ಫೆ. 4: ಗಲ್ಫ್ ಟೂರ‍್ಸ್ ಆಂಡ್ ಟ್ರಾವೆಲ್ಸ್ ಸಂಸ್ಥೆಯಿಂದ ಹಜ್‌‌ ಯಾತ್ರಿಕರಿಂದ ಪಾಸ್‌ಪೋರ್ಟು ಸ್ವೀಕಾರ ಸಮಾರಂಭ

0

ಪುತ್ತೂರು:ಪುತ್ತೂರಿನಲ್ಲಿ ಕಳೆದ 16 ವರ್ಷಗಳಿಂದ ಹಜ್ ಮತ್ತು ಉಮ್ರಾ ಯಾತ್ರಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಷ್ಠಿತ ಗಲ್ಫ್ ಟೂರ‍್ಸ್ ಆಂಡ್ ಟ್ರಾವೆಲ್ಸ್ ಸಂಸ್ಥೆಯ ವತಿಯಿಂದ ಫೆ.4 ರಂದು  2023ನೇ ಸಾಲಿನ ಹಜ್ ಯಾತ್ರಿಕರಿಂದ ಪಾಸ್‌ಪೋರ್ಟು ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಮಾಲಕ ಸುಲೈಮಾನ್ ಹಾಜಿಯವರು ತಿಳಿಸಿದ್ದಾರೆ.

 

              ಅಸ್ದಯ್ಯದ್ ಅಹ್ಮದ್ ಪೂಕೋಯಾ ತಂಙಳ್

ಪುತ್ತೂರು ಬದ್ರಿಯಾ ಮಸೀದಿಯ ಮದ್ರಸ ಹಾಲ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಪುತ್ತೂರು ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಸ್ಸಯ್ಯದ್ ಅಹ್ಮದ್ ಪೂಕೋಯಾ ತಂಙಳ್ ರವರು ಯಾತ್ರಾರ್ಥಿಗಳಿಂದ ಪಾಸ್‌ಪೋರ್ಟು ಸ್ವೀಕಾರಕ್ಕೆ ಚಾಲನೆ ನೀಡಲಿದ್ದಾರೆ. ಖ್ಯಾತ ವಿದ್ವಾಂಸ ಮಹ್‌ಮೂದುಲ್ ಫೈಝಿ ಓಲೆಮುಂಡೋವುರವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಯಾತ್ರಾರ್ಥಿಗಳು ಪಾಸ್‌ಪೋರ್ಟು ನೀಡುವುದು

2023ರಲ್ಲಿ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಕಾರ್ಯಕ್ರಮಕ್ಕೆ ಬರುವ ವೇಳೆ ತಮ್ಮ ಪಾಸ್‌ಪೋರ್ಟನ್ನು ತಂದು ಅಸ್ಸಯ್ಯಿದ್ ಅಹ್ಮದ್ ಪೂಕೋಯಾ ತಂಙಳ್‌ರವರ ಕೈಯ್ಯಲ್ಲಿ ನೀಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. 16 ವರ್ಷಗಳಲ್ಲಿ ನೂರಾರು ಹಜ್‌ಯಾತ್ರಿಕರು ಮತ್ತು ಸಾವಿರಾರು ಉಮ್ರಾ ಯಾತ್ರಿಕರು ಸಂಸ್ಥೆಯ ಮೂಲಕ ತೆರಳಿದ್ದು, ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರ್ವ ಸಿದ್ದತೆಗಳೊಂದಿಗೆ ಯಾತ್ರಾ ವ್ಯವಸ್ಥೆಯನ್ನು ಸಂಸ್ಥೆಯು ಮಾಡುತ್ತಿದೆ. ಯತ್ರಾರ್ಥಿಗಳಿಗೆ ಅಮೀರ್ ಅಥವಾ ಮಾರ್ಗದರ್ಶಕರಾಗಿ ಸಿರಾಜುದ್ದೀನ್ ಫೈಝಿ ಹಾಗೂ ನಝೀರ್ ಅಹ್ಮದ್ ಸಅದಿಯವರು ಜೊತೆಗಿದ್ದು ಪವಿತ್ರ ಮಕ್ಕಾ ಮತ್ತು ಮದೀನಾಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಯಾತ್ರಾರ್ಥಿಗಳಿಗೆ ನೀಡಲಿದ್ದಾರೆ. ಕೆಲವೊಂದು ಪುಣ್ಯ ಸ್ಥಳಗಳಲ್ಲಿ ಆಧ್ಯಾತ್ಮ ಮಜ್ಲಿಸ್ ಕೂಡಾ ನಡೆಯಲಿದೆ. ಯಾತ್ರೆಗೆ ಮುನ್ನ ಪೂರ್ಣ ತರಬೇತಿಯೊಂದಿಗೆ ಯತ್ರಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಹಜ್ ಯಾತ್ರೆಯಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಸಂಸ್ಥೆಯು ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ ಎಂದು ಮಾಲಕರು ತಿಳಿಸಿದ್ದಾರೆ.

ಫೆ. 13 ರಂದು ಉಮ್ರಾ ತರಬೇತಿ

ಮುಸ್ಲಿಮರ ಪವಿತ್ರ ಮಾಸವಾದ ರಜಬ್ ತಿಂಗಳಲ್ಲಿ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳಿಗೆ ಫೆ. 13 ರಂದು ತರಬೇತಿಯನ್ನು ಆಯೋಜಿಸಲಾಗಿದೆ. ಮಿಹ್‌ರಾಜ್ ದಿನದಂದು ವಿತ್ರ ಮಕ್ಕಾದಲ್ಲಿ ವಾಸ್ತವ್ಯ ಹೂಡಲಿದ್ದು ಅಮೀರ್ ಆಗಿ ಸಿರಾಜುದ್ದೀನ್ ಫೈಝಿ ತಂಡದ ಜೊತೆ ತೆರಳಲಿದ್ದಾರೆ.

LEAVE A REPLY

Please enter your comment!
Please enter your name here