ರಾಮಕುಂಜ ದೇವಸ್ಥಾನದ ವಾರ್ಷಿಕ ಜಾತ್ರೆ-ಧ್ವಜಾರೋಹಣ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಫೆ.2ರಂದು ರಾತ್ರಿ ಧ್ವಜಾರೋಹಣ ನಡೆಯಿತು.

ಧ್ವಜಾರೋಹಣದ ಬಳಿಕ ದೇವರ ಬಲಿಹೊರಟು ಉತ್ಸವ, ಕಟ್ಟೆಪೂಜೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕೀಮಠ, ಉತ್ಸವ ಸಮಿತಿ ಗೌರವಾಧ್ಯಕ್ಷ ಮಾಧವ ಆಚಾರ್ಯ ಇಜ್ಜಾವು, ಕಾರ್ಯದರ್ಶಿ ಸತೀಶ ಭಟ್ ಎಂ., ಉಪಾಧ್ಯಕ್ಷರಾದ ದಿವಾಕರ ರಾವ್ ಪಂಚವಟಿ, ಧರ್ಮಪಾಲ ರಾವ್ ಕಜೆ, ರಾಮ ಭಟ್ ಬೃಂದಾವನ, ತಿಮ್ಮಪ್ಪ ಗೌಡ ಆನ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರ್ಚಕ ಅನಂತ ಉಡುಪ, ರಮೇಶ್ ರೈ ರಾಮಜಾಲು, ಯೋಗೀಶ ಕುಲಾಲ್ ಅಜ್ಜಿಕುಮೇರು, ಜನಾರ್ದನ ಗೌಡ ಬಾಂತೊಟ್ಟು, ಗಿರಿಯಪ್ಪ ಗೌಡ ಆನ, ಸಂಜೀವ ಶಾರದಾನಗರ, ಶೈಲಜಾ ಆಳ್ವ ಗುತ್ತು, ವಿಮಲಾ ಕರುಣಾಕರ ಆರಿಂಜ, ಉತ್ಸವ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here