ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಸೂಚಿಸಿದಂತೆ ದೇವಳದ ಆಗ್ನೇಯ ಭಾಗದಲ್ಲಿ ಯಾಗಶಾಲೆ ನಿರ್ಮಾಣವಾಗಿದ್ದು, ಎ.8ರಂದು ಅದರ ಉದ್ಘಾಟನೆ ನಡೆಯಿತು.
ಬೆಳಿಗೆ ಗಂಟೆ 9.18ಕ್ಕೆ ಗಣಪತಿ ಹವನದ ಮೂಲಕ ಯಾಗಶಾಲೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಚಾಲನೆ ನೀಡಲಾಯಿತು. ಗಣಪತಿ ಹವನದ ಪೂರ್ಣಾಹುತಿ ಬಳಿಕ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಯಾಗ ಶಾಲೆಯ ’ಮಹಾರುದ್ರ ಯಾಗ ಶಾಲೆ’ ಎಂಬ ನಾಮಫಲಕ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ, ವೀಣಾ ಬಿ.ಕೆ. ಬಿ ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಡಾ. ಸುಧಾ ಎಸ್ ರಾವ್ ಸೇರಿದಂತೆ, ಉದ್ಯಮಿ ಶಿವಪ್ರಸಾದ ರೈ, ಪದ್ಮನಾಭ ಶೆಟ್ಟಿ ಮತ್ತು ನಿತ್ಯ ಕರಸೇವಕರು ಉಪಸ್ಥಿತರಿದ್ದರು.
ನಿತ್ಯಕರಸೇವಕರ ಸೇವೆ
ದೇವಳದ ನಿತ್ಯ ಕರಸೇವಕರಾಗಿದ್ದ ದಿ.ಹರೀಶ್ ಪೈ ಸ್ಮರಣಾರ್ಥ ನಿತ್ಯಕರಸೇವಕರು ಮಹಾರುದ್ರ ಯಾಗ ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ.