ಕೆಯ್ಯೂರು ಶಾಲೆಯ ನಿವೃತ್ತ ಶಿಕ್ಷಕ ಮೋಹನ್ ಕೆ.ಎನ್. ನಿಧನ

0

                                             

ಕೆಯ್ಯೂರು:  ಕುರಿಯ ಗ್ರಾಮದ ಕೈತಿಂಲ ನಿವಾಸಿ ಕೆ.ಪಿ.ಎಸ್ ಕೆಯ್ಯೂರಿನ ನಿವೃತ್ತ ಶಿಕ್ಷಕ ಮೋಹನ್ ಕೆ.ಎನ್(61) ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಎ8ರಂದು ನಿದನರಾದರು. ಮೃತರು  ಶಿಕ್ಷಕ ತರಬೇತಿಯನ್ನು ಸರಕಾರಿ ಶಿಕ್ಷಕರ ತರಬೇತಿ ಕೇಂದ್ರ ಕೋಲಾರದಲ್ಲಿ ಪಡೆದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಡಬೆಟ್ಟು ಇಲ್ಲಿ ಸರಕಾರಿ ಕರ್ತವ್ಯವನ್ನು ಆರಂಭಿಸಿದರು.  ಮುಂಡೂರು,ಸವಣೂರು, ಕೆಯ್ಯೂರು ಶಾಲೆಯಲ್ಲಿ 23ವರ್ಷ 4 ತಿಂಗಳು ಕರ್ತವ್ಯ ನಿರ್ವಹಿಸಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಶಾಲೆಯಲ್ಲಿ ಒಂಬತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಶಿಕ್ಷಣದ ಜೊತೆಯಲ್ಲಿ ಸೇವಾದಳ, ವಿವಿಧ ಹಂತದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಿ ತಾಲೂಕು, ಜಿಲ್ಲೆಗೆ ಕಳುಹಿಸಿರುತ್ತಾರೆ. ಮಕ್ಕಳಿಗೆ ಕವನ, ಕಥೆ, ಹಾಡಿನ ಮೂಲಕ ಮಕ್ಕಳ ಇಷ್ಟದ ಶಿಕ್ಷಕರಾಗಿದ್ದರು. ಅಲ್ಲದೆ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಮೃತರು ಪತ್ನಿ ಅರುಣಾ.ಕೆ, ಮಗಳು ಮಾನಸ ಕೆ.ಎಂ., ಮಗ ಮಹೇಶ ಕೆ.ಎಂ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here