- ಪುತ್ತೂರಿನಿಂದ ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ
ಪುತ್ತೂರು: ದೇಯಿಬೈದ್ಯೆತಿ ಮತ್ತು ಕೋಟಿ ಚೆನ್ನಯ ಮೂಲಸ್ಥಾನ ಬಡಗನ್ನೂರು ಗ್ರಾಮದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಮಾ.3ರಿಂದ 7ರ ತನಕ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಪುತ್ತೂರಿನಿಂದ ವೈಭವದ ಹಸಿರುಕಾಣಿಕೆ ಸಮರ್ಪಣೆಯನ್ನು ಮೆರವಣಿಗೆ ಮೂಲಕ ಕಳುಹಿಸಿಕೊಡಲಾಯಿತು.
ವಿವಿಧ ಗ್ರಾಮ ಸಮಿತಿ ಸೇರಿ ಊರ ಪರವೂರಿನಿಂದ ಬಂದ ಭಕ್ತರು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಮಂದಿರದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿ ಬಳಿಕ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಂದಿರದ ಅರ್ಚಕ ಅಕ್ಷತ್ ಶಾಂತಿ ಅವರು ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ ಬಳಿಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ತೆಂಗಿನ ಕಾಯಿ ಒಡೆದು ಹಸಿರುವಾಣಿಗೆ ಚಾಲನೆ ನೀಡಿದರು. ಈ ಸಂದರ್ಭದಲಿ ಕ್ಷೇತ್ರ ಆಡಳಿತ ಸಮಿತಿ ಗೌರವಾಧ್ಯಕ್ಷ ಜಯಂತ್ ನಡುಬೈಲು, ನೇಮೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಹೊರ ಕಾಣಿಕೆ ಸಮಿತಿಯ ಸಂಚಾಲಕ ಡಾ| ರವಿ ಪೂಜಾರಿ ಕಕ್ಕೆಪದವು ಸೇರಿದಂತೆ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು.