ಮಂಜಲ್ಪಡ್ಪುವಿನಲ್ಲಿ ರೂ. 1.18 ಕೋಟಿಯಲ್ಲಿ ಸೇತುವೆ, ರಸ್ತೆ ಅಗಲೀಕರಣ ಕಾಮಗಾರಿಗೆ ಶಿಲನ್ಯಾಸ

0

  • ನಗರೀಕರಣವನ್ನು ಸುಂದರೀಕರಣಗೊಳಿಸುವ ಆಶ್ವಾಸನೆ ಈಡೇರಿಸುತ್ತಿದ್ದೇವೆ – ಸಂಜೀವ ಮಠಂದೂರು

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಬೊಳುವಾರು ಮಂಜಲ್ಪಡ್ಪುವಿನಲ್ಲಿರುವ ಸೇತುವೆ ಮತ್ತು ರಸ್ತೆ ಅಗಲೀಕರಣದ ರೂ.೧.೧೮ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಅವರು ಜ.೧೨ರಂದು ಶಿಲಾನ್ಯಾಸ ನೆರವೇರಿಸಿದರು.

ನಗರೀಕರಣವನ್ನು ಸುಂದರೀಕರಣಗೊಳಿಸುವ ಆಶ್ವಾಸನೆ ಈಡೇರಿಸುತ್ತಿದ್ದೇವೆ:
ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಗರಸಭೆ ಚುನಾವಣೆ ಸಂದರ್ಭದಲ್ಲಿ ನಾಗರಿಕೆ ಕೊಟ್ಟ ಭರವಸೆಯಂತೆ ಪುತ್ತೂರು ಮಾದರಿ ನಗರವನ್ನಾಗಿಸುವ ಅಭಿವೃದ್ದಿ ಮತ್ತು ಸ್ವಚ್ಚತೆ ಆದ್ಯತೆ ಕೊಟ್ಟು ನಗರಕರೀಕರಣವನ್ನು ಸುಂದರೀಕರಣ ಮಾಡುವ ಆಶ್ವಾಸನೆ ನೀಡಿದ್ದೆವು. ಇದಕ್ಕೆ ಪೂರಕವಾಗಿ ಇವತ್ತು ಪುತ್ತೂರು ನಗರದೊಳಗೆ ಇರುವ ರಸ್ತೆಗಳನ್ನು ಅಗಲೀಕರಣ ಮಾಡುವ ಕೆಲಸ. ಅಪಘಾತ ವಲಯವನ್ನು ಕಪ್ಪುಪಟ್ಟಿಯಲ್ಲಿ ಗುರುತಿಸಿ, ಅದನ್ನು ಅಗಲೀಕರಣಗೊಳಿಸಿ ವಾಹನ ಯೋಗ್ಯ ಚತುಷ್ಪತ ರಸ್ತೆ ಯೋಜೆನಗಳನ್ನು ಮಾಡುವ ಮೂಲಕ ಭರವಸೆ ಈಡೇರಿಸುತ್ತಿದ್ದೇವೆ ಎಂದರು. ನಗರಸಭೆಯ ನಗರತ್ಥೋನ ಅನುದಾನದಲ್ಲಿ ರೂ. ೧೮ ಲಕ್ಷ ಮತ್ತು ಲೋಕೋಪಯೋಗಿ ಇಲಾಖೆಯಿಂದ ರೂ. ೧ ಕೋಟಿ ಅನುದಾನವನ್ನು ಸೇರಿಸಿಕೊಂಡು ಮಂಜಲ್ಪಡ್ಪುವಿನಲ್ಲಿ ಸೇತುವೆ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರಯೋಜನಾ ಪ್ರಾಧೀಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ನಗರಮಂಡಲದ ಅಧ್ಯಕ್ಷರೂ ನಗರಸಭೆ ಸದಸ್ಯರೂ ಆಗಿರುವ ಪಿ.ಜಿ.ಜಗನ್ನಿವಾಸ ರಾವ್, ನಗರಸಭಾ ಸ್ಥಳೀಯ ಸದಸ್ಯ ಸಂತೋಷ್ ಬೊಳುವಾರು, ನವೀನ್ ಪೆರಿಯತ್ತೋಡಿ, ಶಿವರಾಮ ಸಪಲ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಾರಾಮ್, ಸಹಾಯಕ ಇಂಜಿನಿಯರ್ ಪ್ರಮೋದ್, ಗುತ್ತಿಗೆದಾರ ಪ್ರಭಾಕರ್, ಉದ್ಯಮಿ ಶಿವಪ್ರಸಾದ್, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ಪುರುಷೋತ್ತಮ ಮುಂಗ್ಲಿಮನೆ, ನೀಲಂತ್ ಬೊಳುವಾರು, ಶ್ರೀನಿವಾಸ್, ಬಿಜೆಪಿ ಬೂತ್ ಸಮಿತಿಯ ಪದಾಧಿಕಾರಿಗಳಾದ ದಯಾಕರ್, ಪ್ರದೀಪ್, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here