ಮೆಸ್ಕಾಂ ಪವರ್ ಟ್ರೋಫಿ-2022 ಕ್ರಿಕೆಟ್ ಪಂದ್ಯಾಟ

0

  • ಕ್ರಿಕೆಟ್- ಪ್ರಥಮ ಆರ್‌ಎಸ್‌ಡಿ, ತ್ರೋಬಾಲ್-ಪ್ರಥಮ-ಕಡಬ ಉಪ ಉಪವಿಭಾಗ

ಪುತ್ತೂರು: ಕಾರ್ಯನಿರ್ವಾಹಕ ಇಂಜಿನಿಯರ್ ಪುತ್ತೂರು ಭಾಗ ಇವರ ಮಾರ್ಗದರ್ಶನದಲ್ಲಿ ಪುತ್ತೂರು ಉಪ ವಿಭಾಗ ಮಟ್ಟದ ಆಹ್ವಾನಿತ 13 ತಂಡಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮತ್ತು ಮಳೆಯರ ತ್ರೋಬಾಲ್ ಪಂದ್ಯಾಟ `ಮೆಸ್ಕಾಂ ಪವರ್ ಟ್ರೋಫಿ ೨೦೨೨’ ಮಾ.12ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.


ಈ ಮೆಸ್ಕಾಂ ಪವರ್ ಟ್ರೋಫಿ-೨೦೨೨ ಕ್ರಿಕೆಟ್ ಪಂದ್ಯಾಟದಲ್ಲಿ ಆರ್‌ಎಸ್‌ಡಿ ಕುಂಬ್ರ(ಪ್ರ) ಮೆಸ್ಕಾಂ ೧೧ ಸಿಎಸ್‌ಡಿ ಪುತ್ತೂರು(ದ್ವಿ) ಸ್ಥಾನ ಪಡೆದುಕೊಂಡಿದೆ. ಮಹಿಳೆಯರ ತ್ರೋಬಾಲ್ ಕಡಬ ಉಪವಿಭಾಗ(ಪ್ರ) ಹಾಗೂ ನಗರ ಉಪವಿಭಾಗ ತಂಡ(ದ್ವಿ) ಸ್ಥಾನ ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಕ್ರೀಡಾಕೂಟ ಮೆಸ್ಕಾಂ ಪವರ್ ಟ್ರೋಫಿ ಪಂದ್ಯಾಟವನ್ನು ಮೆಸ್ಕಾಂ ನಗರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ರಾಮಚಂದ್ರ ಪಂದ್ಯಾಟವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಸಹಿತ ಹಲವು ಅಧಿಕಾರಿಗಳು ಆಗಮಿಸಿದ್ದರು.


ಪುತ್ತೂರು ಶಾಖೆಯ ಸಹಾಯಕ ಇಂಜಿನಿಯರ್ ರಾಜೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಂಪ್ಕೋ  ಚಾಕ್ಲೇಟ್ ಫ್ಯಾಕ್ಟರಿ  ವತಿಯಿಂದ ಚಾಕ್ಲೇಟ್ ವ್ಯವಸ್ಥೆ     ಹಾಗೂ ಬಿಂದು ಮಿನರಲ್ ವಾಟರ್ ಸಂಸ್ಥೆಯವರು ನೀರಿನ ವ್ಯವಸ್ಥೆ ನೀಡಿ  ಸಹಕರಿಸುತ್ತಾರೆ. ಸಿಬ್ಭಂದಿಗಳಾದ ಅಶ್ರಫ್, ಜಯಂತ, ಸಂತೋಷ ಜಾಧವ, ಅನುಜ ಹಾಗೂ ನಬೀಸಾಬ್ ಸಹಕರಿಸಿದರು. ವಿಭಾಗೀಯ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಸಿದ್ದರು.

LEAVE A REPLY

Please enter your comment!
Please enter your name here