ಗೆಣಸಿನಕುಮೇರು ಬಾಬು ಗೌಡ-ಯಮುನಾ ದಂಪತಿಯ ವೈವಾಹಿಕ ಸುವರ್ಣಮಹೋತ್ಸವ, ಹುಟ್ಟುಹಬ್ಬ ಆಚರಣೆ

0

ಪುತ್ತೂರು: ಆರ್ಯಾಪು ಗ್ರಾಮದ ಗೆಣಸಿನಕುಮೇರು ಬಾಬು ಗೌಡ ಮತ್ತು ಯಮುನಾ ದಂಪತಿಯ ವೈವಾಹಿಕ ಸುವರ್ಣ ಮಹೋತ್ಸವ ಹಾಗೂ ಬಾಬು ಗೌಡರ 80ನೇ ಹುಟ್ಟುಹಬ್ಬ ಆಚರಣೆ ಜ.30ರಂದು ಗೆಣಸಿನಕುಮೇರು ಮನೆಯಲ್ಲಿ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ವೆಂಕಟರಮಣ ದೇವರ ಸೇವೆ ನಡೆಯಿತು. ವೇ.ಮೂ ಗೋಪಾಲಕೃಷ್ಣ ಅಡಿಗ ಪೆರ್ಲ ಪೂಜಾ ಕಾರ್ಯಕ್ರಮ ನೆರವೇರಿಸಿದರು.


ಬಾಬು ಗೌಡರ ಪುತ್ರರಾದ ದಾಮೋದರ ಗೌಡ, ಚೆನ್ನಪ್ಪ ಗೌಡ, ಅಶೋಕ ಗೌಡ, ರವಿ ಗೌಡ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸೊಸೆಯಂದಿರಾದ ಪ್ರೇಮಾ, ರೇಶ್ಮ, ಭಾರತಿ, ಚೈತ್ರ, ಪುತ್ರಿಯರಾದ ಪುಷ್ಪಲತಾ, ಮಂಜುಳಾ, ಅಳಿಯ ಪದ್ಮಯ ಗೌಡ ಸಹಕರಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ., ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ನಿರ್ದೇಶಕ ಪ್ರವೀಣ್ ಕುಂಟ್ಯಾನ, ಒಕ್ಕಲಿಗ ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಶ್ರೀಧರ ಗೌಡ ಕಣಜಾಲು, ಲಿಂಗಪ್ಪ ಗೌಡ ತೆಂಕಿಲ, ಆನಂದ ಗೌಡ ಮೂವಪ್ಪು, ಉಮೇಶ್ ಗೌಡ ಸಹಿತ ಹಲವಾರು ಮಂದಿ ಆಗಮಿಸಿ ಶುಭಹಾರೈಸಿದರು.

 

LEAVE A REPLY

Please enter your comment!
Please enter your name here