ಮಾಣಿ ಕರ್ನಾಟಕ ಪ್ರೌಢ ಶಾಲೆಯ ಸಂಪರ್ಕ  ರಸ್ತೆ ಉದ್ಘಾಟನೆ

0

  • ಜನರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ: ರಾಜೇಶ್ ನಾಯ್ಕ್

ವಿಟ್ಲ:  ಶಾಸಕರ ಪ್ರದೇಶಾಭಿವೃದ್ಧಿಯ ರೂ 10 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಬಂಟ್ವಾಳ ತಾಲೂಕಿನ ಮಾಣಿ ಕರ್ನಾಟಕ ಪ್ರೌಢ ಶಾಲೆಯ ಸಂಪರ್ಕ  ರಸ್ತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಉದ್ಘಾಟಿಸಿದರು.

 


ಬಳಿಕ ಮಾತನಾಡಿದ ಅವರು   ಜನರ ಕಷ್ಟಗಳಿಗೆ, ಅಗತ್ಯಗಳಿಗೆ ಸದಾ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ ವಾಗಿದ್ದು, ಎಷ್ಟು ಸಾಧ್ಯವೋ ಅಷ್ಟು ಮಾಡುತ್ತೇವೆ ಎಂಬ ಭರವಸೆ ನೀಡಿದರು. ಜನಪ್ರತಿನಿಧಿಯಾಗಿ ಕ್ಷೇತ್ರ ದ ಜನರ ಪ್ರತಿಯೊಂದು ಸಮಸ್ಯೆ ಗಳಿಗೂ ಸ್ಪಂದಿಸುವುದಾಗಿ ಭರವಸೆ ನೀಡಿದರು. ಶಾಲಾ ಸಂಪರ್ಕ ದ ರಸ್ತೆಯೂ ಮಕ್ಕಳ ಮೂಲಭೂತ ಅಗತ್ಯ ಗಳಲ್ಲಿ ಒಂದಾಗಿದ್ದು ಈ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇನೆ. ಶಾಲಾ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಿಕೊಟ್ಟಾಗ ಶಿಕ್ಷಣ ವ್ಯವಸ್ಥೆ ಸುಧಾರಣೆ ತರಲು ಸಾಧ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ  ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಜಿ‌.ಪಂ.ಮಾಜಿ ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ,  ಮಾಣಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ, ಗ್ರಾಮ ಪಂಚಾಯತ್ ಸದಸ್ಯೆ ಸುಜಾತ,  ನೇರಳಕಟ್ಟೆ   ಸಿ.ಎ.ಬ್ಯಾಂಕ್ ನ ಅಧ್ಯಕ್ಷ ಪುಷ್ಪ ರಾಜ ಚೌಟ,  ಪ್ರಮುಖರಾದ ರಮನಾಥ ರಾಯಿ, ಗಣೇಶ್ ರೈ ಮಾಣಿ, ನಂದರಾಮ ರೈ, ಸನತ್ ಕುಮಾರ್ ರೈ ತುಂಬೆದಕೋಡಿ, ತನಿಯಪ್ಪ ಗೌಡ, ಮೋಹನ್ ಪು.ಎಸ್. ಹೈಸ್ಕೂಲ್ ಮುಖ್ಯೋಪಾಧ್ಯಾಯ ಬಿ.ಕೆ.ಭಂಡಾರಿ, ಕಾಲೇಜು ಪ್ರಾಂಶುಪಾಲೆ ರಶ್ಮಿತಾ ಸುರೇಶ್, ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಶಾರಿಕಾ,ಶಾಲಾ ವಿಧ್ಯಾಬಿವರ್ದಕ ಸಂಘದ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ವನಿತಾ, ಅಬೀಬ್ ಕೆ , ಗಂಗಾದರ ಆಳ್ವ  ಮೊದಲಾದವರು ಉಪಸ್ಥಿತರಿದ್ದರು. ಮಾಣಿ ಶಾಲಾ ವಿದ್ಯಾಭಿವರ್ದಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಸ್ವಾಗತಿಸಿದರು. ಬಿ.ಕೆ.ಭಂಡಾರಿ ವಂದಿಸಿದರು. ಶಿಕ್ಷಕ ಜಯರಾಮ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here