ಪುತ್ತೂರು: ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮ ಮಾ.20ರಂದು ಪುತ್ತೂರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಮಾಜ ಬಾಂಧವರಿಗೆ ನಡೆಸಿದ ರಾಜ್ಯಮಟ್ಟದ ಕಥೆ, ಕವನ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿಯನ್ನು ಸಂಘದ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ.ಸವಣೂರು ಅವರು ಬಿಡುಗಡೆಗೊಳಿಸಿದ್ದಾರೆ.
ಕಾಲೇಜು ವಿಭಾಗದಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಕಡೇಶಿವಾಲಯದ ಭವನೀಶ್ ಪಿ(ಪ್ರ), ಸುಳ್ಯದ ರಂಜಿತಾ ಎಸ್(ದ್ವಿ), ಬೆಳ್ತಂಗಡಿಯ ತೇಜಸ್ವಿ ಕೆ(ತೃ), ಕಥಾ ಸ್ಪರ್ಧೆಯಲ್ಲಿ ಬಂಟ್ವಾಳದ ಗೌತಮಿ(ಪ್ರ), ಪರಂಗಿಪೇಟೆಯ ಸೌಮ್ಯ(ದ್ವಿ), ಪಡ್ನೂರು ಅಜೇಯನಗರದ ಪ್ರಜ್ಞಾ ಜೆ ಎಸ್ (ತೃ), ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಕೋಡಿಂಬಾಡಿಯ ಮನಸ್ವಿ ವೈ(ಪ್ರ), ಬಲ್ನಾಡು ಉಜ್ರಪಾದೆಯ ಎಮ್.ಪ್ರಣೀತ್ ಕುಲಾಲ್(ದ್ವಿ), ಕೋಡಿಂಬಾಡಿಯ ಮನ್ವಿತಾ ವೈ(ತೃ), ಕಥಾ ಸ್ಪರ್ಧೆಯಲ್ಲಿ ಬಲ್ನಾಡ ಉಜ್ರುಪಾದೆಯ ಸೋಹನ್ ಎನ್ ವಿ(ಪ್ರ), ಬಲ್ನಾಡು ಉಜ್ರುಪಾದೆಯ ಎಮ್.ಪ್ರಣೀತ್ ಕುಲಾಲ್(ದ್ವಿ), ಕಡಬ ಕೊಲದ ಕೆಮ್ಮಾರ ಪ್ರಣೀತ ಎ(ತೃ), ಕನವ ಸ್ಪರ್ಧೆಯಲ್ಲಿ ಬಲ್ನಾಡು ಉಜ್ರುಪಾದೆಯ ಎಮ್.ಪ್ರಣೀತ್ ಕುಲಾಲ್(ಪ್ರ), ಬಲ್ನಾಡು ಮುದಲಾಜೆಯ ಪವಿಶ್ರೀ ಆರ್ (ದ್ವಿ), ಕಾಲೇಜು ವಿಭಾಗದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಬಂಟ್ವಾಳದ ಲಿಖಿತಾ(ಪ್ರ), ಕಣಿಯೂರು ಗ್ರಾಮದ ನಿಶ್ಮಿತಾ(ದ್ವಿ), ಬೆಳ್ತಂಗಡಿಯ ಕಾವ್ಯಶ್ರೀ(ತೃ), ಹಿರಿಯರ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿಯ ಸುರೇಶ ಹಾಂಡ(ಪ್ರ), ಬಂಟ್ವಾಳದ ಪುನೀತ ಪಿ(ದ್ವಿ), ಬಂಟ್ವಾಳದ ಭಾರತಿ ಸಿ(ತೃ), ಕವನ ಸ್ಪರ್ಧೆಯಲ್ಲಿ ಬಂಟ್ವಾಳದ ಸರಕಾರ ಪ.ಪೂ ಕಾಲೇಜಿನ ಸಹಶಿಕ್ಷಕಿ ಭಾರತಿ ಸಿ(ಪ್ರ), ಉಡುಪಿಯ ಸುರೇಶ ಹಾಂಡ ಮತ್ತು ಇಡ್ಕಿದು ಗ್ರಾಮದ ವಿಶ್ವನಾಥ ಕುಲಾಲ್ ಮಿತ್ತೂರು(ದ್ವಿ), ಮಾಡ್ನೂರು ಗ್ರಾಮದ ಕಾವು ಪ್ರಜ್ಞಾ ಕುಲಾಲ್ (ತೃ), ಕಥಾ ಸ್ಪರ್ಧೆಯಲ್ಲಿ ಮಣಿಪಾಲದ ಮಂಜುನಾಥ ಹಿಲಿಯಾಣ(ಪ್ರ), ಬಂಟ್ವಾಳದ ಭಾರತಿ ಸಿ(ದ್ವಿ), ಬಂಟ್ವಾಳದ ಎಚ್ಕೆ ನಯನಾಡು(ತೃ) ಸ್ಥಾನ ಪಡೆದು ಕೊಂಡಿದ್ದಾರೆ. ವಿಜೇತರಿಗೆ ಮಾ.20ರಂದು ನಡೆಯುವ ಕುಲಾಲ ಸಮಾಜದ ವಾರ್ಷಿಕ ಕಾರ್ಯಕ್ರಮದ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ ಸವಣೂರು ಅವರು ತಿಳಿಸಿದ್ದಾರೆ.