ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಂದ ಪ್ಲಾಸ್ಟಿಕ್ ಮನೆ ನಿರ್ಮಾಣ

0

ಪುತ್ತೂರು: ಕಡಿಮೆ ಉಪಯುಕ್ತತೆ ಮತ್ತು ಪರಿಸರದ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುವ, ಗುರುತಿಸಲಾದ ಕೆಲವೊಂದು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಮನೆಯ ನಿರ್ಮಾಣವನ್ನು ವಿವೇಕಾನಂದ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಮಾಡಿದರು.


ಅಭಿವೃದ್ಧಿಯ ಜೊತೆಜೊತೆಗೇ ಬೆಳೆದುಬಂದು ಅವನತಿಗೂ ಕಾರಣವಾಗುತ್ತಿರುವ ವಸ್ತು ಪ್ಲಾಸ್ಟಿಕ್. ಇಂದು ನಾವು ಉತ್ಪಾದಿಸುವ ಪ್ಲಾಸ್ಟಿಕ್‌ನಲ್ಲಿ ಹೆಚ್ಚಿನ ಮಟ್ಟದ ಪ್ಲಾಸ್ಟಿಕ್ ವಸ್ತುವನ್ನು ಒಂದು ಬಾರಿ ಬಳಸಿ ಎಸೆಯಲಾಗುತ್ತದೆ. ಅದಕ್ಕಾಗಿ ಎಲ್ಲೆಂದರಲ್ಲಿ ಕಸಗಳನ್ನು ಬಿಸಾಡುವ ಬದಲು ಪ್ಲಾಸ್ಟಿಕ್ ಮನೆ ಎಂದು ಹೊಸ ಆಲೋಚನೆಯ ಮೂಲಕ ರೂಪುಗೊಂಡು ಹಾಗೂ ಜಾಗೃತಿ ಮೂಡಿಸುವ ಸಲುವಾಗಿ, ಸ್ವಚ್ಛ ಪರಿಸರ ನಿರ್ಮಾಣದ ಉದ್ದೇಶವನ್ನು ಹೊಂದಿದ ಈ ಉತ್ತಮ ರೀತಿಯ ಕಾರ್ಯವು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಂದ ನಡೆಯಿತು.

LEAVE A REPLY

Please enter your comment!
Please enter your name here