ಫೆ.14: ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ‘ಕಡ್ಯ ಫ್ಯಾಮಿಲಿ ಮೀಟ್’-ಆಮಂತ್ರಣ ಬಿಡುಗಡೆ

0

ಪುತ್ತೂರು: ಸರ್ವೆ ಗ್ರಾಮದ ‘ಕಡ್ಯ ಫ್ಯಾಮಿಲಿ ಮೀಟ್’ ಫೆ.14ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದ್ದು ಅದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಇಬ್ರಾಹಿಂ ಕಡ್ಯ ಅವರ ನಿವಾಸದಲ್ಲಿ ಜ.31ರಂದು ನಡೆಯಿತು. ಗೌರವಾಧ್ಯಕ್ಷ ಇಬ್ರಾಹಿಂ ಕಡ್ಯ, ಅಧ್ಯಕ್ಷ ಯೂಸುಫ್ ಹಾಜಿ ಕಡ್ಯ, ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ, ಅನೀಸ್ ಕೌಸರಿ ವೀರಮಂಗಲ, ರಹೀಂ ರೆಂಜಲಾಡಿ, ಅಬ್ದುಲ್ ಅಝೀಝ್ ರೆಂಜಲಾಡಿ, ಫಾರೂಕ್ ವೀರಮಂಗಲ, ಯೂಸುಫ್ ರೆಂಜಲಾಡಿ, ಅಝರುದ್ದೀನ್ ಕೂಡುರಸ್ತೆ ಉಪಸ್ಥಿತರಿದ್ದರು.

ಕಡ್ಯ ಫ್ಯಾಮಿಲಿ ಮೀಟ್ ಕುಟುಂಬ ಸಂಗಮ ಕಾರ್ಯಕ್ರಮ ಫೆ.14ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ಬೆಳಿಗ್ಗೆ ಗಂಟೆ 9ಕ್ಕೆ ಪ್ರಾರಂಭಗೊಳ್ಳಲಿದ್ದು ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಯೂಸುಫ್ ಹಾಜಿ ಕಡ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here