ಗಾಂಧಿ ಜಯಂತಿ ಕಾರ್ಯಕ್ರಮ: ಮುಂಡೂರು ಗ್ರಾ.ಪಂ, ನೆಕ್ಕಿಲಾಡಿಯ ನಮ್ಮೂರು ಸಂಘಟನೆಗೆ `ಸುದ್ದಿ’ ಪ್ರಶಸ್ತಿ

0

ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ತೋರಿದ ಗ್ರಾಮ ಪಂಚಾಯತ್‌ಗಳ ಪೈಕಿ ಮುಂಡೂರು ಗ್ರಾಮ ಪಂಚಾಯತ್ ಪ್ರಶಸ್ತಿಗೆ ಭಾಜನವಾಗಿದೆ. ಸಂಘ ಸಂಸ್ಥೆಗಳ ವಿಭಾಗದಲ್ಲಿ ‘ನಮ್ಮೂರು ನೆಕ್ಕಿಲಾಡಿ’ ಸಂಘಟನೆ ಬಹುಮಾನಕ್ಕೆ ಆಯ್ಕೆಯಾಗಿದೆ.

ಗಾಂಽ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಸುದ್ದಿ ಬಳಗದ ಗ್ರಾಮ ಸ್ವರಾಜ್ಯ ಗಾಂಧಿರಥ ಪುತ್ತೂರು ಮತ್ತು ಕಡಬ ತಾಲೂಕಿನಾದ್ಯಂತ ಸಂಚರಿಸಿತ್ತು. ಈ ವೇಳೆ ಎಲ್ಲಾ ಗ್ರಾಮ ಪಂಚಾಯತ್ ವತಿಯಿಂದ ರಥವನ್ನು ಸ್ವಾಗತಿಸಲಾಗಿತ್ತು. ಜತೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾತ್ರವಲ್ಲದೆ, ಗಾಂಧಿಜಯಂತಿ ದಿನಾಚರಣೆಯಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಪೈಕಿ ಸುದ್ದಿಯ ಗ್ರಾಮ ಸ್ವರಾಜ್ಯ ಗಾಂಧಿ ರಥಕ್ಕೆ ಭವ್ಯ ಸ್ವಾಗತ ನೀಡಿ, ನೈತಾಡಿಯಿಂದ ಗ್ರಾಮ ಪಂಚಾಯತ್ ಕಛೇರಿಯವರೆಗೆ ಅಭೂತಪೂರ್ವ ವಾಹನ ಜಾಥ ನಡೆಸಿದ್ದಲ್ಲದೆ ಗಾಂಧಿ ಜಯಂತಿಯಂದು ಗಾಂಧಿ ನಡಿಗೆ, ಸ್ವಚ್ಛತೆ, ಗಾಂಧಿ ವೇಷಭೂಷಣದೊಂದಿಗೆ ಆಕರ್ಷಕ ಜಾಥಾ, ಪ್ರತಿಜ್ಞಾ ವಿಧಿ ಸ್ವೀಕಾರ ಮತ್ತು ತೆಂಗಿನ ಗಿಡ ನೆಡುವಿಕೆಯಂತಹ ಕಾರ್ಯಕ್ರಮ ಆಯೋಜಿಸಿದ್ದ ‘ಮುಂಡೂರು ಗ್ರಾಮ ಪಂಚಾಯತ್’ ಪ್ರಶಸ್ತಿಗೆ ಆಯ್ಕೆಯಾಗಿದೆ.

ಸಂಘ ಸಂಸ್ಥೆಗಳ ಪೈಕಿ ಗಾಂಧಿನಡಿಗೆ, ಕಾಲೋನಿಯಲ್ಲಿ ಮನೆ ಮನೆ ಭೇಟಿ ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದ ೩೪ ನೆಕ್ಕಿಲಾಡಿಯ ‘ನಮ್ಮೂರು ನೆಕ್ಕಿಲಾಡಿ’ ಸಂಘಟನೆ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಸುದ್ದಿ ಬಳಗದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here