ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಚಂದ್ರಹಾಸ ರಿಗೆ ಜೀವಬೆದರಿಕೆ ಪ್ರಕರಣ , ಸಮಾಜಘಾತುಕ ವ್ಯಕ್ತಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ದಿಂದ ಡಿವೈಎಸ್ಪಿ ಗೆ ಮನವಿ

0

ಪುತ್ತೂರು:ಹಿಜಬ್ ವಿಚಾರವಾಗಿ ಬಿಜೆಪಿ ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಚಂದ್ರಹಾಸ ಈಶ್ವರಮಂಗಲ ಇವರಿಗೆ ಅನಾಮದೇಯ ಫೋನ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದ್ದು ಇದರ ಬಗ್ಗೆ ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು ,ಎಫ್.ಐ.ಆರ್ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದು,ಈ ಪ್ರಕರಣದಲ್ಲಿ ಆದಷ್ಟು ಬೇಗ ಬೆದರಿಕೆಯೊಡ್ಡಿರುವ ವ್ಯಕ್ತಿಗಳ ಶೀಘ್ರ ಬಂಧನ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲದಿಂದ ಡಿವೈಎಸ್ಪಿ ಗಾನ ಕುಮಾರಿ ಇವರಿಗೆ ಮನವಿ ಸಲ್ಲಿಸಲಾಯಿತು, ಮನವಿ ಸ್ವೀಕರಿಸಿದ ಡಿವೈಎಸ್ಪಿ ಆರೋಪಿಗಳ ಬಂಧನಕ್ಕೆ ಈಗಾಗಲೇ ತನಿಖೆ ಚುರುಕುಗೊಳಿಸಿದ್ದು,ಶೀಘ್ರ ಬಂಧನದ ಭರವಸೆ ನೀಡಿದರು, ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ನವೀನ್ ಪಡ್ನೂರು, ಪ್ರಧಾನ ಕಾರ್ಯದರ್ಶಿಗಳಾದ ರತನ್ ರೈ ಕುಂಬ್ರ, ಶ್ರೀಕಾಂತ್ ಕಾವು ಉಪಸ್ಥಿತರಿದ್ದರು.

 

ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುತ್ವದ ಪರವಾಗಿ ಕೆಲಸ ಮಾಡುವ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕೆಲವು ಮಾತಾಂದಶಕ್ತಿಗಳು ,ಬೆದರಿಕೆಯೊಡ್ಡುತಿರುವುದನ್ನು ಬಿಜೆಪಿ ಯುವ ಮೋರ್ಚಾ ಪ್ರಬಲವಾಗಿ ಖಂಡಿಸುತ್ತದೆ, ಇಂಥಹ ಯಾವುದೇ ಬೆದರಿಕೆಗೆ ಜಗ್ಗದೆ ಮಾತಾಂದಶಕ್ತಿಗಳು ,ಸಮಾಜಘಾತುಕರನ್ನು ಬಗ್ಗು ಬಡಿಯುವ ಕೆಲಸವನ್ನು ಬಿಜೆಪಿ ಯುವ ಮೋರ್ಚಾ ನಿರಂತರವಾಗಿ ಮುಂದುವಸರಿಸಲಿದೆ,,ಈ ಪ್ರಕರಣದ ಬಗ್ಗೆ ಶಾಸಕರು ಈಗಾಗಲೇ ಹೆಚ್ಚಿನ ಮುತುವರ್ಜಿ ವಹಿಸಿ ಆರೋಪಿಗಳ ಬಂಧನಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಆದಷ್ಟು ಬೇಗ ಆರೋಪಿಗಳ ಬಂಧನ ಪೊಲೀಸ್ ಇಲಾಖೆಯಿಂದ ಆಗುವ ವಿಶ್ವಾಸವಿದೆ.-  ನವೀನ್ ಪಡ್ನೂರು ಅಧ್ಯಕ್ಷರು ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲ

LEAVE A REPLY

Please enter your comment!
Please enter your name here