ಮುರದಲ್ಲಿ ಸರಣಿ ಕಳ್ಳತನ ! ನಗದು ಸಹಿತ ಸೊತ್ತುಗಳ ಕಳವು

0

ಪುತ್ತೂರು: ಮುರ ಮಾಧವ ಕಾಂಪ್ಲೆಕ್ಸ್‌ನಲ್ಲಿರುವ ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತು ಪಕ್ಕದಲ್ಲಿರುವ ಮಹಾಲಿಂಗೇಶ್ವರ ಇಲೆಕ್ಟ್ರಿಕ್ ಅಂಗಡಿಗೆ ಕಳ್ಳರು ನುಗ್ಗಿ ನಗದು ಮತ್ತು ಸೊತ್ತುಗಳನ್ನು ಕಳವು ಮಾಡಿದ ಘಟನೆ ಫೆ. 2ರಂದು ಬೆಳಕಿಗೆ ಬಂದಿದೆ.

ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆಯ ರೋಲಿಂಗ್ ಶಟರ್ ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು ರೂ. 35ಸಾವಿರ ನಗದು, ಲ್ಯಾಪ್‌ಟಾಪ್, ಕಂಪ್ಯೂಟರ್, ಇನ್‌ವರ್ಟರ್ ಮತ್ತು ಪಕ್ಕದಲ್ಲಿರುವ ಕೆದಿಲದ ಸಂದೀಪ್ ಎಂಬವರ ಮಾಲಕತ್ವದ ಇಲೆಕ್ಟ್ರಿಕ್ ಅಂಗಡಿಯಿಂದ ಸುಮಾರು 10ಕ್ಕೂ ಅಧಿಕ ಫ್ಯಾನ್‌ಗಳು ಇತರ ಸೊತ್ತುಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here