ಕಡಬ ಎಚ್.ಎಚ್. ಮಾರ್ಕೆಟಿಂಗ್ ಸೆಂಟರ್ ನಲ್ಲಿ ಎಚ್.ಎಚ್.ಐ. ಕಂಪೆನಿಯಸ್ವದೇಶಿ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ

0

ಕಡಬ: ಇಲ್ಲಿನ ಮುಖ್ಯರಸ್ತೆಯ ಕೋರ್ಮಡಂ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಎಚ್. ಮಾರ್ಕೆಟಿಂಗ್ ಸೆಂಟರ್ ನಲ್ಲಿ ಎಚ್.ಎಚ್.ಐ.(ಹ್ಯಾಪಿ ಹೆಲ್ತ್ ಇಂಡಿಯಾ) ಕಂಪೆನಿಯ ಸ್ವದೇಶಿ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಜ.21ರಂದು ನಡೆಯಿತು.


ಸುಬ್ರಹ್ಮಣ್ಯ ಭಟ್ ಪೆರ್ಲದಕೆರೆರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಎಚ್.ಎಚ್.ಐ. ಆತೂರು ಪ್ರಾಂಚೈಸಿನ ಮಾಲಕ ಗಣೇಶ್ ಹಿರಿಂಜ ಅವರು ಕಂಪೆನಿಯ ಉತ್ಪನ್ನಗಳ ಮಾಹಿತಿ ನೀಡಿ, ವಿಷಮುಕ್ತ ಸ್ವದೇಶಿ ಉತ್ಪನ್ನಗಳನ್ನು ಎಚ್.ಎಚ್.ಐ. ಕಂಪೆನಿಯು ಮಾರುಕಟ್ಟೆಗೆ ತಂದಿದ್ದು ಇದು ನೇರ ಮಾರುಕಟ್ಟೆ ವ್ಯವಹಾರವಾಗಿರುವುದರಿಂದ ಜನರಿಗೆ ಕಡಿಮೆದರದಲ್ಲಿ ದೊರೆಯುತ್ತದೆ ಮುಂದಿನ ದಿನಗಳಲ್ಲಿ ಇಂತಹ ವ್ಯವಹಾರಗಳು ಇಲ್ಲಿನ ಜನರ ಉದ್ಯೋಗ ಸಮಸ್ಯೆ ನಿವಾರಣೆ, ಮಧ್ಯವರ್ತಿಗಳ ಮದ್ಯಪ್ರವೇಶ ಇಲ್ಲದೆ ವ್ಯವಹಾರ ನಡೆಸಲು ಸೂಕ್ತವಾಗಿದ್ದು ಜನತೆ ಇದಕ್ಕೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಎಚ್.ಎಚ್.ಐ.ನ ಮಾರ್ಕೆಟಿಂಗ್ ಎಕ್ಸ್ಕ್ಯೂಟಿವ್ ಹರಿಪ್ರಸಾದ್ ಸುಳ್ಯ, ಪ್ರಮುಖರಾದ ದೇವಿಪ್ರಸಾದ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಎಚ್.ಎಚ್. ಎಂಟರ್ ಪ್ರೈಸಸ್ ನ ಮಾಲಕ ಜಯರಾಜ್ ಸ್ವಾಗತಿಸಿ, ವಂದಿಸಿದರು

LEAVE A REPLY

Please enter your comment!
Please enter your name here