ಫೆ.5: ಶಾಂತಿಗೋಡು ಕೈಂದಾಡಿ ಶಿರಾಡಿ ದೈವಸ್ಥಾನದಲ್ಲಿ ಶಿರಾಡಿ, ಪರಿವಾರ ದೈವಗಳ ನೇಮೋತ್ಸವ

0

ಪುತ್ತೂರು: ಶಾಂತಿಗೋಡು ಗ್ರಾಮದ ಕೈಂದಾಡಿ ಶಿರಾಡಿ ದೈವಸ್ಥಾನದಲ್ಲಿ ಫೆ.5ರಂದು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಫೆ.3ರಂದು ಶ್ರಿಶಾಸ್ತಾವು ದೇವಸ್ಥಾನದಲ್ಲಿ ರಂಗಪೂಜೆ, ಫೆ.4ರಂದು ಸಂಜೆ ಭಜನೆ, ರಾತ್ರಿ ಸರೋಳಿಯಿಂದ ಕಲ್ಕುಡ ಕಲ್ಲುರ್ಟಿ ದೈವಗಳ ಭಂಡಾರ ಬರುವುದು, ಶಿರಾಡಿ ದೈವದ ಭಂಡಾರ ತೆಗೆಯುವುದು, ಫೆ.5ರಂದು ಬೆಳಿಗ್ಗೆ ದೈವಗಳ ನೇಮೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶಾಂತಿಗೋಡು ದೊಡ್ಡಮನೆಯಿಂದ ಮಾರಿ ಹೊರಡುವುದು ನಡೆಯಲಿದೆ.

LEAVE A REPLY

Please enter your comment!
Please enter your name here