ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ `ಶಿವೋಹಂ’ ಸಮಾರೋಪ ಭಗವತ್ ಸಾಕ್ಷಾತ್ಕಾರಕ್ಕೆ ಜ್ಞಾನ ಮಾರ್ಗ ಮುಖ್ಯ-ಕಶೆಕೋಡಿ

0

ಪುತ್ತೂರು:ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯ ಜೊತೆ ಜ್ಞಾನ ಮಾರ್ಗವೂ ಮುಖ್ಯ.ಅದಕ್ಕಾಗಿ ಜ್ಞಾನವಂತರಿಂದ ಜ್ಞಾನ ಪಡೆಯಬೇಕೆಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವಿದ್ವಾನ್ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಹೇಳಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ಸೋಮವಾರ ಸಂಜೆ ನಡೆಯುತ್ತಿದ್ದ ಶಿವ ಪುರಾಣ ಕಥಾ ಶ್ರವಣ ಕಾರ್ಯಕ್ರಮ `ಶಿವೋಹಂ’ ಸಮಾರೋಪ ಸಮಾರಂಭವನ್ನು ಅವರು ಜ.೧೪ರಂದು ದೇವಳದ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಜ್ಞಾನ ರಾಶಿಯನ್ನು ಭಗವಂತ ಕೊಟ್ಟಿದ್ದಾನೆ.ಅದನ್ನು ಹೇಗೆ ಪಡೆಯುವುದು ಎಂದು ಭಗವಂತನು ಕೊಟ್ಟ ಯೂಸರ್ ಮ್ಯಾನುವಲ್ ಆಗಿರುವ ವೇದದ ಮೂಲಕ ಪಡೆಯಬಹುದು.ಆದರೆ ಆ ವೇದ ಪುರಾಣವನ್ನು ತಿಳಿಸಿ ಕೊಡುವ ಜ್ಞಾನವಂತರಿಂದ ಅದನ್ನು ತಿಳಿದು ಕೊಳ್ಳಬೇಕಾಗುತ್ತದೆ.ಈ ನಿಟ್ಟಿನಲ್ಲಿ ಭಗವತ್ ಸಾಕ್ಷಾತ್ಕಾರಕ್ಕೆ ಮತ್ತು ಐಹಿಕವಾಗಿ ಸಾಧನೆ ಪ್ರಾಪ್ತಿ ಮಾಡಲು ಜ್ಞಾನ ಮಾರ್ಗವೇ ಮುಖ್ಯ.ಮಂತ್ರ, ಸಂಸ್ಕೃತ ಗೊತ್ತಿಲ್ಲದಿದ್ದರೇನು ಭಕ್ತಿ ಇದ್ದರೆ ಸಾಕಾಗುವುದಿಲ್ಲವೇ ಎಂಬ ಭಾವನೆ ಬೇಡ.ಜ್ಞಾನ ಮಾರ್ಗವೇ ಪ್ರಮುಖವಾದದ್ದು,ಅದು ನಮಗೆ ಸಾಧ್ಯವಿಲ್ಲ ಎಂದಾಗ ಮಾತ್ರ ಉಳಿದ ಕರ್ಮ ಮಾರ್ಗ ಸೇರಿಕೊಳ್ಳುತ್ತದೆ.ಜ್ಞಾನ ನಮಗೆ ತಲುಪಿಸಬೇಕಾದರೆ ನಮಗಿಂತೆ ಹೆಚ್ಚು ಜ್ಞಾನವಂತರು ನಮಗೆ ಜ್ಞಾನ ಕೊಡಬೇಕು.ದೇವಳದ ಮುಖಾಂತರ ದೇವರನ್ನು ಧ್ಯಾನ ಮಾಡುವ ಬದಲು ಮನೆಯಲ್ಲೇ ದೇವರಿಗೆ ಶುದ್ದ ಪೂಜೆ ಸಲ್ಲಿಸಬಹುದೆಂಬ ಸಾವಿರಾರು ಪ್ರಶ್ನೆಗಳಿಗೆ ಅವಕಾಶ ಸಿಕ್ಕಿದಾಗ ನಮಗೆ ಉತ್ತರ ಕಂಡು ಕೊಳ್ಳುವವರಿಂದ ನಾವು ಉತ್ತರ ಪಡೆಯಬೇಕು.ಅಂತಹ ಸಂದರ್ಭದಲ್ಲಿ ನಮ್ಮ ಮನೆಯವರು ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡಬೇಕು.ಈ ನಿಟ್ಟಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯವರು ಕಲ್ಪನೆ ಇಟ್ಟು ಮಾಡಿದ ಕಾರ್ಯಕ್ರಮ ಉಳಿದೆಲ್ಲ ದೇವಸ್ಥಾನಗಳಿಗೂ ಪ್ರೇರಣೆಯಾಗಲಿ ಎಂದರು.ವಿದ್ವಾನ್ ವೇ|ಮೂ|ಪಂಜ ಭಾಸ್ಕರ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಶುಭ ಹಾರೈಸಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಸುಧಾ ಎಸ್ ರಾವ್ ಸ್ವಾಗತಿಸಿದರು.ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮ್‌ದಾಸ್ ಗೌಡ, ಬಿ.ಐತ್ತಪ್ಪ ನಾಯ್ಕ್, ವೀಣಾ ಬಿ.ಕೆ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ವಿದ್ವಾನ್ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here