- ಬೊಳ್ಳಾಡಿ ವೆಂಕಪ್ಪ ಗೌಡರಿಂದ ಪುತ್ತೂರಿಗೆ ಹೊಸತನ ತರುವ ಕೆಲಸ: ಮಠಂದೂರು
ಪುತ್ತೂರು: 1978ರಿಂದ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಬೆಂಗಳೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಸಂಸ್ಥೆ ‘ಬೊಳ್ಳಾಡಿ ಡೆಕೊರೇಟರ್ಸ್’ ಈಗ ಪುತ್ತೂರು ನಗರಕ್ಕೆ ಹೊಸ ವಿಚಾರವೊಂದನ್ನು ಪರಿಚಯಿಸಿದೆ. ಮನೆ, ಕಚೇರಿಗಳಲ್ಲಿ ಸ್ಥಳಾವಕಾಶ ಕಡಿಮೆ ಇರುವ ಸನ್ನಿವೇಶದಲ್ಲಿ, ಮನೆಯೊಳಗಿನ ಸ್ಥಳಾವಕಾಶವನ್ನು ಉಳಿಸುವ ನಿಟ್ಟಿನಲ್ಲಿ ಕಂಫೋಲ್ಡ್ ಸ್ಪೇಸ್ ಸೇವಿಂಗ್ ಫರ್ನಿಚರ್ಸ್‌ನ ಕಾನ್ಸೆಪ್ಟ್‌ನ್ನು ಪುತ್ತೂರಿಗೆ ಪರಿಚಯಿಸಿದ್ದು, ಪುತ್ತೂರು ನೆಹರೂನಗರದಲ್ಲಿ, ಮಾಸ್ಟರ್ ಪ್ಲಾನರಿಯ ಎದುರುಗಡೆ ಇರುವ ಕಟ್ಟಡದ ಪ್ರಥಮ ಮಹಡಿಯಲ್ಲಿ ಸುಸಜ್ಜಿತವಾದ ‘ಕಂಫೋಲ್ಡ್ ಸ್ಪೇಸ್ ಸೇವಿಂಗ್ ಫರ್ನಿಚರ್’ ಶೋರೂಂ ಫೆ.೨೦ರಂದು ಬೆಳಗ್ಗೆ ಶುಭಾರಂಭಗೊಂಡಿತು.
ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಬೊಳ್ಳಾಡಿ ಡೆಕೋರೇಟ ರ‍್ಸ್‌ನ ‘ಕಂಫೋಲ್ಡ್ ಸ್ಪೇಸ್ ಸೇವಿಂಗ್ ಫರ್ನಿಚರ್’ ಶೋರೂಂನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಕುಕ್ಕುಮುಗೇರು ಉಳ್ಳಾಕುಲು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಚಿಕ್ಕಪ್ಪ ನಾಕ್ ದೀಪ ಪ್ರಜ್ವಲನೆಗೈದರು.
ಪುತ್ತೂರಿಗೆ ಹೊಸತನವನ್ನು ತರುವ ಕೆಲಸ: ಸಂಜೀವ ಮಠಂದೂರು: ಈ ವೇಳೆ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ಇಂದು ಜಗತ್ತಿನಲ್ಲಿ ಪರಿವರ್ತನೆಯನ್ನು ಕಾಣುತ್ತಿದ್ದೇವೆ. ಕೋವಿಡ್ ಬಂದ ಬಳಿಕ ಜನಜೀವನ ಅಸ್ತವ್ಯಸ್ಥೆಗೊಳ್ಳುವ ಜೊತೆಗೆ ಪರಿವರ್ತನೆಗಳೂ ಆಗಿವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬದಲಾವಣೆಗಳಾಗಿವೆ. ದೇಶದ ಪ್ರಧಾನಿಗಳು ಯುವಕರು ಸ್ವಾವಲಂಬಿಗಳಾಗಬೇಕೆನ್ನುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತಂದಿದ್ದಾರೆ. ಪೇಟೆಯಲ್ಲಿರುವ ಸವಲತ್ತುಗಳು ಹಳ್ಳಿಯಲ್ಲಿ ಸಿಕ್ಕಾಗ ಹಳ್ಳಿ ಬದಲಾವಣೆಯನ್ನು ಕಾಣಬಹುದು. ಪುತ್ತೂರಿಗೆ ಹೊಸತನವನ್ನು ತರುವ ಕೆಲಸವನ್ನು ಬೊಳ್ಳಾಡಿ ವೆಂಕಪ್ಪ ಗೌಡರು ಮಾಡಿದ್ದಾರೆ. ಪುತ್ತೂರಿಗೆ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಿದ ಮಾಸ್ಟರ್ ಪ್ಲಾನರಿಯ ಮುಂಭಾಗದಲ್ಲಿ ನೂತನ ಸಂಸ್ಥೆ ಶುಭಾರಂಭಗೊಂಡಿದೆ. ಪುತ್ತೂರು ಆಸುಪಾಸಿನ ಜನತೆ ಈ ಹೊಸ ಕಾನ್ಸೆಪ್ಟ್‌ನ ಸದುಪಯೋಗ ಪಡೆದುಕೊಂಡು ಸುಖೀ, ಸಮೃದ್ಧಿಯ ಬದುಕನ್ನು ಕಾಣಲಿ ಎಂದು ಶುಭಹಾರೈಸಿದರು.
ದೃಢ ನಿರ್ಧಾರ, ಪರಿಶ್ರಮ, ಅನುಭವದಿಂದ ಯಶಸ್ಸು: ಎಸ್.ಕೆ. ಆನಂದ ಕುಮಾರ್: ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಿದ್ದ ಮಾಸ್ಟರ್ ಪ್ಲಾನರಿಯ ಆಡಳಿತ ನಿರ್ದೇಶಕರಾದ ಎಸ್.ಕೆ. ಆನಂದ ಕುಮಾರ್ ಅವರು ‘ಕಂಫೋಲ್ಡ್ ಡೆಕೋರೇಟರ‍್ಸ್’ನ ಲಾಂಛನವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಉದ್ಯಮದಲ್ಲಿ ಯಶಸ್ಸು ಕಾಣಬೇಕೆನ್ನುವುದು ಎಲ್ಲರ ಕನಸು. ಆದರೆ ಯಶಸ್ಸು ಕಾಣಬೇಕಿದ್ದರೆ ಮೂರು ಅಂಶಗಳು ಪ್ರಮುಖವಾಗಿ ಬೇಕು. ಮೊತ್ತಮೊದಲು ದೃಢ ನಿರ್ಧಾರ ಬೇಕು. ಎರಡನೆಯದಾಗಿ ಜ್ಞಾನ, ಕೌಶಲ್ಯತೆಯನ್ನು ಹೊಂದಿಕೊಂಡ ಕಠಿಣ ಪರಿಶ್ರಮ ಬೇಕು. ಮೂರನೆಯದಾಗಿ ನಮ್ಮವರಿಂದ ಸಿಗುವ ಅನುಭವ ಮತ್ತು ಅರಿವನ್ನು ಉಪಯೋಗಿಸುವ ಗುಣಲಕ್ಷಣ ಬೇಕು. ಇಷ್ಟಿದ್ದರೆ ವ್ಯವಹಾರ ಯಶಸ್ಸು ಆಗುತ್ತದೆ. ಯಾವುದಾದರೂ ಒಂದು ವಿಚಾರದಲ್ಲಿ ವಿಶೇಷ ಗುಣ ಇದ್ದರೆ ಯಶಸ್ಸಿಗೆ ಪೂರಕವಾಗುತ್ತದೆ. ಭಗವದ್ಗೀತೆಯಲ್ಲಿ ಹೇಳಿದಂತೆ ಜ್ಞಾನ ತುಂಬಿದ ಕರ್ಮ ಮಾಡಬೇಕು. ಕರ್ಮಫಲವನ್ನು ತ್ಯಾಗ ಮಾಡಬೇಕು. ಇಷ್ಟನ್ನು ಸಮರ್ಪಕವಾಗಿ ನಿರ್ವಹಿಸಿದರೆ ಉದ್ಯಮದಲ್ಲಿ ಯಶಸ್ಸಾಗಬಹುದು ಎಂದು ಹೇಳಿದರು.
ನೂತನ ಉದ್ಯಮ ಮತ್ತಷ್ಟು ಯಶಸ್ಸು ಕಾಣಲಿ: ಎ.ಚಿಕ್ಕಪ್ಪ ನಾಕ್: ಕುಕ್ಕುಮುಗೇರು ಉಳ್ಳಾಕುಲು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಚಿಕ್ಕಪ್ಪ ನಾಕ್ ಅವರು ಮಾತನಾಡಿ, ನೂತನ ಉದ್ಯಮವು ಬಹಳಷ್ಟು ಯಶಸ್ಸು ಗಳಿಸಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕುಕ್ಕುಮುಗೇರು ಉಳ್ಳಾಕುಲು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ. ಚಿಕ್ಕಪ್ಪ ನಾಕ್‌ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಬೊಳ್ಳಾಡಿ ಡೆಕೊರೇಟರ‍್ಸ್ ಮಾಲಕರಾದ ವೆಂಕಪ್ಪ ಗೌಡ ಬೊಳ್ಳಾಡಿ – ಧರ್ಮಾವತಿ ವೆಂಕಪ್ಪ ದಂಪತಿ ಹೂಗುಚ್ಛ ನೀಡಿ ಅಭಿನಂದಿಸಿದರು. ಶಾಸಕ ಸಂಜೀವ ಮಠಂದೂರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಬೊಳ್ಳಾಡಿ ಡೆಕೊರೇಟರ‍್ಸ್ ಮಾಲಕರಾದ ಬಿ.ವೆಂಕಪ್ಪ ಬೊಳ್ಳಾಡಿ, ಪತ್ನಿ ಧರ್ಮಾವತಿ ವೆಂಕಪ್ಪ ಗೌಡ ಬೊಳ್ಳಾಡಿ, ಹಿರಿಯ ಪುತ್ರ ನಿತಿನ್, ಕಿರಿಯ ಪುತ್ರ ನಮಿತ್ ಬೊಳ್ಳಾಡಿ, ಮಾಲಕರ ಕುಟುಂಬಸ್ಥರಾದ ಎಂ.ಡಿ. ವಿಜಯ ಕುಮಾರ್, ಎಂ.ಡಿ. ನಿರಂಜನ್, ಬೊಳ್ಳಾಡಿ ಮೋಹನ ಗೌಡ, ನಿವೃತ್ತ ಫಾರೆಸ್ಟ್ ಆಫೀಸರ್ ರಾಮಣ್ಣ ಗೌಡ ಬೊಳ್ಳಾಡಿ, ಆನಂದ ಗೌಡ ಬೊಳ್ಳಾಡಿ, ಎಂ.ಕೆ. ಮೋಹನ್ ಕುಮಾರ್, ಪ್ರಕಾಶ್ ಕಡಬ, ಶಿವರಾಮ ಬೊಳ್ಳಾಡಿ, ಸುದ್ದಿ ಸೌಹಾರ್ದ ಸಹಕಾರಿ ಸಂಘದ ಉಪಧ್ಯಕ್ಷರಾದ ಯು.ಪಿ.ರಾಮಕೃಷ್ಣ, ಕಂಫೋಲ್ಡ್ ಸಂಸ್ಥೆಯ ಮಾಲಕ ಶಫೀಕ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಲಹಾ ಸಮಿತಿ ಸದಸ್ಯರಾದ ಶಿವರಾಮ ಗೌಡ ಇದ್ಯಪೆ, ಎಪಿಎಂಸಿ ಪುತ್ತೂರು ಮಾಜಿ ಅಧ್ಯಕ್ಷರಾದ ಅಮ್ಮಣ್ಣ ರೈ, ಪ್ರಮುಖರಾದ ಲಿಂಗಪ್ಪ ಗೌಡ, ಸೇರಿದಂತೆ ಗಣ್ಯರು, ಬಂಧುಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.
ಬೊಳ್ಳಾಡಿ ಡೆಕೊರೇಟರ‍್ಸ್ ಮಾಲಕರಾದ ನಮಿತ್ ಬೊಳ್ಳಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಬೊಳ್ಳಾಡಿ ವಂದಿಸಿದರು.
ಬೊಳ್ಳಾಡಿ ವೆಂಕಪ್ಪ ಗೌಡರು 1978ರಿಂದ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಸ್ವಂತ ಉದ್ಯಮ ಆರಂಭಿಸಿ ಈಗ 48 ವರ್ಷಗಳ ಅನುಭವ ಹೊಂದಿದ್ದಾರೆ. ಮಗ ನಮಿತ್ ಆರ್ಕಿಟೆಕ್ಚರ್ ಪೂರೈಸಿ ಇಂಟೀರಿಯರ್ ಡಿಸೈನಿಂಗ್‌ನಲ್ಲಿ ಅನುಭವ ಪಡೆದುಕೊಂಡು ಗೋವಾದಲ್ಲೂ ಪರಿಣತ ಆರ್ಕಿಟೆಕ್ಟ್‌ಗಳ ಜೊತೆ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಈಗ ತಂದೆ ಉದ್ಯಮವನ್ನು ಮುನ್ನಡೆಸುವ ನಿಟ್ಟಿನಲ್ಲಿ ನಮ್ಮ ಹುಟ್ಟೂರು ಪುತ್ತೂರಿನಲ್ಲಿ ಹೊಸ ಕಾಂಫೋಲ್ಡ್ ಕಾನ್ಸೆಪ್ಟ್‌ನ್ನು ಪರಿಚಯಿಸಿದ್ದಾರೆ. ಇದು ಸ್ಥಳಾವಕಾಶ ಉಳಿಸುವ ಪರಿಕಲ್ಪನೆ. ಬೇಕಾದಾಗ ಬಿಡಿಸುವ, ಬೇಡವಾದಾಗ ಮಡಚಿ ಇಡುವಂತಹ ಫರ್ನಿಚರ‍್ಸ್, ಇಂಟೀರಿಯರ‍್ಸ್ ಐಟಮ್ಸ್ ಇಲ್ಲಿವೆ. ಹೊಸದಾಗಿ ಮನೆ ಕಟ್ಟುವವರು, ಮನೆ ರಿಪೇರಿ ಮಾಡಿಸುತ್ತಿರುವವರು ಒಂದು ಬಾರಿ ಇಲ್ಲಿಗೆ ಬಂದು ಭೇಟಿ ನೀಡಿ ನೋಡಬಹುದು. ತಮ್ಮ ಮನದಿಚ್ಛೆಯ ಫರ್ನಿಚರ‍್ಸ್‌ಗಳನ್ನು ಆರ್ಡರ್ ಮಾಡಬಹುದು – ಧರ್ಮಾವತಿ ವೆಂಕಪ್ಪ ಬೊಳ್ಳಾಡಿ,
ಇದು ಸಂಪೂರ್ಣ ಸ್ಥಳಾವಕಾಶ ಉಳಿತಾಯದ ಕಾನ್ಸೆಪ್ಟ್. ಇವುಗಳನ್ನು ನೋಡುವಾಗ ದುಬಾರಿಯಾಗಿ ಕಾಣಬಹುದು. ಆದರೆ ಬಂದು ನೋಡಿ ವಿಚಾರಿಸಿದಾಗ ಇದರ ಉಪಯುಕ್ತತೆ ತಿಳಿಯುತ್ತದೆ. ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಎಲ್ಲಾ ಫರ್ನಿಚರ್‌ಗಳು ಸಂಪೂರ್ಣ ವಾಟರ್‌ಪ್ರೂಫ್ ಆಗಿರುತ್ತದೆ. ಕನಿಷ್ಠ ೫ ವರ್ಷಗಳ ವಾರಂಟಿಯೂ ಇದೆ. ಆರ್ಡರ್ ಕೊಟ್ಟ 30-35 ದಿನಗಳಲ್ಲಿ ಡೆಲಿವರಿ ಮಾಡಲಾಗುತ್ತದೆ. ಸಮಯ, ಸ್ಥಳಾವಕಾಶದ ಉಳಿತಾಯ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ತಾಣ. ಅವಶ್ಯಕತೆ ಇದ್ದಾಗ ಬಿಡಿಸಿ, ಬೇಡವಾದಾಗ ಗೋಡೆಗೆ ಮಡಚಿ ಇಡಬಹುದಾದಂತಹ ವಾಲ್‌ಬೆಡ್‌ಗಳು, ಸ್ಟೋರೇಜ್ ಇರುವ ಬೆಡ್‌ಗಳು, ಕಿಚನ್ ಸೆಟಪ್‌ಗಳು, ಸ್ಲೈಡಿಂಗ್ ವಾರ್ಡ್‌ರೋಬ್‌ಗಳು, ಡೈನಿಂಗ್ ಟೇಬಲ್‌ಗಳು, ಮನೆ, ಕಚೇರಿಗೆ ಬೇಕಾದ ಸ್ಪೇಸ್ ಸೇವಿಂಗ್ ಫರ್ನಿಚರ್‌ಗಳು, ಸೋಫಾ ಬೆಡ್ ಇತ್ಯಾದಿ ಐಟಂಗಳು ಇಲ್ಲಿವೆ – ನಿತಿನ್ ಬೊಳ್ಳಾಡಿ
ಇದು ಪುತ್ತೂರಿಗೆ ಹೊಸ ಕಾನ್ಸೆಪ್ಟ್. ಸಣ್ಣಕೋಣೆಯನ್ನೂ ಸುಂದರವಾಗಿ, ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬಹುದು ಎನ್ನುವುದು ಇದರ ವೈಶಿಷ್ಟ್ಯತೆ. ಸಣ್ಣ ಸ್ಥಳಾವಕಾಶವನ್ನೂ ಬೆಡ್‌ರೂಮನ್ನಾಗಿ ಪರಿವರ್ತಿಸಬಹುದು. ಬೆಡ್ ಕಮ್ ಸೋಫಾ, ಡೈನಿಂಗ್ ಟೇಬಲ್, ಕಿಚನ್ ಸೆಟಪ್ಸ್ ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಗ್ರಾಹಕರು ಒಂದು ಬಾರಿ ಶೋರೂಂಗೆ ಭೇಟಿ ನೀಡಿ ಸಮಗ್ರವಾದ ಮಾಹಿತಿಯನ್ನು ಪಡೆದುಕೊಂಡು ಹೊಸ ಅನುಭವವನ್ನು ಪಡೆದುಕೊಳ್ಳಬಹುದು – ಸಮೀಕ್ಷಾ, ಶೋರೂಂ ವ್ಯವಸ್ಥಾಪಕರು