ಪುತ್ತೂರು: ಕಬಕ ಹಿ.ಪ್ರಾ.ಶಾಲೆಯಿಂದ 2020 ನೇ ಫೆ.13ರಂದು ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿ ಆತನಿಂದ ಕಳವು ಗೈದ ಲ್ಯಾಪ್ ಟಾಪ್ ಅನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
2020 ನೇ ಫೆ.13 ರಂದು ಕಬಕ ಹಿ.ಪ್ರಾ ಶಾಲೆಯಿಂದ ಲ್ಯಾಪ್ ಟಾಪ್ ಕಳವು ನಡೆದಿರುವುದು ಶಾಲಾ ಮುಖ್ಯಗುರು ಶಾಲೆಯ ಬೀಗ ತೆಗೆಯುವಾಗ ಬೆಳಕಿಗೆ ಬಂದಿತ್ತು. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದ ಸಂದರ್ಭ 2020 ನೇ ಮಾ.12 ಕ್ಕೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ದಸ್ತಗಿರಿಯಾದ ಮಂಜನಾಡಿ ಗ್ರಾಮದ ಮೊಹಮ್ಮದ್ ಅಬ್ದುಲ್ ಫಯಾನ್ (22ವ) ತನ್ನ ಹೇಳಿಕೆಯಲ್ಲಿ ಕಬಕ ಶಾಲೆಯಿಂದ ಕಳವು ಮಾಡಿರುವುದನ್ನು ತಿಳಿಸಿದ್ದ.
ಸದ್ರಿ ಆರೋಪಿಯು ಪ್ರಸ್ತುತ ಬೆಳಗಾಂ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಈತನನ್ನು ಬಾಡಿ ವಾರೆಂಟ್ ಮುಖೇನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಕೋರಿಕೊಂಡಂತೆ , ಮಾನ್ಯ ನ್ಯಾಯಾಲಯವು ಮಾ.೧೬ ರಂದು ಆದೇಶವನ್ನು ಹೊರಡಿಸಿದ್ದು, ಬೆಳಗಾಂ ಜಿಲ್ಲಾ ಕಾರಗೃಹದಿಂದ ಆರೋಪಿಯ್ನು ವಶಕ್ಕೆ ಪಡೆದು 5 ದಿನಗಳ ಕಾಲ ಪೊಲೀಸ್ ಭದ್ರಕೆಗೆ ಪಡೆದು ತನಿಖೆ ನಡೆಸಿ, ತನಿಖೆಯ ಬಳಿಕ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸುವರೇ ಆದೇಶ ನೀಡಿರುತ್ತಾರೆ. ಸದ್ರಿ ಆದೇಶದಂತೆ ಮಾ.18 ರಂದು ಆರೋಪಿಯನ್ನು ಬೆಳಗಾಂ ಕಾರಾಗೃಹದಿಂದ ಪೊಲೀಸ್ ವಶಕ್ಕೆ ಪಡೆದು ಪ್ರಕರಣದ ಕುರಿತು ವಿಚಾರಿಸಿದಾಗ ಈ ಪ್ರಕರಣದ ತಕ್ಷೀರಿನ ಬಗ್ಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಂತೆ ಮಾ.೧೯ ರಂದು ಮಂಗಳೂರಿನ ಅಂಗಡಿಗೆ ಹೋಗಿ ಆರೋಪಿಯು ತೋರಿಸಿಕೊಟ್ಟಂತೆ ಸದ್ರಿ ಅಂಗಡಿಯ ಮಾಲೀಕನಿಂದ ತಾನು ಆರೋಪಿಯಿಂದ ಖರೀದಿಸಿದ ಲ್ಯಾಪ್‌ಟ್ಯಾಪ್‌ನ್ನು ನೀಡಿದ್ದನ್ನು ಸ್ವಾಧೀನಪಡಿಕೊಳ್ಳಲಾಗಿದೆ.