಷದ ಹಿಂದೆಯೇ ಅವರು ಕೆ.ಎಂ.ಎಫ್‌ನ ಅಧ್ಯಕ್ಷರಾಗಿ ಆಯ್ಕೆಯಾಗಬೇಕಾಗಿತ್ತು. ಆದರೆ ತಡವಾಗಿಯಾದರೂ ಉಪಾಧ್ಯಕ್ಷ ಸ್ಥಾನ ಅವರಿಗೆ ದೊರೆತಿದೆ. ಈ ಸಂದರ್ಭದಲ್ಲೂ ಯೋಗಾನು ಯೋಗ ಎಂಬಂತೆ ಅವರು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೆ.ಎಂ.ಎಫ್‌ನ ಅಧ್ಯಕ್ಷರು ರಾಜೀನಾಮೆ ಕೊಟ್ಟರು. ಹಾಗಾಗಿ ಮುಂದಿನ ಐದಾರು ತಿಂಗಳ ಮಟ್ಟಿಗೆ ಎಸ್.ಬಿ.ಜಯರಾಮ ರೈ ಅವರೇ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಗಾಗಿ ಕೆ.ಎಂ.ಎಫ್‌ನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮಹಾಲಿಂಗೇಶ್ವರ ದೇವರು ಅವರಿಗೆ ಅನುಗ್ರಹ ಮಾಡಿದ್ದಾರೆ ಎಂದ ಅವರು ಜಿಲ್ಲಾ ಮಟ್ಟದ ಅಪೆಕ್ಸ್, ಎಸ್‌ಸಿಡಿಸಿಸಿ ಬ್ಯಾಂಕ್, ಕೆ.ಎಂ.ಎಫ್ ಸಂಸ್ಥೆಯ ನಿರ್ದೇಶಕರಾಗಿರುವ ಏಕೈಕ ವ್ಯಕ್ತಿ ಜಯರಾಮ ರೈ. ೨೦೦೪ರಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಒಟ್ಟಿನಲ್ಲಿ ಉತ್ತಮ ಸಹಕಾರಿಯಾಗಿ, ಸಾಮಾಜಿಕ, ಧಾರ್ಮಿಕವಾಗಿ ಎಲ್ಲಾ ರಂಗದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ ಎಂದರು.

ಡಾ.ಎಮ್.ಎನ್.ರಾಜೇಂದ್ರ ಕುಮಾರ್‌ವರಿಗೆ ಅಭಿನಂದನೆ ಸಲ್ಲಿಸುತ್ತೇನೆ:
ಗೌರವಾರ್ಪಣೆ ಸ್ವೀಕರಿಸಿದ ಕೆ.ಎಂ.ಎಫ್ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಅವರು ಮಾತನಾಡಿ ಜಿಲ್ಲಾ ಮಟ್ಟದ ಮೂರು ಸಂಸ್ಥೆಗೆ ನಿರ್ದೇಶಕರಾಗಲು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಮ್.ಎನ್.ರಾಜೇಂದ್ರ ಕುಮಾರ್ ಕಾರಣಕರ್ತರು. ಅವರಿಗೆ ನನ್ನ ವೈಯುಕ್ತಿ ಅಭಿನಂದನೆ ಸಲ್ಲಿತ್ತೇನೆ. ಇದರ ಜೊತೆಯಲ್ಲಿ ಎಸ್‌ಸಿಸಿಡಿಸಿಸಿ ಬ್ಯಾಂಕ್ ನಿರ್ದೇಶಕ ನನ್ನ ಸಹಪಾಠಿ ಶಶಿಕುಮಾರ್ ಬಾಲ್ಯೋಟು ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಹಿಂದೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ನಾವಿಬ್ಬರು ಜೊತೆಯಾಗಿ ಕೆಲಸ ಮಾಡಿದವರು. ಹಲವಾರು ರೀತಿಯಲ್ಲಿ ನನಗೆ ಸಹಕಾರ ನೀಡಿದ್ದಾರೆ ಎಂದರು. ಕೆಎಂಎಫ್ ಉಪಾಧ್ಯಕ್ಷ ಸ್ಥಾನ ರಾಜಕೀಯ ರಹಿತವಾಗಿ ಲಭಿಸಿದೆ. ಇದು ದೇವರ ದಯೆ ಎಂದ ಅವರು ಮುಂದಿನ ದಿನ ಸಣ್ಣ ಹೈನುಗಾರಿಕೆ ಸಂಬಂದಿಸಿ ಸಾಲ ನೀಡುವ ಕುರಿತು ಈಗಾಗಲೇ ಚರ್ಚಿಸಿದ್ದೇನೆ. ಇದರ ಜೊತೆಗೆ ಸಹಕಾರಿ ಸಂಘದ ಅಧಿಕಾರಿ ಅವರ ಮನವಿಗೆ ಸಂಬಂಧಿಸಿ ಚುನಾವಣೆ ಸಂದರ್ಭ ಕೆಲವು ಲೋಪದೋಷಗಳನ್ನು ಸರಿಪಡಿಸುವ ಕುರಿತು ಭರವಸೆ ನೀಡಿದರು. ಸಹಕಾರ ಸಂಘಗಳ  ಮರಾಠ  ಅಧಿಕಾರಿ ಶೋಭಾ ಶುಭ ಹಾರೈಸಿದರು.

ಶೇ.100ಸಾಲ ವಸೂಲಾತಿಗೆ ಗೌರವ:
ಶೇ.100 ಸಾಲ ವಸೂಲಾತಿ ಮಾಡಿ ಸಾಧನೆಗೈದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಶವ ಮೂರ್ತಿ ಅವರನ್ನು ೨೦ ಅಂಶಗಳ ಮಾಸಿಕ ಸಭೆಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಗೌರವಿಸಿದರು. ವೇದಿಕೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖಾ ಪ್ರಬಂಧಕ ರತ್ನಾಕರ್, ಸಹಾಯಕ ಮನೇಜರ್ ಸೀತಾರಾಮ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ರೈ ವಂದಿಸಿದರು.

LEAVE A REPLY

Please enter your comment!
Please enter your name here