ಮಾ.20: ಸರ್ವೆ ಸೌಹಾರ್ದ ವೇದಿಕೆ ಆಶ್ರಯದಲ್ಲಿ ಸರ್ವೆ ಪ್ರೀಮಿಯರ್ ಲೀಗ್ ಸೀಸನ್-7 ಕ್ರಿಕೆಟ್ ಪಂದ್ಯಾಟ, ವಿವಿಧ ಸಾಮಾಜಿಕ ಕಾರ್ಯಕ್ರಮ-ಸನ್ಮಾನ ಸಮಾರಂಭ

0

ಪುತ್ತೂರು: ಸೌಹಾರ್ದ ವೇದಿಕೆ ಸರ್ವೆ ಇದರ ಆಶ್ರಯದಲ್ಲಿ ಸರ್ವೆ ಪ್ರೀಮಿಯರ್ ಲೀಗ್ ಸೀಸನ್-7 ಕ್ರಿಕೆಟ್ ಪಂದ್ಯಾಟ, ವಿವಿಧ ಸಾಮಾಜಿಕ ಕಾರ್ಯಕ್ರಮ, ಶಾಲೆಗೆ ಕೊಡುಗೆಗಳ ಹಸ್ತಾಂತರ ಹಾಗೂ ಸನ್ಮಾನ ಕಾರ್ಯಕ್ರಮ ಮಾ.20ರಂದು ಸರ್ವೆ ಕಲ್ಪಣೆ ಶಾಲಾ ಮೈದಾನದಲ್ಲಿ ನಡೆಯಲಿದೆ.

 


ಲೀಗ್ ಮಾದರಿಯ ಪಂದ್ಯಾಟದಲ್ಲಿ 6 ತಂಡಗಳು ಭಾಗವಹಿಸಲಿದ್ದು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮಾ.9ರಂದು ಸರ್ವೆ ಎಸ್‌ಜಿಎಂ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿಕೊಟ್ಟರು. ಮುಂಡೂರು ಗ್ರಾ.ಪಂ ಸದಸ್ಯ ಮಹಮ್ಮದ್ ಆಲಿ ನೇರೋಳ್ತಡ್ಕ ಹಾಗೂ ತಂಡಗಳ ಮಾಲಕರು, ಐಕಾನ್ ಆಟಗಾರರು ಉಪಸ್ಥಿತರಿದ್ದರು. ರೆಡ್ಕೋ ರೈಡರ್‍ಸ್ ಕೂಡುರಸ್ತೆ, ಟ್ರೋಫಿ ಫೈಟರ್‍ಸ್ ದರ್ಬೆ, ಸೊರಕೆ ಸ್ಟ್ರೈಕರ್‍ಸ್, ಕೂಡುರಸ್ತೆ ಬ್ಲಾಸ್ಟರ್‍ಸ್, ಯಂಗ್ ಫೈಟರ್‍ಸ್ ನೇರೋಳ್ತಡ್ಕ ಹಾಗೂ ರೈಸಿಂಗ್ ಸ್ಟಾರ್ ಸರ್ವೆ ತಂಡ ಪಂದ್ಯಾಟದಲ್ಲಿ ಭಾಗವಹಿಸಲಿದೆ.

LEAVE A REPLY

Please enter your comment!
Please enter your name here