ನಗರಸಭೆ, ರೋಟರಿ ಕ್ಲಬ್ ಪುತ್ತೂರು ಪೂರ್ವ, ಸ್ವಚ್ಚ ಭಾರತ್ ಚಾರಿಟೇಬಲ್ ಟ್ರಸ್ಟ್‌ನಿಂದ ಘನ, ತ್ಯಾಜ್ಯ ವಿಲೇವಾರಿ ಯೋಜನೆ ಆರಂಭ – ಶಾಸಕರಿಂದ ಸಾಂಕೇತಿಕ ಉದ್ಘಾಟನೆ

0

ಪುತ್ತೂರು: ಡಂಪಿಂಗ್ ಯಾರ್ಡ್‌ಗೆ ಬರುವಂತಹ ಕಸಗಳಲ್ಲಿ ಶೇ.40 ರಷ್ಟು ಮೌಲ್ಯಯುತ ಕಸಗಳಾಗಿದ್ದು, ಇದನ್ನು ವಿಂಗಡಣೆ ಮಾಡುವ ಮೂಲಕ ಡಂಪಿಂಗ್ ಯಾರ್ಡ್‌ನ ಕಸದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ನಗರಭೆಯ ಸಹಯೋಗದೊಂದಿಗೆ ರೋಟರಿ ಕ್ಲಬ್ ಪುತ್ತೂರು ಪೂರ್ವ, ಸ್ವಚ್ಛ ಭಾರತ್ ಚಾರಿಟೇಬಲ್ ಟ್ರಸ್ಟ್‌ನಿಂದ ಆರಂಭಗೊಂಡಿರುವ ಘನ, ತ್ಯಾಜ್ಯ ವಿಲೇವಾರಿ ಎಂ.ಆರ್.ಎಫ್ ಯೋಜನೆಯನ್ನು ಶಾಸಕ ಸಂಜೀವ ಮಠಂದೂರು ಅವರು ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಜ.24ರಂದು ಬೆಳಿಗ್ಗೆ ಸಾಂಕೇತಿಕವಾಗಿ ಉದ್ಘಾಟಿಸಿದ್ದಾರೆ.

ಎಂ.ಆರ್.ಎಫ್ ಯೋಜನೆ ಮೂಲಕ ಶೇ.40ರಷ್ಟು ಕಸ ವಿಂಗಡಣೆ:
ಈಗಾಗಲೇ ಡಂಪಿಂಗ್ ಯಾರ್ಡ್‌ಗೆ ಬರುವ ಒಣ ಕಸದಲ್ಲಿ ಎಲ್ಲವು ಮಿಶ್ರವಾಗಿ ಬರುತ್ತದೆ. ಇದರಲ್ಲಿ ಬಹುತೇಕ ಮರುಬಳಕೆಯ ವಸ್ತುಗಳಾಗಿವೆ. ಹಾಗಾಗಿ ಎಂ.ಆರ್.ಎಫ್( ಮೆಟಿರೀಯಲ್ ರಿಕವರಿ ಫೆಸಿಲಿಟಿ ಸೆಗ್ರಿಗೇಶನ್) ಮೂಲಕ ಹಸಿ ಮತ್ತು ಒಣ ಕಸಗಳನ್ನು ವಿಂಗಡಣೆ ಮಾಡಿ. ಒಣ ಕಸದಿಂದ ಶೇ.40ರಷ್ಟು 9 ವಿಭಾಗ ಮಾಡಿ ಆ ವಿಭಾಗದಲ್ಲಿ ಮತ್ತೆ ಏಳೆಂಟು ಉಪವಿಭಾಗ ಮಾಡಿ ಕಸ ವಿಂಗಡಣೆ ಮಾಡಲಾಗುತ್ತದೆ. ಪೇಪರ್, ಪ್ಲಾಸ್ಟಿಕ್, ಮೆಟಲ್, ಗ್ಲಾಸ್, ಇ-ವೇಸ್ಟ್, ಮರದ ತುಂಡು, ರಬ್ಬರ್, ಬಟ್ಟೆಗಳು ಮತ್ತು ಸ್ಪೆಷಲ್ ಎಂಬ ವಿಭಾಗ. ಅದರಲ್ಲಿ ಹಲವು ಉಪವಿಭಾಗ ಮಾಡಲಾಗಿದೆ. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತ ಮಧು ಎಸ್ ಮನೋಹರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಸದಸ್ಯ ಶೀನಪ್ಪ ನಾಯ್ಕ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ರೋಟರಿ ಪೂರ್ವ ಸ್ವಚ್ಛ ಭಾರತ ಯೋಜನಾ ಟ್ರಸ್ಟ್ ನಿರ್ದೇಶಕ ಡಾ| ರಾಜೇಶ್ ಬೆಜ್ಜಂಗಳ, ರಾಧಾಕೃಷ್ಣ, ಸ್ಯಾನಿಟರಿ ಸೂಪರ್‌ವೈಸರ್ ಅಮಿತ್, ಪೌರ ಕಾರ್ಮಿಕರ ಮೇಲ್ವಿಚಾರಕ ಐತ್ತಪ್ಪ ಮತ್ತು ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ಶೇ.40ರಷ್ಟು ಕಸಗಳಿಗೆ ಮೌಲ್ಯವಿದೆ:
ಡಂಪಿಂಗ್ ಯಾರ್ಡ್‌ನಲ್ಲಿ ಈಗಾಗಲೇ ಮೆಟೇರಿಯಲ್ ರಿಕವರಿ ಫೆಸಿಲಿಟಿಯ ಮೂಲಕ ಸುಮಾರು ೪೦ರಷ್ಟು ಕಸಗಳನ್ನು ಬೇರೆ ಬೇರೆಯಾಗಿ ಮಾಡಲಾಗುತ್ತಿದೆ. ಈ ಕಸಗಳಿಗೆ ಮೌಲ್ಯವಿದೆ. ಈ ರೀತಿಯಾಗಿ ಕಸವನ್ನು ವಿಭಜನೆ ಮಾಡುವ ಮೂಲಕ ಡಂಪಿಂಗ್ ಯಾರ್ಡ್‌ನ ಕಸದ ಪ್ರಮಾಣವನ್ನು ಕಡಿಮೆ ಮಾಡಬಹುದು. ಪರಿಸರಕ್ಕೂ ಆಗುವ ಹಾನಿಯನ್ನು ತಪ್ಪಿಸಲು ಸಾಧ್ಯವಿದೆ. ಇದೊಂದು ಮಾದರಿ ಕಾರ್ಯಕ್ರಮ ಆಗಲಿದೆಡಾ| ರಾಜೇಶ್ ಬೆಜ್ಜಂಗಳ ನಿರ್ದೇಶಕರು ರೋಟರಿ ಪೂರ್ವ ಸ್ವಚ್ಛ ಭಾರತ ಯೋಜನಾ ಟ್ರಸ್ಟ್

LEAVE A REPLY

Please enter your comment!
Please enter your name here