ಕೇಪುಳು ನಿವಾಸಿ ವೃದ್ಧರೊಬ್ಬರು ನಾಪತ್ತೆ

0

 

ಪುತ್ತೂರು: ಕೇಪುಳು ತಾರಿಗುಡ್ಡೆ ನಿವಾಸಿ ವೃದ್ಧರೊಬ್ಬರು ನಾಪತ್ತೆಯಾದ ಬಗ್ಗೆ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಪುಳು ನಿವಾಸಿ ಸುಮಾರು 72 ವರ್ಷ ಪ್ರಾಯದ ಅವಿವಾಹಿತ ಬಿ ಯೂಸುಫ್ ಎಂಬವರು ನಾಪತ್ತೆಯಾದವರು. ಯೂಸುಫ್ ಅವರು ಆಗಾಗ ಮನೆಯಿಂದ ಪೇಟೆಗೆ ಹೋಗುವುದಾಗಿ ಹೇಳಿ ಹೋಗಿ ಸಂಜೆ ವೇಳೆ ಅಥವಾ ಮರುದಿನ ಬರುತ್ತಿದ್ದರು. ಮಾ.31ರಂದು ಅವರು ಮನೆಯಿಂದ ಪೇಟೆಗೆ ಹೋದವರು ಮತ್ತೆ ಮನೆಗೆ ಹಿಂದಿರುಗಿಲ್ಲ. ಈ ಕುರಿತು ಅವರ ಸಹೋದರ ಇಸ್ಮಾಯಿಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here