ಪುತ್ತೂರು : ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಜರುಗಿದ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಬಳಿಕ ಇದೀಗ ೨ನೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವು ಇದೀಗ ೨ನೇ ವರ್ಷದಲ್ಲಿ ೨ನೇ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವು ಎ.೧೨ರಂದು ಬೆಳ್ಳಿಪ್ಪಾಡಿ ಶಾಲೆಯಲ್ಲಿ ಜರುಗಲಿದೆ. ಈ ಕುರಿತು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಹರಿಕಿಣ್ ಕೊಯಿಲ ಅವರು ಮಾತನಾಡಿ ಕರ್ನಾಟಕ ಸರಕಾರ ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು. ಪುತ್ತೂರು ಮತ್ತು ಕಡಬ ತಾಲೂಕು ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಪುತ್ತೂರು, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೆಳ್ಳಿಪಾಡಿ ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ಕಡಬ ತಾಲೂಕು ಎರಡನೇ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವು ಬೆಳ್ಳಿಪ್ಪಾಡಿಯಲ್ಲಿ ನಡೆಯಲಿದ್ದು, ದಿ| ಸೇಡಿಯಾಪುಕೃಷ್ಣಭಟ್ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಶಾಸಕ ಸಂಜೀವ ಮಠಂದೂರುರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕ.ರಾ.ಪ್ರಾ.ಶಾ.ಶಿಸಂಘ (ರಿ) ಬೆಂಗಳೂರುದ.ಕ. ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರು ಗೋಷ್ಠಿಗಳ ಉದ್ಘಾಟನೆ ಮಾಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಶುಭ ನುಡಿಗಳನ್ನಾಡಲಿದ್ದಾರೆ. ಪ್ರಥಮ ಸಮ್ಮೇಳನಾಧ್ಯಕ್ಷ ರಮೇಶ ಉಳಯ ಅಧ್ಯಕ್ಷತೆಯನ್ನು ಹಸ್ತಾಂತರ ಮಾಡಲಿದ್ದಾರೆ. ಬೆಳ್ಳಿಪಾಡಿ ಊರಿನ ಗಣ್ಯರಾದ ರಾಮಣ್ಣಗೌಡ, ಮೋಹಿನಿ, ಪುಷ್ಪಾಲೋಕಯ್ಯನಾಯ್ಕ, ಮಾರ್ಷೆಲ್ ವೇಗಸ್, ಲಕ್ಷ್ಮಣಗೌಡಕಂಬಳದಡ್ಡ, ಕಾರ್ತಿಕ್ ರೈಬೆಳ್ಳಿಪಾಡಿ, ವೆಂಕಪ್ಪಗೌಡದೇವಸ್ಯ, ಬಾಲಪ್ಪ ಗೌಡ ಮಳುವೇಲು, ನೀಲಪ್ಪಗೌಡ, ರಾಮಚಂದ್ರಗೌಡ. ಕೆ, ಮೋಹನಪಕ್ಕಳ, ಕೇಶವ ಭಂಡಾರಿ ಕೈಪ, ಪಾರ್ವತಿವಂಕಪ್ಪ ಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಬೆಳಿಗ್ಗೆ ಭುವನೇಶ್ವರಿ ಸ್ವಾಗತ:
ಬೆಳಿಗ್ಗೆ ಗಂಟೆ ೯ಕ್ಕೆ ಬೆಳ್ಳಿಪಾಡಿ ದೇವಸ್ಥಾನದ ವಠಾರದಲ್ಲಿ ನಡೆಯುವ ಕನ್ನಡ ಭುವನೇಶ್ವರಿಗೆ ಸ್ವಾಗತ ಕಾರ್ಯಕ್ರಮವನ್ನು ಪುತ್ತೂರು ಕ.ಸಾ.ಪ ದ ಅಧ್ಯಕ್ಷ ಪುತ್ತೂರುಉಮೇಶ್ ನಾಯಕ್ ಉದ್ಘಾಟಿಸಲಿದ್ದಾರೆ, ಕೋಡಿಂಬಾಡಿ ಗ್ರಾಮಪಂಚಾಯತ್ ಅಧ್ಯಕ್ಷ ರಾಮಚಂದ್ರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಡಬ ಕ.ಸಾ.ಪ.ದ ಅಧ್ಯಕ್ಷ ಶೇಷಪ್ಪ ರೈ ರಾಮಕುಂಜರವರಿ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಸಲಿದ್ದಾರೆ. ಗ್ರಾ. ಪಂ. ಉಪಾಧ್ಯಕ್ಷ ಉಷಲಕ್ಷ್ಮಣ ಪೂಜಾರಿ, ಮೋನಪ್ಪ ಪೂಜಾರಿಪಟ್ಟೆ, ಶ್ರೀಲತಾ ಉಪಸ್ಥಿತರಿರುತ್ತಾರೆ ಎಂದು ಹರಿಕಿರಣ್ ಅವರು ತಿಳಿಸಿದರು.
ಸಾಹಿತ್ಯ ಗೋಷ್ಠಿ:
ಮೊದಲಸಾಹಿತ್ಯಗೋಷ್ಠಿ ‘ಶಿಕ್ಷಣದಲ್ಲಿ ದೇಸಿಚಿಂತನೆ’ ವಿಷಯದಲ್ಲಿ ನಡೆಯಲಿದ್ದು, ಶಿಕ್ಷಕರಾದ ಸತೀಶ್ ಭಟ್ ಬಿಳಿನೆಲೆ ವಿಷಯ ಮಂಡಿಸಲಿದ್ದಾರೆ. ಡಾ| ವೇದಾವತಿ ಇವರ ಅಧ್ಯಕ್ಷತೆಯಲ್ಲಿನಡೆಯುವ ಈ ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿ ಶೋಭಾವಳಾಲು, ಅಬ್ರಹಾಂ ಉಪಸ್ಥಿತರಿರುತ್ತಾರೆ. ವಿಶೇಷ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಹರಿಪ್ರಸಾದ್ ಉಪಾಧ್ಯಾಯ ಇವರ ಅಧ್ಯಕ್ಷತೆಯಲ್ಲಿ ಕಿರುಕಥೆಗೋಷ್ಠಿ ನಡೆಯಲಿದ್ದು, ಸುರೇಶ್ ಕುಮಾರ್ ಆಶಯನುಡಿಗಳನ್ನಾಡಲಿದ್ದಾರೆ, ನಾರಾಯಣ ಇರ್ದೆ, ನವೀನ್ ವೇಗಸ್ ಉಪಸ್ಥಿತರಿರುತ್ತಾರೆ. ಶಾಂತಾ ಕಬಕ, ಶಶಿಕಲಾ ವರ್ಕಾಡಿ, ವಿಶಾಲಾಕ್ಷಿ ಇಡ್ಯೊಟ್ಟು, ಶಶಿಕಲಾ .ಬಿ, ಸರಿತಾ ರಾಮಕುಂಜ, ಮಲ್ಲೇಶಯ್ಯ ಎಚ್.ಎಂಇವರುಗಳು ಕಥೆವಾಚನ ನಡೆಸಲಿದ್ದಾರೆ ಎಮದು ಹರಿಕಿರಣ್ ಹೇಳಿದರು.
ಸಾಂಸ್ಕೃತಿಕ ಗೋಷ್ಠಿ:
ಮೊದಲಸಾಂಸ್ಕೃತಿಕ ಗೋಷ್ಠಿ ಜನಪದ ನಮನತಾಬ್ರ ಆರ್ಯಾಪು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಒಬಲೇಶ್, ಲಕ್ಷ್ಮಣನಾಯ್ಕ, ವೇದಾವತಿ ಉಪಸ್ಥಿತರಿರುತ್ತಾರೆ. ಶಿಕ್ಷಕರಾದ ಜಯಂತ ವೈ ಮತ್ತು ತಂಡ, ರಮೇಶ್ ಶಿರ್ಲಾಲು ತಂಡ, ರಾಣಿ ಎ.ಟಿ ತಂಡ, ಸ್ಮಿತಾಶ್ರೀ ಸಂಜಯನಗರ ತಂಡದವರು ಜನಪದಗೀತೆ ನೃತ್ಯಗಳನ್ನು ನಡೆಸಿಕೊಡಲಿದ್ದಾರೆ. ಎರಡನೇ ಸಾಂಸ್ಕೃತಿಕ ಗೋಷ್ಠಿ ಗಣರಾಜ ಕುಂಬ್ಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ವಿಜಯಕುಮಾರ್ ಐವರ್ನಾಡು ಆಶಯನುಡಿಗಳನ್ನಾಡಲಿದ್ದಾರೆ. ರಾಮಕೃಷ್ಣಮಲ್ಲಾರ, ಬಾಲಕೃಷ್ಣ ಸವಣೂರು ಉಪಸ್ಥಿತರಿರುತ್ತಾರೆ.ಕುವೆಂಪು, ಕಾರಂತ, ಬೇಂದ್ರೆ, ಸೇಡಿಯಾ ಪುಣ್ಯಸ್ಮರಣೆಯನ್ನು ಸವಿತಾಪಟ್ಟೆ, ಆಶಾಬೆಳ್ಳಾರೆ, ಜನಾರ್ಧನದುರ್ಗಾ, ಕವಿತಾ ಅಡೂರುರವರು ನಡೆಸಲಿದ್ದು. ಹರಿಪ್ರಸಾದ್, ಅನಿಲ್, ರಮೇಶ್ ಶಿರ್ಲಾಲು, ಶುಭಾರಾವ್ ಗಾನನಮನ ಮಾಡಲಿದ್ದಾರೆ. ಜಗನ್ನಾಥ ಅರಿಯಡ್ಕ, ಪ್ರಕಾಶ್ ವಿಟ್ಲ, ಜಯಲಕ್ಷ್ಮೀ, ಧನಂಜಯ ಮರ್ಕಂಜ ಚಿತ್ರ ನಮನವನ್ನು ಮಾಡಲಿದ್ದಾರೆ ಎಂದು ಹರಿಕಿರಣ್ ಹೇಳಿದರು.
ಸಂಜೆ ಸಮಾರೋಪ:
ಸಂಜೆ ಸಮಾರೋಪ ಸಮಾರಂಭದಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದನ್ ಸಾಧಕರನ್ನು ಸನ್ಮಾನಿಸಲಿದ್ದಾರೆ, ಸಾಹಿತ್ಯ ಕ್ಷೇತ್ರದಲ್ಲಿ ಕವಿತಾ ಅಡೂರು ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುಡ್ಡಪ್ಪ ಬಲ್ಯ ಅವರು ಸನ್ಮಾನ ಸ್ವೀಕರಿಸಲಿದ್ದಾರೆ. ನಾರಾಯಣಬಭಟ್ .ಟಿ ರಾಮಕುಂಜ ಇವರು ಸಮಾರೋಪ ಮಾತುಗಳನ್ನಾಡಲಿದ್ದಾರೆ, ನಿವೃತ್ತ ಶಿಕ್ಷಕ ಶಿವಶಂಕರಭಟ್, ಉಂಡೆಮನೆ, ಪದ್ಮನಾಭ ಆಳ್ವ ಬೆಳ್ಳಿಪಾಡಿ, ಶಿಕ್ಷಕ ಸಂಘದ ಜಿಲ್ಲಾಕಾರ್ಯದರ್ಶಿಗಳಾದ ವಿಮಲ್ ಕುಮಾರ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿಗುಡ್ಡಪ್ಪಬಲ್ಯ, ಕವಿತಾ ಅಡೂರು ಇವರಿಗೆ ಸನ್ಮಾನ ನಡೆಯಲಿದೆ, ನಂತರ ಶಿಕ್ಷಕಕಲಾವಿದರಿಂದ ಶಾಪಚಕ್ರ ಎಂಬ ಯಕ್ಷಗಾನ ಬಯಲಾಟನಡೆಯಲಿದೆ ಎಂದುಸಾಹಿತ್ಯಪರಿಷತ್ತಿನಅಧ್ಯಕ್ಷರಾದಹರಿಕಿರಣ್ ಕೊಯಿಲ ತಿಳಿಸಿದ್ದಾರೆ.
ಶಿಕ್ಷಣಾಧಿಕಾರಿಯವರ ಆಶಯದಂತೆ ಆರಂಭಗೊಂಡ ಸಾಹಿತ್ಯ ಸಮ್ಮೇಳನ
ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಲೋಕೇಶ್ ಅವರ ಆಶಯದಂತೆ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕಳೆದ ವರ್ಷ ಆರಂಭಗೊಂಡಿತ್ತು. ಇದೀಗ ೨ನೇ ವರ್ಷದಲ್ಲಿ ೨ನೇ ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳ ನಡೆಯುತ್ತಿರುವುದು ಸಂತೋಷದ ವಿಚಾರ. ಹಲವಾರು ಪ್ರತಿಭಾವಂತ ಶಿಕ್ಷಕರನ್ನು ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುರುತಿಸಿ ಅವರ ಮೂಲಕ ಹಲವು ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸಂಚಾಲಕ ತಾರಾನಾಥ ಸವಣೂರು ತಿಳಿಸಿದರು.