ಕುಟ್ರುಪಾಡಿಯಲ್ಲಿ ಸಂಜೀವಿನಿ ಮಹಿಳಾ ಸಂತೆ

0

ಕಡಬ: ಪೃಥ್ವಿ ಸಂಜೀವಿನಿ ಒಕ್ಕೂಟ ಕುಟ್ರುಪಾಡಿ ಇದರ ಆಶ್ರಯದಲ್ಲಿ ೭೫ನೇ ಅಜಾದ್ ಕಾ ಅಮೃತ್ ಮಹೋತ್ಸವ್ ಅಂಗವಾಗಿ ದಿನಬಳಕೆ ವಸ್ತುಗಳು, ಆಹಾರ ಪದಾರ್ಥಗಳು, ತರಕಾರಿ ಬೀಜಗಳು, ಹಣ್ಣು ಹಂಪಲಗಳು, ಸಾವಯವ ತರಕಾರಿ ಇತ್ಯಾದಿಗಳ ಮಾರಾಟ ಸಂಜೀವಿನಿ ಸಂತೆ ಮಾ.9ರಂದು ಕುಟ್ರುಪಾಡಿ ಗ್ರಾಮ ಪಂಚಾಯತ್ ಸಮೀಪ ನಡೆಯಿತು.

 


ಕುಟ್ರುಪಾಡಿ ಗ್ರಾ.ಪಂ. ಅಧ್ಯಕ್ಷ ಮೋಹನ್ ಕೆರೆಕೊಡಿ ಅವರು ಸಂಜೀವಿನಿ ಸಂತೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ತಾಲೂಕು ಪ್ರೋಗ್ರಾಮ್ ಮ್ಯಾನೆಜರ್ ಜಗತ್, ಪಂಚಾಯತ್ ಉಪಾಧ್ಯಕ್ಷೆ ವಾಣಿ, ಪೃಥ್ವಿ ಒಕ್ಕೂಟದ ಅಧ್ಯಕ್ಷೆ ಆಲೀಸ್ ತೋಮಸ್, ಎಂ.ಬಿ.ಕೆ. ಸುಗುಣ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಸೂಸಮ್ಮ ಮತ್ತಾಯಿ, ಶೈನಿ ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು. ಕುಟ್ರುಪಾಡಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಆನಂದ ಅವರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here