ಸಾಲೆತ್ತೂರಿನ ಮದುವೆ ಮನೆಯಲ್ಲಿ ವರ ಕೊರಗಜ್ಜನನ್ನು ಹೋಲುವ ವೇಷ ಧರಿಸಿದ‌ ಪ್ರಕರಣ – ಪುತ್ತೂರು ಫಾತಿಮಾ ಮ್ಯಾಚಿಂಗ್ ಸೆಂಟರ್ ಮಾಲಕ ಸಹಿತ ಇಬ್ಬರ ಬಂಧನ

0

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪದ ಮುಸ್ಲೀಂ ಸಮುದಾಯದ ಮನೆಯೊಂದರ ಮದುವೆ ಸಮಾರಂಭದ ಔತಣ ಕೂಟದಲ್ಲಿ ಮದುಮಗ ಕೊರಗಜ್ಜನ ಮಾದರಿಯ ವೇಷ ದರಿಸಿ ಕುಣಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣದಲ್ಲಿ ಬಾಗಿಯಾಗಿರುವ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ನಿವಾಸಿ, ಪುತ್ತೂರಿನ ಫಾತಿಮಾ ಮ್ಯಾಚಿಂಗ್ ಸೆಂಟರ್ ನ ಮಾಲಕ ಅಹಮ್ಮದ್  ಮುಜ್ತಾಬ್(೨೮ ವ.) ಹಾಗೂ ಮಂಜೇಶ್ವರ ತಾಲೂಕಿನ ಬಾಯಾರು ಪದವು ನಿವಾಸಿ ಮೊಯ್ದೀನ್ ಮನೀಶ್( ೧೯.ವ) ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ಜ.೬ರಂದು ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪ ನಡೆದಿತ್ತು.  ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ ಉಮರುಲ್ ಭಾಷಿತ್ ಎಂಬಾತನ ಜೊತೆ ಜ.೬ರಂದು ನಡೆದಿತ್ತು. ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಔತಣಕೂಟ(ತಾಳ)ಕ್ಕೆ ಆಗಮಿಸಿದ್ದರು. ರಾತ್ರಿ ವೇಳೆ  ಆಗಮಿಸಿದ ವರನ ಬಳಗದವರು ವಧುವಿನ ಮನೆ ಪಕ್ಕದ ರಸ್ತೆಯಲ್ಲಿ ವರನಿಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮೆರವಣಿಗೆಯಲ್ಲಿ ಹಾಡು ಹಾಡುತ್ತಾ ಕರೆತಂದಿದ್ದರು. ಬಳಿಕ ಮದುಮಗನಿಗೆ ಬಣ್ಣ ಹಚ್ಚಿ ಕೊರಗಜ್ಜನನ್ನು ಹೋಲುವ ವೇಶ ದರಿಸಿ ಕುಣಿಸಿದ್ದರು. ಆ ದೃಶ್ಯವೊಂದು  ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು.  ಬಳಿಕದ ಬೆಳವಣಿಗೆಯಲ್ಲಿ ಕಡಂಬು ನಿವಾಸಿ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಚೇತನ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.   ವರ ಉಮರುಲ್ ಭಾಷಿತ್ ಮತ್ತು ಇತರ ಹಲವರ ವಿರುದ್ಧ ಕಲಂ 153ಎ,295 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ  ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರು ತನಿಖೆಗಾಗಿ ಠಾಣಾ ಎಸ್.ಐ.ಗಳಾದ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಸಂಜೀವ ಪುರುಷರವರ ನೇತೃತ್ವದಲ್ಲಿ ಎರಡು ವಿಶೇಷ ತಂಡವನ್ನು ರಚಿಸಿ ತನಿಖೆ
ಆರಂಬಿಸಿದ್ದು, ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಪ್ರಮುಖ ಸೂತ್ರದಾರಿ ಮದುಮಗ ಸಹಿತ ಆತನೊಂದಿಗಿದ್ದ ಇತರರು ತಲೆ ಮರೆಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here