ಪುತ್ತೂರು: ಫೆ. 4ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಕಲ್ಲೇಗ ಶ್ರೀ ಕಲ್ಕುಡ ದೈವದ ವಾರ್ಷಿಕ ಜಾತ್ತೋತ್ಸವದ ಹಿನ್ನೆಲೆಯಲ್ಲಿ ಭಕ್ತರಿಗೆ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮ ಫೆ. 1ರಂದು ಸಂಜೆ ಪುತ್ತೂರು ಪೇಟೆಯಲ್ಲಿ ನಡೆಯಿತು.
ದರ್ಬೆ ವೃತ್ತದಿಂದ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಮೂಲಕ ಕಲ್ಲೇಗ ದೈವಸ್ಥಾನದ ತನಕ ಪಾದಯಾತ್ರೆ ಮೂಲಕ ತೆರಳಲಾಯಿತು. ಕೊಂಬು ಕಹಳೆಯೊಂದಿಗೆ, ಕೇಸರಿ ಧ್ವಜಗಳು ಪತ್ರ ವಿತರಣೆಗೆ ಮೆರುಗು ನೀಡಿತ್ತು. ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಶಿವರಾಮ ಸಪಲ್ಯ, ನವೀನ್ ಕುಮಾರ್, ವಸಂತ ಕಾರೆಕ್ಕಾಡು, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕಲ್ಲೇಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ ಕಲ್ಲೇಗ, ಮೀನಾಕ್ಷಿ ಗೌಡ, ಸುನಿತ, ಪ್ರಶಾಂತ್ ಎಸ್, ರಾಘವೇಂದ್ರ ಪ್ರಭು, ಮಾಧವ ಪೂಜಾರಿ ಪಟ್ಲ, ಪ್ರಸಾದ್ ಬೀಡಿಗೆ, ಬಿ.ರವಿಕಿರಣ ಊರಿನ ಹಿರಿಯರಾದ ಚಂದ್ರಶೇಖರ್ ಗೌಡ ಕಲ್ಲೇಗ, ನಾರಾಯಣ ಗೌಡ ಕಲ್ಲೇಗ, ಗಿರಿಯಪ್ಪ ಗೌಡ ಪೋಳ್ಯ, ಮುರಳಿ ಕಲ್ಲೇಗ, ಮನೋಹರ್ ಕಲ್ಲೇಗ, ಸತೀಶ್ ಶೆಟ್ಟಿ, ಲೋಕೇಶ್ ಅಜೇಯನಗರ, ನಾರಾಯಣ ಮೊಗೇರ, ಗಿರಿಯಪ್ಪ ಗೌಡ, ಕೃಷ್ಣಪ್ಪ ಗೌಡ, ದಿವಾಕರ, ಶಶಿಧರ್ ಪೋಳ್ಯ ಸಹಿತ ಹಲವಾರು ಮಂದಿ ಆಮಂತ್ರಣ ವಿತರಣಾ ಮೆರವಣಿಗೆಯಲ್ಲಿ ಪಾಲ್ಗೊಂಡರು.