34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

0

  • ಸುದ್ದಿ ಜನಾಂದೋಲನಕ್ಕೆ ಬೆಂಬಲ, ಭ್ರಷ್ಟಾಚಾರ ಭೂತ ಪ್ರತಿಕೃತಿ ದಹನ

ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮ ಪಂಚಾಯತ್‌ನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್. ಎನ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಹಾಕಲಾಗಿ, ಭ್ರಷ್ಠಾಚಾರ ಭೂತದ ಪ್ರತಿಕೃತಿ ದಹಿಸಲಾಯಿತು. ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ “ಪ್ರತಿದಿನ ಸ್ವಚ್ಛತೆ ಕಡೆಗೆ ಹತ್ತು ಹೆಜ್ಜೆ” ಆಂದೋಲನವನ್ನು ಆಯೋಜಿಸಲಾಯಿತು. ಏಕ ಬಳಕೆಯ ಪ್ಲಾಸ್ಟಿಕ್ ನಿರ್ಬಂದ ವಿಧಿಸುವಿಕೆ ಹಾಗೂ ಸ್ವಚ್ಛತಾ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.


ಕಾರ್‍ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ವಪ್ನ ಜೀವನ್, ಸದಸ್ಯರುಗಳಾದ ವಿಜಯಕುಮಾರ್, ರಮೇಶ್ ನಾಯ್ಕ್, ವೇದಾವತಿ, ಸುಜಾತ ಆರ್. ರೈ, ತುಳಿಸಿ, ಗೀತಾ ಮತ್ತು
ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಯ್ಯ ಸ್ವಾಗತಿಸಿ, ಸಾರಿಕಾ ವಂದಿಸಿದರು.

 

LEAVE A REPLY

Please enter your comment!
Please enter your name here