ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರದಲ್ಲಿ ನಡೆಯುತ್ತಿರುವ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಕುಂಬ್ರ ವರ್ತಕರ ಸಂಘದ ವತಿಯಿಂದ ರೂ.2 ಸಾವಿರ ಧನ ಸಹಾಯ ನೀಡಲಾಯಿತು. 2 ದಿನಗಳ ಕಾಲ ನಡೆದ ಈ ಕಲಿಕಾ ಮಕ್ಕಳ ಹಬ್ಬದಲ್ಲಿ 10 ಶಾಲೆಯ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ಕೆಪಿಎಸ್ ಕಾರ್ಯಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನರವರಿಗೆ ಸಹಾಯಧನ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೆಪಿಎಸ್ ಉಪಪ್ರಾಂಶುಪಾಲೆ ಮಮತಾ, ಮುಖ್ಯಗುರು ನೀನಾ ಕುವೆಲ್ಲೋ, ಸಿಆರ್‌ಪಿ ಶಶಿಕಲಾ, ಶಿಕ್ಷಕಿಯರಾದ ಜೂಲಿಯಾನ ಮೊರಸ್, ದೇವಕಿ ಎಂ, ವಿನೀಶಾ, ಪ್ರಶಾಂತಿ ಬಿ, ವಿದ್ಯಾ ಎನ್, ಚಂದ್ರಕಲಾ ಪಿ, ಶಿವಪ್ಪ ರಾಥೋಡ್, ಅತಿಥಿ ಶಿಕ್ಷಕಿ ಶಶಿ, ಶೋಭಾ ಕೆ, ವರ್ತಕರ ಸಂಘದ ಮಾಜಿ ಅಧ್ಯಕ್ಷರುಗಳಾದ ಎಸ್.ಮಾಧವ ರೈ ಕುಂಬ್ರ, ದಿವಾಕರ ಶೆಟ್ಟಿ, ನಾರಾಯಣ ಪೂಜಾರಿ ಕುರಿಕ್ಕಾರ, ಪ್ರ.ಕಾರ್ಯದರ್ಶಿ ಭವ್ಯ ರೈ, ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಸದಸ್ಯರಾದ ಸುರೇಶ್ ಕುಮಾರ್ ಸುಶಾ ಮತ್ತಿತರರು ಉಪಸ್ಥಿತರಿದ್ದರು.