ಪುತ್ತೂರು: ರಸ್ತೆ ಅಗಲೀಕರಣಕ್ಕಾಗಿ ಟಿಸಿ ಸ್ಥಳಾಂತರ, ವಿದ್ಯುತ್ ಲೈನ್ ನಿರ್ವಹಣಾ ಹಾಗೂ ತುರ್ತು ಕಾಮಗಾರಿ ನಿಮಿತ್ತ 110/33/11 ಕೆ.ವಿ ಮತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ ಮತ್ತು ವಾಟರ್ ಸಪ್ಲೈ ಫೀಡರ್‌ನಲ್ಲಿ ಫೆ.2(ಗುರುವಾರ)ರಂದು ಪೂರ್ವಾಹ್ನ 9:30 ರಿಂದ ಅಪರಾಹ್ನ 6ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11 ಕೆ.ವಿ ಮತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಬೆಳ್ಳಿಪ್ಪಾಡಿ ಗ್ರಾಮ, ಕೋಡಿಂಬಾಡಿ, ಗ್ರಾಮ, ಬನ್ನೂರು ಗ್ರಾಮ ಮತ್ತು ಪಡ್ನೂರು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.