ಸವಣೂರು ವಿದ್ಯಾರಶ್ಮಿ ಮೈದಾನದಲ್ಲಿ ಮೂರು ದಿನಗಳ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಸಂಭ್ರಮದ ತೆರೆ

0

  • ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ಪ್ರಥಮ ಕ್ಯಾಲಿಕಟ್ ಯುನಿವರ್ಸಿಟಿ ದ್ವಿತೀಯ
  • ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ಪ್ರಥಮ ಡಿವೈವೈಎಸ್ ಮೈಸೂರು ದ್ವಿತೀಯ

ಪುತ್ತೂರು: ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್, ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್, ಹಾಗೂ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ವಿದ್ಯಾ ಗಂಗೋತ್ರಿ ಸವಣೂರು, ನೇತಾಜಿ ಯುವಕ ಮಂಡಲ ಕೂಡುರಸ್ತೆ ನರಿಮೊಗರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಆಯ್ದ ಯೂನಿವರ್ಸಿಟಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಮಾ.13ರಂದು ಮುಕ್ತಾಯಗೊಂಡಿತು.

ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದ ಮೂಲಕ ಸವಣೂರಿನಲ್ಲಿ ಅತ್ಯುತ್ತಮ ಕ್ರೀಡಾ ಹಬ್ಬದ ಆಯೋಜನೆಯಾಗಿದೆ ಎಂದರು. ಸುಳ್ಯ ನಗರಸಭಾ ಸದಸ್ಯ ಮುಸ್ತ- ಜನತಾ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು ಶುಭ ಹಾರೈಸಿದರು.

ವೇದಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಚಂದ್ರಹಾಸ ರೈ, ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಕುಮಾರ್ ಬಿ.ಎಸ್, ಕಾರ್ಯದರ್ಶಿ ಶಂಕರ್ ಶೆಟ್ಟಿ ಬಿ.ಸಿ ರೋಡ್, ಪುತ್ತೂರು ತಾಲೂಕು ಅಧ್ಯಕ್ಷ ಬೇಬಿ ಜೋನ್, ಬೆಳ್ಳಾರೆ ಪೊಲೀಸ್ ಠಾಣಾ ಎಸ್ಸೈ ಆಂಜನೇಯ ರೆಡ್ಡಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಶರತ್‌ಚಂದ್ರ ಬೈಪಡಿತ್ತಾಯ ನರಿಮೊಗರು, ಸುಂದರ ರೈ ಸವಣೂರು, ಹರೀಶ್ ರೈ ಉಬರಡ್ಕ, ನಾಮದೇವ್, ಕೃಷ್ಣಕುಮಾರ್, ನಿವೃತ್ತ ದೈ.ಶಿ.ಶಿಕ್ಷಕ ಶಿವರಾಮ ಏನೆಕಲ್ಲು ಉಪಸ್ಥಿತರಿದ್ದರು. ಪುತ್ತೂರು ಉಪವಿಭಾಗ ಡಿವೈಎಸ್‌ಪಿ ಡಾ. ಗಾನ ಪಿ ಕುಮಾರ್ ಪಂದ್ಯಾಟಕ್ಕೆ ಆಗಮಿಸಿ ಶುಭ ಹಾರೈಸಿದರು.
ಕ್ರೀಡಾ ಸಾಧಕರಿಗೆ ಸನ್ಮಾನ: ವಿದ್ಯಾರಶ್ಮಿ ಪದವಿ ಕಾಲೇಜಿನ ದೈ.ಶಿ.ನಿರ್ದೇಶಕಿ ಪೂರ್ಣಿಮಾ, ಮಾಜಿ ವಾಲಿಬಾಲ್ ಆಟಗಾರ, ರಾಷ್ಟ್ರೀಯ ಅಥ್ಲೆಟ್ ಪ್ರಕಾಶ್ ಶೆಟ್ಟಿ ಹೆಜಮಾಡಿ, ಏಕಲವ್ಯ ಪ್ರಶಸ್ತಿ ವಿಜೇತ ಮಾಜಿ ರಾಷ್ಟ್ರೀಯ ವಾಲಿಬಾಲ್ ಆಟಗಾರ ರವೀಂದ್ರ, ಮಾಜಿ ರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಪ್ರಕಾಶ್ ರಾವ್, ದಾಮೋದರ ಶೆಟ್ಟಿ, ಉಷಾ ರಾಜಾರಾಮ್, ಗಣೇಶ್ ರೈ ಮುಂಡಾಸು, ಥೋಮಸ್ ಧರ್ಮಸ್ಥಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಜಿ ರಾಷ್ಟ್ರೀಯ ವಾಲಿಬಾಲ್ ಆಟಗಾರ ಸತ್ತಾರ್ ಗೂಡಿನಬಳಿ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪುತ್ತೂರು ತಾಲೂಕು ಯುವಜನ ಸೇವಾ ನಿಕಟಪೂರ್ವ ಕ್ರೀಡಾಽಕಾರಿ ಜಯರಾಮ ಗೌಡ ಸ್ವಾಗತಿಸಿದರು. ಪಂದ್ಯಾಟ ಸಮಿತಿಯ ಕಾರ್ಯದರ್ಶಿ ಮೋನಪ್ಪ ಎಂ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಪಂದ್ಯಾಟ ಸಮಿತಿಯ ಸಹ ಖಜಾಂಜಿ, ಕೆಯ್ಯೂರು ಕೆಪಿಎಸ್ ಸ್ಕೂಲ್‌ನ ಮುಖ್ಯಗುರು ಬಾಬು ಎಂ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

ವಾಲಿಬಾಲ್ ಪಂದ್ಯಾಟ ಸಮಿತಿಯ ಪದಾಽಕಾರಿಗಳಾದ ಜೂಲಿಯನ್ ಪೀಟರ್ ಹಾಸನ, ಶಿವರಾಮ ಭಟ್ ಬೀರ್ಣಕಜೆ, ಸುಂದರ ಕೆ, ಪ್ರಕಾಶ್, ಶರತ್ ಶೆಟ್ಟಿ, ಶ್ರೀಕಾಂತ್ ನಾಯ್ಕ ಎಂ ಕಂಬಳಕೋಡಿ ಹಾಗೂ ಸಮಿತಿಯ ಸದಸ್ಯರು, ವಿದ್ಯಾರಶ್ಮಿ ವಿದ್ಯಾಲಯದವರು ಸಹಕರಿಸಿದರು.

ಬಹುಮಾನ ವಿತರಣೆ: ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಬಹುಮಾನ ವಿತರಣೆ ಸಂದರ್ಭದಲ್ಲಿ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಕುಮಾರ್ ಬಿ.ಎಸ್, ಕಾರ್ಯದರ್ಶಿ ಶಂಕರ್ ಶೆಟ್ಟಿ ಬಿ.ಸಿ ರೋಡ್, ಪುತ್ತೂರು ತಾಲೂಕು ಅಧ್ಯಕ್ಷ ಬೇಬಿ ಜೋನ್, ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಸೀತಾರಾಮ ಕೇವಳ, ಜಯರಾಮ ಗೌಡ, ಭಾಸ್ಕರ ಶೆಟ್ಟಿ ಮಂಗಳೂರು, ರಾಜಾರಾಮ್ ಮಂಗಳೂರು, ಗಣೇಶ್ ಉಜಿರೆ, ಶ್ರೀಕಾಂತ್ ಕಂಬಳಕೋಡಿ, ಗೌತಮ್, ಮೋನಪ್ಪ ಪಟ್ಟೆ, ಶಿವರಾಮ ಭಟ್ ಬೀರ್ಣಕಜೆ ಪೆರ್ಲಂಪಾಡಿ, ಸ್ಕರಿಯ ಎಂ.ಎ, ನಾಗೇಶ್ ಮೂಡಬಿದ್ರೆ, ಗಿರೀಶ್ ಕೂಡುರಸ್ತೆ, ಸಂಜೀವ ದೊಡ್ಡಡ್ಕ ಉಪಸ್ಥಿತರಿದ್ದರು.

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.೬೦,೦೦೦ ನಗದು ಮತ್ತು ಟ್ರೋಫಿ, ದ್ವಿತೀಯ ರೂ.೪೫,೦೦೦ ನಗದು ಮತ್ತು ಟ್ರೋಫಿ, ತೃತೀಯ ರೂ.೩೦,೦೦೦ ನಗದು ಮತ್ತು ಟ್ರೋಫಿ ಹಾಗೂ ಚತುರ್ಥ ರೂ.೨೦,೦೦೦ ನಗದು ಮತ್ತು ಟ್ರೋಫಿ ನೀಡಲಾಯಿತು. ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.೪೦,೦೦೦ ನಗದು ಮತ್ತು ಟ್ರೋಫಿ, ದ್ವಿತೀಯ ರೂ.೩೦,೦೦೦ ನಗದು ಮತ್ತು ಟ್ರೋಫಿ, ತೃತೀಯ ರೂ.೨೦,೦೦೦ ನಗದು ಮತ್ತು ಟ್ರೋಫಿ, ಹಾಗು ಚತುರ್ಥ ರೂ.೧೫,೦೦೦ ನಗದು ಮತ್ತು ಟ್ರೋಫಿ ನೀಡಲಾಯಿತು.

ಎರಡನೇ ದಿನದ ಪಂದ್ಯಾಟ ಮಾ.೧೨ರಂದು ನಡೆಯಿತು. ಸಭಾ ಕಾರ್ಯಕ್ರಮವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈಯವರು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿದರು. ಸವಣೂರು ಗ್ರಾ.ಪಂ ಅಧ್ಯಕ್ಷೆ ರಾಜೀವಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ ಕಾರ್ಯನಿರ್ವಾಹಕಾಽಕಾರಿ ನವೀನ್ ಭಂಡಾರಿ, ಯುವಜನ ಸೇವಾ ಕ್ರೀಡಾ ಇಲಾಖೆ ಮಂಗಳೂರು ಇದರ ಉಪ ನಿರ್ದೇಶಕರಾಗಿರುವ ಪ್ರದೀಪ್ ಡಿಸೋಜಾ ಶುಭ ಹಾರೈಸಿದರು. ಸವಣೂರಿನ ಶಿಲ್ಪಿ ಎಂದೇ ಕರೆಯಲ್ಪಡುವ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುತ್ತೂರು ಯುವಜನ ಸೇವಾ ನಿಕಟಪೂರ್ವ ಕ್ರೀಡಾಧಿಕಾರಿ ಜಯರಾಮ ಗೌಡರವರು ಸನ್ಮಾನ ಪತ್ರ ವಾಚಿಸಿದರು. ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಕುಮಾರ್ ಬಿ.ಎಸ್, ತಾಲೂಕು ಅಧ್ಯಕ್ಷ ಬೇಬಿ ಜೋನ್, ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್‌ನ ಭಾಸ್ಕರ ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಽಕಾರಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪದವಿ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ, ಬೆಳ್ಳಾರೆ ಪೊಲೀಸ್ ಠಾಣಾ ಎಸ್ಸೈ ಆಂಜನೇಯ ರೆಡ್ಡಿ, ಕೈಪಂಗಳ ಬಾರಿಕೆ ಕೋಟಿ ಚೆನ್ನಯ ಗರಡಿಯ ಅಧ್ಯಕ್ಷ ವೇದನಾಥ ಸುವರ್ಣ ಕಡಬ ತಾ.ಪಂ ಮಾಜಿ ಅಧ್ಯಕ್ಷೆ ರಾಜೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಸಚಿವ ರಮಾನಾಥ ರೈ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರವರು ಆಗಮಿಸಿ ಶುಭ ಹಾರೈಸಿದರು. ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿನಿಯರು ಆಶಯ ಗೀತೆ ಹಾಡಿದರು. ವಾಲಿಬಾಲ್ ಪಂದ್ಯಾಟ ಸಮಿತಿಯ ಉಪಾಧ್ಯಕ್ಷ ಶಿವರಾಮ ಭಟ್ ಬೀರ್ಣಕಜೆ ಸ್ವಾಗತಿಸಿದರು. ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಬೇಬಿ ಜೋನ್ ನೇತೃತ್ವದಲ್ಲಿ ಅತಿಥಿಗಳಿಗೆ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೆಯ್ಯೂರು ಕೆಪಿಎಸ್ ಸ್ಕೂಲ್‌ನ ಮುಖ್ಯಗುರು ಬಾಬು ಎಂ ವಂದಿಸಿದರು. ಸವಣೂರು ಪ.ಪೂ ಕಾಲೇಜಿನ ಪ್ರಾಚಾರ್ಯ ಸೀತರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.

ಸೀತಾರಾಮ ರೈಧೀಮಂತ ನಾಯಕ-ಹಾರ್ವಿನ್
ಸೀತರಾಮ ರೈ ಸವಣೂರು ಅವರು ಓರ್ವ ಒಳ್ಳೆಯ ವ್ಯಕ್ತಿಯಾಗಿದ್ದು ಎಲ್ಲ ಧರ್ಮವನ್ನು ಒಂದೇ ರೀತಿಯಲ್ಲಿ ಕಾಣುವ ಇವರು ಽಮಂತ ನಾಯಕರಾಗಿದ್ದಾರೆ ಎಂದು ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ| ವಿಜಯ ಹಾರ್ವಿನ್ ಹೇಳಿದರು. ಸೀತಾರಾಮ ರೈ ಅವರು ಒಂದು ನಾಡನ್ನೇ ಕಟ್ಟುವ ಕೆಲಸವನ್ನು ಮಾಡಿದ್ದಾರೆ, ಮನುಷ್ಯರನ್ನು ಪ್ರೀತಿಸುವ ಅವರ ಉದಾತ್ತ ಗುಣ ಹಾಗೂ ಜನಪರ ಕಾಳಜಿ ಅವರನ್ನು ಇಷ್ಟು ಎತ್ತರಕ್ಕೇರುವಂತೆ ಮಾಡಿದೆ, ವಿದ್ಯಾದಾನಿಯಾಗಿ, ಸಮಾಜ ಸೇವಕರಾಗಿ, ಆರ್ಥಿಕ ದಾನಿಯಾಗಿರುವ ಇವರು ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದಾರೆ. ತಮ್ಮ ದೂರದೃಷ್ಟಿ ಚಿಂತನೆ ಹಾಗೂ ತನ್ನ ಧರ್ಮವನ್ನು ಅನುಸರಿಸಿ ಅನ್ಯ ಧರ್ಮವನ್ನು ಗೌರವಿಸುವ ಉದಾತ್ತ ಗುಣ ಸೀತಾರಾಮ ರೈ ಅವರಲ್ಲಿದ್ದು ನಾಗರಿಕ ಸಮಾಜ ಇವರನ್ನು ಪ್ರೀತಿಯಿಂದ ಗುರುತಿಸಿದೆ ಎಂದು ವಿಜಯ ಹಾರ್ವಿನ್ ಹೇಳಿದರು.

ಮೋನಪ್ಪ ಪಟ್ಟೆಯವರಿಗೆ ಸನ್ಮಾನ
ವಾಲಿಬಾಲ್ ಪಂದ್ಯಾಟ ಆಯೋಜನೆಯಲ್ಲಿ ರಾತ್ರಿ ಹಗಲು ಕಾರ್ಯ ನಿರ್ವಹಿಸಿರುವ ಕ್ರಿಯಾಶೀಲ ಸಂಘಟಕ ವಾಲಿಬಾಲ್ ಸಮಿತಿಯ ಕಾರ್ಯದರ್ಶಿ, ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆ ದೈ.ಶಿ.ಶಿಕ್ಷಕ ಮೋನಪ್ಪ ಎಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

 

ಪುರುಷರ ಹಾಗೂ ಮಹಿಳಾ ವಿಭಾಗದ -ಲಿತಾಂಶ:

ಪುರುಷರ ವಿಭಾಗದಲ್ಲಿ ಎಸ್.ಕೆ ಕನ್‌ಸ್ಟ್ರಕ್ಷನ್ ಸತೀಶ್ ಕುಮಾರ್ ಪ್ರಾಯೋಜಕತ್ವದ ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ಪ್ರಥಮ ಸ್ಥಾನ ಪಡೆದುಕೊಂಡರೆ ಪ್ರಕಾಶ್ ಸರ್ಕಲ್ ಇನ್ಸ್‌ಪೆಕ್ಟರ್ ಕಾಪು ಉಡುಪಿ, -ಂಡ್ಸ್ ಹೆಜಮಾಡಿ ಪ್ರಾಯೋಜಕತ್ವದ ಕ್ಯಾಲಿಕಟ್ ಯುನಿವರ್ಸಿಟಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ತಾ.ಪಂ. ಇ.ಓ ನವೀನ್ ಭಂಡಾರಿ ಪ್ರಾಯೋಜಕತ್ವದ ತಮಿಳುನಾಡು ಎಂ.ಜಿ ಯುನಿವರ್ಸಿಟಿ ತೃತೀಯ ಸ್ಥಾನ ಹಾಗೂ ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಪ್ರಾಯೋಜಕತ್ವದ ಮಂಗಳೂರು ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು. ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ತಂಡದ ಗುರು, ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಕ್ಯಾಲಿಕಟ್ ಯುನಿವರ್ಸಿಟಿ ತಂಡದ ನಾಸಿ-, ಬೆಸ್ಟ್ ಲಿಬೆರೊ ಪ್ರಶಸ್ತಿಯನ್ನು ಎಸ್.ಆರ್.ಎಂ ಯುನಿವರ್ಸಿಟಿ ತಂಡದ ಶ್ರೀಕಾಂತ್, ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಕ್ಯಾಲಿಕಟ್ ಯುನಿವರ್ಸಿಟಿ ತಂಡದ ದಿಲ್ಸನ್ ಪಡೆದುಕೊಂಡರು.

ಮಹಿಳಾ ವಿಭಾಗದಲ್ಲಿ ಶಿವರಾಮ ಭಟ್ ಬೀರ್ಣಕಜೆ, ಸಂಜೀವ ಪೂಜಾರಿ, ಬಾಬು ಎಂ, ಬೇಬಿ ಜೋನ್ ಬಳಗದ ಮಹಾಲಿಂಗೇಶ್ವರ -ಂಡ್ಸ್ ಪುತ್ತೂರು ಪ್ರಾಯೋಜಕತ್ವದ ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ಪ್ರಥಮ ಸ್ಥಾನ ಪಡೆದುಕೊಂಡಿತು. ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು, ಭಾಸ್ಕರ ಆಚಾರ್ ಹಿಂದಾರು ಪ್ರಾಯೋಜಕತ್ವದ ಡಿವೈವೈಎಸ್ ಮೈಸೂರು ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ನೇತಾಜಿ ಯುವಕ ಮಂಡಲ ಕೂಡುರಸ್ತೆ ಪ್ರಾಯೋಜಕತ್ವದ ಕ್ಯಾಲಿಕಟ್ ಯುನಿವರ್ಸಿಟಿ ತಂಡ ತೃತಿಯ ಹಾಗೂ ಎಂ.ಎಸ್.ಪಿ -ಂಡ್ಸ್ ಪುತ್ತೂರು ಪ್ರಾಯೋಜಕತ್ವದ ಮಂಗಳೂರು ಯುನಿವರ್ಸಿಟಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು. ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ತಂಡದ ಎಲಿಮಾತ್, ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ಅತಿರಾ ರೋಯ್, ಬೆಸ್ಟ್ ಲಿಬೆರೊ ಪ್ರಶಸ್ತಿಯನ್ನು ಡಿವೈವೈಎಸ್ ಮೈಸೂರು ತಂಡದ ಸ್ನೇಹಾ,ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಡಿವೈಎಸ್‌ಎಸ್ ತಂಡದ ನಿವೇದಿತಾ ಪಡೆದುಕೊಂಡರು.

 

 

LEAVE A REPLY

Please enter your comment!
Please enter your name here