ಕುಂಬ್ರದ ಹಿರಿಯ ವರ್ತಕ ಸುಂದರ ಪೂಜಾರಿಯವರಿಗೆ ವರ್ತಕರ ಸಂಘದಿಂದ ಶ್ರದ್ಧಾಂಜಲಿ ಸಭೆ

0

 

ಪುತ್ತೂರು: ಇತ್ತೀಚೆಗೆ ನಿಧನರಾದ ಕುಂಬ್ರದ ಹಿರಿಯ ವರ್ತಕ ಸುಂದರ ಪೂಜಾರಿಯವರಿಗೆ ಕುಂಬ್ರ ವರ್ತಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

 

ವರ್ತಕರ ಸಂಘದ ಹಿರಿಯ ಸದಸ್ಯರಾಗಿದ್ದುಕೊಂಡು, ಹಲವಾರು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿ, ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಸುಂದರ ಪೂಜಾರಿಯವರ ಬಗ್ಗೆ ವರ್ತಕರ ಸಂಘದ ಸ್ಥಾಪಕಧ್ಯಕ್ಷ ಶ್ಯಾಂ ಸಂದರ್ ರೈ ಕೊಪ್ಪಳರವರು, ಸುಂದರ ಪೂಜಾರಿಯವರ ಜೊತೆಗಿನ ಅನುಭವಗಳನ್ನು ಹಂಚಿಕೊಂಡು ನುಡಿನಮನ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.ಸಂಘದ ಅಧ್ಯಕ್ಷ ಮಾಧವ ರೈ ಕುಂಬ್ರ, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರರವರುಗಳು ಒಂದಷ್ಟು ನೆನಪುಗಳನ್ನು ಹಂಚಿಕೊಂಡು ನುಡಿನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಮೃತರ ಮಕ್ಕಳಾದ ರವಿ ಮತ್ತು ವಿಜಯ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಮಾಜಿ ಅಧ್ಯಕ್ಷ ಮೆಲ್ವೀನ್ ಮೊಂತೆರೋ, ಪುರಂದರ ರೈ ಕೊರಿಕ್ಕಾರು, ಪದ್ಮನಾಭ ಆಚಾರ್ಯ, ಜಯರಾಮ್ ಆಚಾರ್ಯ, ಭವ್ಯ ರೈ ಬಬ್ಲಿ, ಉದಯ ಆಚಾರ್ಯ, ಸಂತೋಷ್ ಟೈಲರ್, ಕಿಶೋರ್ ಮತ್ತಿತರರು ಭಾಗವಹಿಸಿದ್ದರು.ವರ್ತಕರ ಸಂಘದ ಪ್ರ.ಕಾರ್ಯದರ್ಶಿ ಅಝರ್ ಷಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here