ಅನಂತಾಡಿಯಲ್ಲಿ ಚಿರತೆ ಪ್ರತ್ಯಕ್ಷ – ನಾಗರಿಕರಲ್ಲಿ ಹೆಚ್ಚಿದ ಆತಂಕ

0

ವಿಟ್ಲ: ಅನಂತಾಡಿ ಗ್ರಾಮದ ಕೊಂಬಿಲದ ಕಿನ್ನಿ ಗದ್ದೆ ಎಂಬಲ್ಲಿನ ಮನೆಯ ಬಳಿ ಜ.21ರಂದು ರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಮನೆಯ ಸಾಕುನಾಯಿಯ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ.

ವೀರಕಂಭ ಕೊಡಾಜೆ ರಸ್ತೆಯಲ್ಲಿ  ಕೊಂಬಿಲ ಎಂಬಲ್ಲಿನ ಆರಕ್ಷಕ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಸೀತಾರಾಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಒಂದುಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಹಿಂಭಾಗ ನೋಡಿದಾಗ ಚಿರತೆ ನಾಯಿಯನ್ನು ಕಚ್ಚುತ್ತಿರುವುದು ಕಂಡುಬಂತು. ಬಳಿಕ ನಾಯಿ  ಚಿರತೆಯಿಂದ ತಪ್ಪಿಸಿಕೊಂಡಿದೆ. ಬಳಿಕ ಚಿರತೆ ಕಾಡಿನಲ್ಲಿ ಮರೆಯಾಗಿದೆ ಎಂದು ಪ್ರತ್ಯಕ್ಷ ದರ್ಶಿ ಸುಂದರ್ ತಿಳಿದಿದ್ದಾರೆ. ಕೆಲದಿನಗಳ ಹಿಂದಷ್ಟೇ ಚಿರತೆ ಸಮೀಪದ ರಸ್ತೆಯಲ್ಲಿ ರಾತ್ರಿ ವೇಳೆ ಕಾಣಿಸಿಕೊಂಡಿತ್ತು, ಇದೀಗ ಮತ್ತೆ ನಾಯಿಯ ಮೇಲೆ ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಂಟ್ವಾಳ ಎಎಸ್ಪಿ ಕಛೇರಿಯಲ್ಲಿ ಉದ್ಯೋಗದಲ್ಲಿರುವ ಸೀತಾರಾಮ ರವರು ಘಟನೆ ಕುರಿತಾಗಿ ಅರಣ್ಯ ಇಲಾಖೆಗೆ ಮಾಹಿತಿನೀಡಿದ್ದು, ಚಿರತೆ ಬಂಧನಕ್ಕೆ ಪಂಜರ ಅಳವಡಿಸುವ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here