ಪುತ್ತೂರು:ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ಹಾಗೂ ಸಿಝ್ಲರ್ ಫ್ರೆಂಡ್ಸ್ ಇದರ ಸಕ್ರಿಯ ಸದಸ್ಯರಾಗಿರುವ ದರ್ಬೆ ಸಿ.ಟಿ.ಒ ರಸ್ತೆ ನಿವಾಸಿ ಶ್ರೀನಾಥ್ ಆಚಾರ್ಯ(41ವ.)ರವರು ಹೃದಯಾಘಾತದಿಂದ ಜ.28 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಮೃತ ಶ್ರೀನಾಥ್ ಆಚಾರ್ಯರವರು ಸಿಝ್ಲರ್ ಫ್ರೆಂಡ್ಸ್ ಗೆಳೆಯನೊಂದಿಗೆ ಫೋನಿನಲ್ಲಿ ಮಾತಾಡುವ ಸಂದರ್ಭದಲ್ಲಿ ಫೋನ್ ಸಡನ್ನಾಗಿ ಕಟ್ಟಾಯಿತು. ಕೂಡಲೇ ಸಿಝ್ಲರ್ ಫ್ರೆಂಡ್ಸ್ ಗೆಳೆಯರು ಮನೆಗೆ ಹೋಗಿ ನೋಡಿದಾಗ ಶ್ರೀನಾಥ್ ರವರು ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಶ್ರೀನಾಥ್ ರವರನ್ನು ಹತ್ತಿರದ ಧನ್ವಂತರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಅವಾಗಲೇ ಶ್ರೀನಾಥ್ ರವರ ಅಸುನೀಗಿರುತ್ತಾರೆ.
ಮೃತ ಶ್ರೀನಾಥ್ ಆಚಾರ್ಯರವರು ಮೃದು ಸ್ವಭಾವದವರಾಗಿದ್ದು, ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಫ್ರೆಂಡ್ಸ್ ನಡೆಸುತ್ತಿದ್ದ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಪುತ್ತೂರು ಪ್ರೀಮಿಯಲ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಶ್ರೀನಾಥ್ ರವರು ಸಿಝ್ಲರ್ ಫ್ರೆಂಡ್ಸ್ ತಂಡದ ಮಾಲಕರಾಗಿ ಗುರುತಿಸಿಕೊಂಡಿದ್ದರು.
ಶ್ರೀನಾಥ್ ರವರ ಮೃತದೇಹ ಧನ್ವಂತರಿ ಆಸ್ಪತ್ರೆಯಲ್ಲಿದ್ದ ಸಂದರ್ಭ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ,
,ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಸಿಝ್ಲರ್ ಸಾಮೆತ್ತಡ್ಕದ ಪ್ರಸನ್ನ ಕುಮಾರ್ ಶೆಟ್ಟಿ, ಸೂರಜ್ ಶೆಟ್ಟಿ ಸಾಮೆತ್ತಡ್ಕ, ಉದ್ಯಮಿ ಶಿವರಾಂ ಆಳ್ವ ಬಳ್ಳಮಜಲುಗುತ್ತು, ರೋಶನ್ ರೈ ಬನ್ನೂರು, ಗಂಗಾಧರ ಶೆಟ್ಟಿ ಕೆಯ್ಯೂರು ಸಹಿತ ಹಲವರು ಆಗಮಿಸಿ ದುಃಖ ವ್ಯಕ್ತಪಡಿಸಿರುತ್ತಾರೆ. ಈ ಸಂದರ್ಭದಲ್ಲಿ ಸಾಮೆತ್ತಡ್ಕ ಸಿಝ್ಲರ್ ಫ್ರೆಂಡ್ಸ್ ಗೆಳೆಯರ ದಂಡೇ ಧನ್ವಂತರಿ ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿ ಆಪ್ತ ಗೆಳೆಯನನ್ನು ಕಳಕೊಂಡೆವಲ್ಲ ಎಂದು ದುಃಖಭರಿತರಾಗಿರುವುದು ಕಂಡು ಬಂದಿತ್ತು.
ಮೃತ ಶ್ರೀನಾಥ್ ಆಚಾರ್ಯರವರು ತಂದೆ ಮಂಜುನಾಥ್ ಆಚಾರ್ಯ, ಪತ್ನಿ ರಶ್ಮಿ, ಪುತ್ರಿ ದೃಷ್ಟಿ, ಪುತ್ರ ಶುಭನ್, ಅಣ್ಣ ಪ್ರೇಮನಾಥ್, ಸಹೋದರಿಯರಾದ ನಂದ, ಪ್ರಭಾವರನ್ನು ಅಗಲಿದ್ದಾರೆ.